Norbert D’Souza ನಾವೆಲ್ಲರೂ ಒಂದಾಗಿ ಊರು ಕಟ್ಟುವ ಕಾಯಕದಲ್ಲಿ ನಿರತರಾಗೋಣ, ಒಂದೇ ಸಮುದಾಯ, ಒಂದೇ ದೇಶದವರಾಗಿ, ಒಂದಾಗಿ ಎಲ್ಲರೂ ಸಾಗರವನ್ನು ಬೆಳೆಸೋಣ. ಸಾಗರದ ಶ್ರೀಮಂತಿಕೆ ಹೆಚ್ಚಿಸುವ ಕೆಲಸ ಜಾತ್ರೆಯಿಂದ ಆಗಬೇಕು ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು.
ಸಾಗರ ನಗರಸಭೆ ಆವರಣದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆ ಸಮಿತಿಯಿಂದ ನಿರ್ಮಿಸಿದ್ದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಆಶಯ ನುಡಿಗಳನ್ನಾಡಿದರು.
ಸಾಗರ ಪಟ್ಟಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ವಾಣಿಜ್ಯ ಕೇಂದ್ರವಾಗಿ ಸಾಗರ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಎಲ್ಲರನ್ನೂ ಒಂದುಗೂಡಿಸಿ ಸಾಗರದ ಶ್ರೀಮಂತಿಕೆ ವೃದ್ಧಿಸುವ ಕಾರ್ಯವನ್ನು ಎಲ್ಲ ಜನರು ಒಟ್ಟುಗೂಡಿ ಮಾಡಬೇಕಿದೆ ಎಂದು ತಿಳಿಸಿದರು.
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ನಗರಸಭೆ, ತಾಲೂಕು ಆಡಳಿತ, ಪೊಲೀಸ್, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರವೇ ಜಾತ್ರೆ ಯಶಸ್ವಿಗೆ ಕಾರಣ ಎಂದು ಹೇಳಿದರು.
ರೈತರು ದೇಶದ ಬೆನ್ನೆಲುಬು, ದೇಶ ಕಾಯುವ ಸೈನಿಕರೇ ಭಾರತದ ಶಕ್ತಿ. ರೈತರು ಹಾಗೂ ಯೋಧರ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಕೆಲಸ ಎಂದು ತಿಳಿಸಿದರು.
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಗೆ ಪ್ರತಿ ದಿನವೂ ಒಂದು ಲಕ್ಷ ಜನರು ಬರುವ ನೀರಿಕ್ಷೆ ಇಟ್ಟುಕೊಂಡು ಎಲ್ಲ ಸಿದ್ಧತೆ ನಡೆಸಲಾಗಿತ್ತು. ಆದರೆ ನೀರಿಕ್ಷೆಗೂ ಮೀರಿ ಜನರು ಬಂದಿದ್ದು, 10 ದಿನಗಳಲ್ಲಿ 15 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಜನರು ಆಗಮಿಸಿದ್ದಾರೆ. ಊಟ, ವಸತಿ ವ್ಯವಸ್ಥೆ, ಸಂಚಾರ, ಸುರಕ್ಷತೆ, ಸ್ವಚ್ಛತೆ ಯಾವುದೇ ವಿಷಯದಲ್ಲೂ ತೊಂದರೆ ಆಗದಂತೆ ನಿಭಾಯಿಸಿದ ರೀತಿಗೆ ಎಲ್ಲರಿಗೂ ಧನ್ಯವಾದಗಳು ಎಂದರು.
ಜಾತ್ರಾ ಯಶಸ್ಸಿಗೆ ವಿವಿಧ ಸಮಿತಿಗಳ ಮುಖಾಂತರ ಆರ್ಥಿಕವಾಗಿ ಹಾಗೂ ಸೇವಾ ರೂಪದಲ್ಲಿ ಸಹಕರಿಸಿದ ಎಲ್ಲ ಸೇವಾಕರ್ತರಿಗೂ ಜಾತ್ರಾ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Norbert D’Souza ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಕುಮುಟಾ, ಮಾಜಿ ಎಂಎಲ್‌ಸಿ ಫ್ರಫುಲ್ಲಾ ಮಧುಕರ್, ವಿ.ಟಿ.ಸ್ವಾಮಿ, ಉಪಾಧ್ಯಕ್ಷರು, ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಕಚೇರಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಮಲೆನಾಡಿನ ರೈತರು, ಮುಳುಗಡೆ ಸಂತ್ರಸ್ತರು ಜೀವ ವೈವಿಧ್ಯಮಯ, ಪರಿಸರ, ಅರಣ್ಯದ ಹೆಸರಿನಲ್ಲಿ ಕಾನೂನಿನ ಸಂಕೋಲೆಗಳಲ್ಲಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು, ಮುಳುಗಡೆ ಸಂತ್ರಸ್ತರ ಎಲ್ಲ ಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲು ಸಾಗರದ ಶ್ರೀ ಮಾರಿಕಾಂಬೆ ಎಲ್ಲರನ್ನು ಆಶೀರ್ವದಿಸಲಿ ಎಂದು ಸಾಗರ ಶಾಸಕರ ದ
ಹರತಾಳು ಹಾಲಪ್ಪನವರು ತಿಳಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.