ಚಿಕ್ಕಮಗಳೂರು ಸಮೀಪದ ಮಲ್ಲಂದೂರು ರಸ್ತೆಯಲ್ಲಿ ಮಹಿಳೆಯರು ಸೇರಿದಂತೆ ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ ರಸ್ತೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಜಿಲ್ಲಾ ಆಮ್‌ಆದ್ಮಿ ಪಕ್ಷವು ಒತ್ತಾಯಿಸಿದೆ.
Chikkamagalu ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಮನವಿ ಸಲ್ಲಿಸಿದ ಎಎಪಿ ಮುಖಂಡರುಗಳು ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವೃದ್ದರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲಂದೂರು ರಸ್ತೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಉಪ್ಪಳ್ಳಿಯಿಂದ ಮಲ್ಲಂದೂರು ರಸ್ತೆಯವರೆಗೆ ಬೆಳಿಗಿನಿಂದ ಸಂಜೆಯವರೆಗೆ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ. ಅವರಿಗೆ ಶೌಚಾಲಯ ಅವಶ್ಯವಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.
ನಗರಸಭಾ ವತಿಯಿಂದ ಹಿಂದೆ ಮಲ್ಲಂದೂರು ರಸ್ತೆಯ ಭಾರತ್ ಮಟನ್ ಸ್ಟಾಲ್ ಪಕ್ಕದಲ್ಲಿ ಒಂದು ಶೌಚಾಲಯವಿತ್ತು. ಇದೀಗ ನಗರಸಭೆಯ ಕೆಲವು ಖಾಸಗೀಯವರಿಗೆ ಅದನ್ನು ಮಾರಾಟ ಮಾಡಿರುವುದನ್ನು ಎಎಪಿ ತೀವ್ರವಾಗಿ ಖಂಡಿಸಿದ್ದು ಕೂಡಲೇ ಆ ಜಾಗವನ್ನು ಖುಲ್ಲಾಪಡಿಸಿ ಶೌಚಾಲಯ ನಿರ್ಮಾಣಕ್ಕೆ ಮುಂದಾ ಯಗಬೇಕು ಎಂದರು.
ನಗರದ ಸಹರಾ ಶಾದಿಮಹಲ್‌ನ ಸಮೀಪದ ೬೦ ಅಡಿ ರಸ್ತೆಯಲ್ಲಿ ಸರ್ಕಾರಿ ಜಾಗ ಮತ್ತು ರಾಜಕಾಲುವೆ ಗೆ ಅಡ್ಡಲಾಗಿ ಖಾಸಗೀಯವರು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಇದನ್ನು ನಗರಸಭೆ ಅಥವಾ ಪ್ರಾಧಿಕಾರದವರಾಗಲೀ ತಡೆಯದೇ ಇರುವುದು ಗಮನಿಸಿದರೆ ಅವರು ಕೂಡಾ ಶಾಮೀಲಾಗಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.
ಮಲ್ಲಂದೂರು ರಸ್ತೆಯ ಬದ್ರಿಯ ವೃತ್ತದಿಂದ ಚಿತಾಗಾರದವರೆಗೆ ನೂರಾರು ಮನೆಗಳಿದ್ದು ಇವರಿಗೆ ಇದು ವರೆಗೂ ಒಳಚರಂಡಿ ಕೆಲಸವಾಗಿರುವುದಿಲ್ಲ ಹಾಗೂ ಒಳಚರಂಡಿ ನೀರು ಹಳ್ಳಗಳ ಮೂಲಕ ಯಗಚಿ ನದಿಗೆ ಸೇರಿ ನಂತರ ಅದೇ ನೀರನ್ನು ಸಾರ್ವಜನಿಕರು ಕುಡಿಯುವ ಪರಿಸ್ಥಿತಿ ಬಂದೋದಗಿದೆ. ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಕೂಡಲೇ ಶೌಚಾಲಯದ ಜಾಗವನ್ನು ಖಾಸಗೀಯವರಿಂದ ಖುಲ್ಲಾಪಡಿಸಬೇಕು. ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು, ಮನೆಗಳಿಗೆ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಒಳಚರಂಡಿ ನೀರನ್ನು ನದಿಗೆ ಹರಿಸ ದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಎಎಪಿ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾ ಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್,ಮುಖಂಡ ಎಂ.ಪಿ.ಈರೇಗೌಡ ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.