ಚಿಕ್ಕಮಗಳೂರು: ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪ್ರಭು ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ.ಅಶೋಕ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನಗರದ ಡಿಎಸ್‌ಎಂಎಸ್ ಸಂಘದ ಸಭಾಂಗಣದಲ್ಲಿ ಅವಿರೋಧ ಆಯ್ಕೆಯನ್ನು ಬುಧವಾರ ಚುನಾವಣಾಧಿಕಾರಿ ಬಿ.ಕೆ. ವಿಜಯೇಂದ್ರ ಘೋಷಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಪ್ರಭು ಸಹಕಾರ ಸಂಘದ ನಿರ್ದೇಶಕರು ಹಾಗೂ ಸದಸ್ಯ ರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರ ಸಮೀಪದಲ್ಲಿ ರಿಯಾಯಿತಿ ದರದಲ್ಲಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದ್ದು ಸಂಘದ ಸದಸ್ಯರ ಸಹಕಾರವು ಅತಿಮುಖ್ಯವಾಗಿದೆ ಎಂದರು.
ಎರಡನೇ ಬಾರಿಗೆ ಅವಿರೋಧ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ಎಂ.ಬಿ.ಅಶೋಕ್‌ಕುಮಾರ್ ಮಾತನಾಡಿ ಸಂಘದ ಅಭಿವೃದ್ದಿ ಬೆಳವಣಿಗೆಗೆ ಸಂಘದ ಪ್ರತಿಯೊಬ್ಬರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಮುನ್ನೆಡೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಿ.ವೇಣುಗೋಪಾಲ್ ಪ್ರಭು, ವಿ.ಜಯರಾಮ್, ಎ.ಪೂಣೇಶ್, ಸಿ.ವಿ.ಹರೀಶ್, ಮಂಜುನಾಥ್ ಜೋಷಿ, ಡಿಎಸ್‌ಎಂಎಸ್‌ನ ಅಧಿಕಾರಿ ಕುಮಾರಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.