Tuesday, March 24, 2026
Tuesday, March 24, 2026

ನಿಜವಾದ ರಾಷ್ಟ್ರ ನಿರ್ಮಾಣವಾಗುವುದು ಯುವಕರ ಜಾಗೃತಿಯಿಂದ- ಡಾ.ಶಿವಪ್ರಸಾದ್

Date:

ನಿಜವಾದ ರಾಷ್ಟ್ರ ನಿರ್ಮಾಣವನ್ನು ಪಾರ್ಲಿಮೆಂಟು ಅಸೆಂಬ್ಲಿಗಳಿಂದ ನಿರೀಕ್ಷಿಸದೆ ಯುವಶಕ್ತಿಯಿಂದ ನಿರೀಕ್ಷಿಸಬೇಕಾಗಿದೆ, ಇದಕ್ಕಾಗಿ ಪೂರಕವಾದ ಆಲೋಚನಾ ಶಕ್ತಿ ವಿದ್ಯಾರ್ಥಿಗಳಲ್ಲಿ ಜಾಗೃತ ವಾಗುವಂತಹ ಶಿಕ್ಷಣವು ಶಾಲಾ-ಕಾಲೇಜುಗಳಿಂದ ಒದಗಿಸಬೇಕಾದ ಅಗತ್ಯವಿದೆಯೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ವಿಜ್ಞಾನಿ ಮತ್ತು ಪ್ರಾಧ್ಯಾಪಕ ಡಾ.ಎಸ್.ಎಮ್.ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಬಾಪೂಜಿ ಅಕಾಡೆಮಿ ಆಫ್ ಮೇನೇಜ್ಮೆಂಟ್ ಅಂಡ್ ರಿಸರ್ಚ್ ನ ಸಂಸ್ಥಾಪನಾ ದಿನ ‘ಅನಾವರಣ’2023 ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಅತ್ಯಾಧುನಿಕವಾದ ನ್ಯಾನೋ, ಬಯೋ ಹಾಗೂ ಆರ್ಟಿಫಿಶಿಯಲ್ ಇಂಟಲಿಜನ್ಸ್ ಅಂದರೆ ಕೃತಕ ಬುದ್ಧಿಮತ್ತೆ ಈ ಮೂರು ತಂತ್ರಜ್ಞಾನಗಳೇ ಮುಂದಿನ ಜಾಗತಿಕ ಭವಿಷ್ಯ ನಿರ್ಧರಿಸುವಂತಿದ್ದು ಇದರಿಂದಾಗಿ ದೇಶದಲ್ಲಿ ಸಾಂಪ್ರದಾಯಿಕವಾದ 85 ಮಿಲಿಯನ್ ನಷ್ಟು ಉದ್ಯೋಗಗಳು ಹೋದರೂ 97 ಮಿಲಿಯನ್ ನಷ್ಟು ಹೊಸ ಉದ್ಯೋಗಗಳು ಸೃಷ್ಟಿ ಆಗಲಿವೆ. ಇದಕ್ಕಾಗಿ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಜ್ಜುಗೊಳ್ಳಬೇಕಿದೆ, ಈ ತಂತ್ರಜ್ಞಾನಗಳಿಂದಾಗಿ ಮುಂದಿನ ದಿನಮಾನಗಳಲ್ಲಿ ಕೃತಕ ಅಂಗಾಂಗಗಳ ತಯಾರಿಕೆಯಾಗಿ ಅಂಗಡಿಯಲ್ಲಿ ಮಾರಾಟಕ್ಕೆ ಬರುವ ಕಾಲ ದೂರವಿಲ್ಲ, ಇದರಿಂದ ಮನುಷ್ಯರು ಸಾವನ್ನೇ ಸಾಯಿಸಿ ದೀರ್ಘಾಯುಷಿಗಳಾಗ ಬಹುದಾಗಿದ್ದು ಈ ಸವಾಲುಗಳನ್ನು ಎದುರಿಸಲು ಸಹಾ ಶಿಕ್ಷಣದಲ್ಲಿ ತಿಳಿದುಕೊಳ್ಳುವುದಕ್ಕಿಂತ ಆಲೋಚಿಸುವ ಬಗ್ಗೆ, ಆಲೋಚಿಸಿದ್ದನ್ನು ತಿಳಿಸುವ ಸಾಮರ್ಥ್ಯದ ಬಗ್ಗೆ ಒತ್ತು ಕೊಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಿಕ್ಷಣ ಸಂಸ್ಥೆಯ ಚೇರ್ಮನ್ ಅಥಣಿ ಎಸ್.ವೀರಣ್ಣನವರು 21ನೇ ಶತಮಾನದ ಪ್ರಬಲ ರಾಷ್ಟ್ರ ಎನಿಸಿಕೊಳ್ಳಲು ಹೊರಟಿದ್ದ ಚೀನಾ ದೇಶವನ್ನು ಅನೇಕ ರೀತಿಯಲ್ಲಿ ನಮ್ಮ ದೇಶ ಹಿಂದಟ್ಟಿ ಮುಂದುವರೆಯುತ್ತಿದೆ, ಜಾಗತಿಕ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುವಂತಹ ಶಿಕ್ಷಣ, ಜ್ಞಾನ ಹಾಗೂ ಕೌಶಲ್ಯ ಇಂದಿನ ಅವಶ್ಯವಾಗಿದ್ದು ನೆರೆಹೊರೆಯ ದೇಶಗಳ ಹಾಗೂ ಜಾಗತಿಕ ಸ್ಥಿತಿಗತಿಗಳನ್ನು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಂತೂ ತಿಳಿದುಕೊಳ್ಳಲೇಬೇಕು ಎಂದರು.

ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದ ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ನವೀನ್ ನಾಗರಾಜ್,ಡಾ. ಸುಜಿತ್ ಕುಮಾರ್,ರಾಯ್ಕರ್, ವಿಶೇಷ ಆಹ್ವಾನಿತರಾಗಿದ್ದ ಸುರೇಂದ್ರ ಕುಮಾರ್ ನಿಶಾನಿಮಠ ಉಪಸ್ಥಿತರಿದ್ದು ಮಾನಸ ಹಾಗೂ ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಿಕಾಸ್ ಪ್ರಾರ್ಥನಾ ಗೀತೆ ಹಾಡಿದರು, ಕಾಲೇಜಿನ ದೃಶ್ಯ ಪರಿಚಯ, ಮುಖ್ಯ ಅತಿಥಿಗಳ ಪರಿಚಯವನ್ನು ಅಸ್ಗರ್, ಅರುಣ್, ಸುನಯಾ, ಸರ್ಪ ರಾಜ್ ಹಾಗೂ ನಯನ ಮಾಡಿದರು. -ಚಿತ್ರ ಹಾಗೂ ವರದಿ ಎಚ್.ಬಿ.ಮಂಜುನಾಥ-

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...