ಚಿಕ್ಕಮಗಳೂರು : ಜಿಲ್ಲಾ ಕಟ್ಟಡ ಕಾರ್ಮಿಕ ಇಲಾಖೆ ಹಾಗೂ ಮಲ್ನಾಡ್ ಫೈರ್ಸ್ ಸಂಘ ಸಹಯೋಗದೊಂದಿಗೆ ವಿಜಯಪುರದ ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ಭಾನುವಾರ ಕಾರ್ಮಿಕ ಕುಟುಂಬ ದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಚರ್ಚ್ ಧರ್ಮಗುರು ಫ್ರಾನ್ಸಿಸ್ ರಸ್ಕಿನ ಪ್ರತಿಯೊಬ್ಬರ ಬದುಕಿಗೆ ಆರೋಗ್ಯ ಅತಿಮುಖ್ಯವಾಗಿದೆ. ಮನುಷ್ಯ ಎಷ್ಟೇ ಹಣ ಕೂಡಿಟ್ಟರೂ ಆರೋಗ್ಯದ ಮುಂದೆ ಉಪಯೋಗ ವಾಗುವುದಿಲ್ಲ. ಹಾಗಾಗಿ ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ನಡೆಸಿ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.
ಜೀವನದಲ್ಲಿ ಏನೇ ವ್ಯವಹಾರ ಮಾಡಿ ಕೊಟ್ಟು ತೆಗೆದುಕೊಳ್ಳಬಹುದು. ಆದರೆ ಆರೋಗ್ಯ ವಿಷಯದಲ್ಲಿ ಕೊಡಲು ಸಾಧ್ಯವಾಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕಾರ್ಮಿಕರು ಹೆಚ್ಚು ಗಮನ ಹರಿಸಬೇಕು. ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಸದೃಢರಾಗಬೇಕು ಎಂದರು.
ನಗರಸಭಾ ನಾಮಿನಿ ಸದಸ್ಯ ರಾಬರ್ಟ್ ಮಾತನಾಡಿ ವಾರ್ಡಿನಲ್ಲಿ ನೂರಾರು ಮಂದಿ ಕಾರ್ಮಿಕ ಕುಟುಂಬ ದವರು ವಾಸಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮೊಬೈಲ್ ಕ್ಲೀನಿಕ್‌ನ್ನು ಪ್ರಾರಂಭಿಸಿ ಕಾರ್ಮಿಕರಿರುವ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಮಲ್ನಾಡ್ ಪೈಂಟರ್ ಸಂಘದ ಖಜಾಂಚಿ ಹ್ಯಾರಿ ಜೋಸೆಫ್ ಮಾತನಾಡಿ ಶಿಬಿರದಲ್ಲಿ ರಕ್ತ ಪರೀಕ್ಷೆ, ಕಿವಿ ಹಾಗೂ ಕಣ್ಣು ತಪಾಸಣೆಯನ್ನು ಕಾರ್ಮಿಕರಿಗೆ ನಡೆಸಲಾಗುತ್ತಿದ್ದು ಅತಿಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಕುಟುಂಬದವರು ಭಾಗಿಯಾಗಿ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿ ಸದಸ್ಯ ಸಗಯ್‌ದಾಸ್, ಡಾ. ಮಿಥುನ್, ಟೀಂ ಲೀಡರ್ ಅರ್ಜುನ್, ಸಿಬ್ಬಂದಿಗಳಾದ ಜ್ಯೋತಿ, ಯಶವಂತ್, ಸ್ಥಳೀಯರಾದ ಆನಂದ್, ಸಿರಿಲ್, ಅನಿಲ್, ಯೇಸುದಾಸ್, ನಯಾಜ್, ರಘು, ಡೆನ್ನಿ ಮತ್ತಿತರರು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
