ಓಂಕಾರೇಶ್ವರ Omkareshwar jyotirlinga
ಓಂಕಾರೇಶ್ವರವು ಮದ್ಯಪ್ರದೇಶದ ಇಂದೂರಿನಿಂದ 77 ಕಿಮೀ ಹಾಗೂ ಉಜ್ಜಯಿನಿ ಯಿಂದ133 ಕಿಮೀ ದೂರದಲ್ಲಿದೆ. ನರ್ಮದಾ
ತೀರದ ಸಮೀಪವಿದೆ. ನರ್ಮದೆಯು ಇನ್ನೊಂದು ಉಪನದಿಯನ್ನ ಸೇರುವ
ಸಂಗಮ ಸ್ಥಳದ ದ್ವೀಪ ದಲ್ಲಿ ಆಲಯವಿದೆ. ಇದು ಓಂ ಆಕಾರದಲ್ಲಿರುವುದರಿಂದ ಈ ಹೆಸರು ಬಂದಿದೆ.
ಈ ಸ್ಥಳದ ಬಗ್ಗೆ ಪುರಾಣದಲ್ಲೀ ಮೂರು ಕಥೆಗಳ ಉಲ್ಲೇಖವಿದೆ. ಇಕ್ಷ್ವಾಕು ವಂಶದ ಮಾಂಧಾತ ಎಂಬ ರಾಜನು ಓಂಕಾರೇಶ್ವರನ
ಕೃಪೆಯಿಂದ ರಾಜ್ಯ ಪ್ರಾಬಲ್ಯ ಮಾಡಿಕೊಂಡನಂತೆ.
Omkareshwar jyotirlinga ವಿಂಧ್ಯಪರ್ವತವು ಎತ್ತರ ಬೆಳೆಯಲು ಶಿವನನ್ನ ಕುರಿತು ತಪಸ್ಸು ಮಾಡಿದ.
ಶಿವನು ಪ್ರತ್ಯಕ್ಷನಾಗಿ ವರನೀಡಿದನಂತೆ.ಆಗ ಶಿವನು ತನ್ನ ಸ್ವರೂಪವನ್ನು ಎರಡು ಭಾಗ ಮಾಡಿ ಓಂಕಾರೇಶ್ವರ ಮತ್ತು
ಅಮರೇಶ್ವರ ಎಂದು ಎರಡು ಲಿಂಗಗಳನ್ನು ಪೂಜಿಸಲು ತಿಳಿಸಿದನೆಂದು ಪ್ರತೀತಿ.
ಇಲ್ಲಿನ ಲಿಂಗವು ನರ್ಮದಾ ನದಿಗಿಂತ ಎತ್ತರದಲ್ಲಿದೆ.ನರ್ಮದಾನೀರು
ಸುತ್ತುವರೆದಿದೆ.ಆಕಾರದಲ್ಲಿ ಚಿಕ್ಕದು. ಮುಂಚೆ ಬಹಳ ಹೊಳಪಿನಿಂದ ಕೂಡಿತ್ತಂತೆ.ಔರಂಗಜೇಬನು ಮಹಿಮೆ ತಿಳಿಯಲು
ಬಂದನಂತೆ. ಅದರೊಳಗೆ ವರಾಹ ರೂಪ ಕಂಡು ಕೋಪದಿಂದ ಸುಟ್ಟನಂತೆ. ಹಾಗಾಗಿ ಹೊಳಪು ಮಾಸಿ ಹೊಗೆಯ ಬಣ್ಣಬಂದಿದೆ.
ಪ್ರಮುಖವಾದ ಸಂಗತಿ. ಇಲ್ಲಿ ಗುಹೆ ಇದೆ. ಅಲ್ಲಿ ಶ್ರೀಶಂಕರರ ಗುರುಗಳಾದ ಗೋವಿಂದ ಭಗವತ್ಪಾದರು ತಪಗೈದಿದ್ದರಂತೆ.
ಶಂಕರರು ಅಲ್ಲಿಯೆರ ಸನ್ಯಾಸ ಸ್ವೀಕರಿಸಿದರು.ಶಂಕರಾಚಾರ್ಯರು ಎರಡು ವರ್ಷ ಗುರುಸೇವೆ ಮಾಡಿದರಂತೆ.
ಶ್ರೀಶಂಕರಾಚಾರ್ಯರ ಸ್ತುತಿ
ಕಾವೇರಕಾ ನರ್ಮದಯೋಃ ಪವಿತ್ರೇ|
ಸಮಾಗಮೇ ಸಜ್ಜನ ತಾರಣಾಯ||
ಸದೈವ ಮಾಂಧಾತೃಪುರೇ ವಸಚಿತಮ್|
ಓಂಕಾರಮೀಶಂ ಶಿವಮೇಕ ಮೀಡೆ||
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.