Saturday, December 6, 2025
Saturday, December 6, 2025

ಕೇಂದ್ರ ಕಸಾಪ ಸಮಿತಿಗೆ ಲೇಖಕಿ ರಂಜನಿ ದತ್ತಾತ್ರಿ ಮಹಿಳಾ ಪ್ರತಿನಿಧಿಯಾಗಿ ನೇಮಕ

Date:

ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಲೇಖಕಿ,ಅಂಕಣಕಾರ್ತಿ , ನಿರೂಪಕಿ ಹಾಗು ಸಮಾಜಸೇವಾಕಾರ್ಯಕರ್ತೆ ಎಂದು ಹೆಸರುಮಾಡಿರುವ, ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಶ್ರೀಮತಿ ಶ್ರೀರಂಜನಿ ದತ್ತಾತ್ರಿ ಯವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿನಿಧಿಯಾಗಿ ನೇಮಕಗೊಂಡಿರುವುದು ಇದೇ ಪ್ರಥಮ. ಹಾಗೆ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಕಳೆದ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಾ ಬಂದ ಮಹಿಳಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಮ್ಮೇಳನಗಳನ್ನು ಆಯೋಜನೆ ಮಾಡುವುದರಲ್ಲಿ ಶ್ರೀರಂಜನಿಯವರ ಪಾತ್ರ ಅಪಾರವಾಗಿದ್ದುದನ್ನು ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಕಂಡಿದ್ದಾರೆ.

ಸಮ್ಮೇಳನಗಳ ಗೋಷ್ಠಿ ನಿರ್ವಹಣೆ, ಆಯೋಜನೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಹಾಗೆ ರಾಜ್ಯಾಧ್ಯಕ್ಷರಾಗಿದ್ದ ನಾಡೋಜ ಡಾ.ಮನುಬಳಿಗಾರ ರವರು ಶ್ರೀರಂಜನಿಯವರ ಪ್ರತಿಭೆಯನ್ನು ಗುರುತಿಸಿ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ನಿರೂಪಣೆಗೆ ಆಹ್ವಾನಿಸಿದ್ದನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿ ಜಿಲ್ಲೆಗೆ ಹೆಸರನ್ನು ತಂದಿದ್ದರು.

ಅವರ ಪ್ರತಿಭೆಯನ್ನು ಎಂದು ಗುರುತಿಸಿದ್ದ ನಮ್ಮ ಈಗಿನ ಹೆಮ್ಮೆಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ನಾಡೋಜ ಡಾ.ಮಹೇಶ್ ಜೋಷಿಯವರು ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಗೋಷ್ಠಿಯ ನಿರೂಪಣೆಗೆ ಆಹ್ವಾನಿಸಿದ್ದು ಜಿಲ್ಲೆಗೆ ಸಂದ ಮತ್ತೊಂದು ಗೌರವ.

ನಿರಂತರ ಎರಡು ವರ್ಷ ಅನುಕ್ರಮವಾಗಿ ಗೋಷ್ಠಿಗಳ ನಿರೂಪಣೆಗೆ ಕಾರ್ಯಕಾರಿ ಸಮಿತಿಯಲ್ಲಿ ಇಲ್ಲದ ಒಬ್ಬ ಪ್ರತಿನಿಧಿಗೆ ದೊರೆತಿರುವುದು ಇದೇ ಮೊದಲೆನ್ನಬಹುದಾಗಿದೆ. ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡು ರಾಜ್ಯಾಧ್ಯಕ್ಷರ ಗಮನಸೆಳೆದು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ, ಗೋಷ್ಠಿಗಳಲ್ಲಿ ಅವರು ನಿರ್ವಹಿಸುವ ಕಲೆಗಾರಿಕೆ ಅಪರೂಪದ್ದು.. ಪ್ರಸ್ತುತ ವಿಚಾರಗಳ ಬಗ್ಗೆ , ಪ್ರವಾಸ ಕಥನಗಳ ಬಗ್ಗೆ, ಹಲವು ವ್ಯಕ್ತಿಗಳ ಬಗ್ಗೆ, ರಾಷ್ಟ್ರೀಯ ಚಿಂತನೆಗಳ ಬಗ್ಗೆ… ಹೀಗೆ ನೂರಾರು ಲೇಖನಗಳು, ಮಾಡಿದ ಭಾಷಣಗಳ ಮೂಲಕ ಶ್ರೀರಂಜಿನಿ ಎಲ್ಲರಿಗೂ ಪರಿಚಿತರು.

ಅಲ್ಲದೆ ಈ ಹಿಂದೆ ಹಲವು ಮಹಿಳಾ ಸಂಘಟನೆಗಳ ಅಧ್ಯಕ್ಷರಾಗಿ.. ಅಂತರಾಷ್ಟ್ರೀಯ ಸಂಸ್ಥೆ ಇಬ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆಯಾಗಿ ಮಾಡಿದ ಸೇವಾ ಕಾರ್ಯಗಳಿಗೆ ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ. ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ರಜತ ವರ್ಷದ ಅಧ್ಯಕ್ಷೆಯಾಗಿ, ಶ್ರೀಲಲಿತಾ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗದ ಸಹಕಾರ್ಯದರ್ಶಿಯಾಗಿ ..ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೆಲೆಯಲ್ಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಲ್ಲಿ ಘಟಕ ಸಂಯೋಜಕಿ, ಜಿಲ್ಲಾ ಸಂಯೋಜಕಿ, ವಿಭಾಗ ಸಂಯೋಜಕಿ, ಮಹಿಳಾ ಪ್ರಾಂತ ಪ್ರಮುಖ ಆಗಿ ಎಂಟು ವರ್ಷಗಳ ಕಾಲ ವಿವಿಧ ಜವಾಬ್ದಾರಿ ನಿರ್ವಹಿಸಿ ಜಿಲ್ಲೆಯಾದ್ಯಂತ ಸಂಚರಿಸಿ ಸಂಘಟಿಸಿದ ಅನುಭವ ಇವರಿಗಿದೆ.

ಶ್ರೀರಂಜನಿಯವರ ಸಂಘಟನಾತ್ಮಕ ಶಕ್ತಿ, ಅಮೂಲ್ಯ ಲೇಖನಗಳು, ಭಾಷಣಗಳು, ಸಾರ್ವಜನಿಕ ಚಟುವಟಿಕೆಗಳು, ವಿವಿಧ ಮಹಿಳಾ ಸಂಘಟನೆಗಳೊಂದಿಗಿನ ಇವರ ಬಾಂದವ್ಯವನ್ನು, ಸಾಹಿತ್ಯ ಸೇವೆಯನ್ನು ಗಮನಿಸಿದ ನಾಡೋಜ ಡಾ.ಮಹೇಶ್ ಜೋಶಿಯವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಥಮವಾಗಿ ಶ್ರೀರಂಜನಿಯವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನಾಮಕರಣ ಮಾಡಿದ್ದರು.

ಕೇವಲ ಆರು ತಿಂಗಳ ಅವಧಿಯಲ್ಲಿ ಶ್ರೀರಂಜನಿಯವರ ಕಾರ್ಯಕ್ಷಮತೆಯನ್ನು ಗುರುತಿಸಿ ಮತ್ತೆ ಅವರನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಪ್ರತಿನಿಧಿಯಾಗಿ ನಾಮಕರಣ ಮಾಡಿದ್ದಾರೆ. ಇದು ಶಿವಮೊಗ್ಗ ಜಿಲ್ಲೆಯ ಸಾಹಿತ್ಯಾಭಿಮಾನಿಗಳಿಗೆ ಹಾಗು ಜಿಲ್ಲೆಯ ಮಹಿಳೆಯರಿಗೆ, ಮಹಿಳಾ ಸಾಹಿತಿಗಳಿಗೆ ಸಂದ ಗೌರವವಾಗಿದೆ.

ನಿರಂತರ ಪರಿಶ್ರಮದಿಂದ ಹಾಗು ಅನೇಕ ಅಡೆತಡೆಗಳನ್ನು ಎದುರಿಸಿ ಸ್ವಂತ ಬಲದಿಂದ ಕಾರ್ಯನಿರ್ವಹಿಸುತ್ತಾ ಇರುವ ಇವರಿಗೆ ಗೌರವಗಳು ತಾವೇ ಅರಿಸಿಕೊಂಡು ಶ್ರೀರಂಜನಿಯವರು ಬಯಸದಿದ್ದರು ಬರುತ್ತಿವೆ. ಈ ಗೌರವಗಳಿಂದ ಶ್ರೀರಂಜನಿಯವರು ಇನ್ನು ಉನ್ನತ ಸ್ಥಾನವನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಳಿಸುವಂತಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆಂದು ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಿ.ಬಿ.ಶಂಕರಪ್ಪನವರು ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...