ಉದ್ಯೋಗ ಪ್ರಪಂಚದ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ನೀಡುತ್ತದೆ. ಯಾವ ದೇಶ ಹಾಗೂ ಅಲ್ಲಿನ ಸಮಾಜ ಮುಂದುವರಿಯಬೇಕೊ ಆ ದೇಶದಲ್ಲಿ ಹೂಡಿಕೆ ಹೆಚ್ಚಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವಿರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ ಹಾಗೂ ಕನೆಕ್ಟಿಂಗ್ ಎಜುಕೇಷನ್ ಆಂಡ್ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಬ್ ಫೆರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವು, ನಿರ್ಗತಿಕ ಹಾಗೂ ದಾರಿದ್ರ್ಯ ತೊಲಗಿ ಇವೆರೆಲ್ಲರ ನಾನು ಬೆಳವಣಿಗೆ ನೋಡಬೇಕು. ಆ ಯಶಸ್ವಿಯ ಭಾಗವಹಿಸಿಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಅದರಂತೆಯೇ ಈಗ ಮೋದಿ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಿ ಕೆಲಸ ನೀಡಬೇಕೆಂದು ಹೇಳುವ ಮೂಲಕ ದೇಶದಲ್ಲಿ ನಿರುದ್ಯೋಗ ತೊಡೆದು ಹಾಕುವಲ್ಲಿ ಮುಂದಾಗಿದ್ದಾರೆ ಎಂದರು.
ಗಾಂಧಿ ಕಂಡ ಕನಸನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದ್ಯೋಗ ಆಕಾಂಕ್ಷಿಗಳು ಸಾರ್ವಜನಿಕರು ಸೇವೆಯನ್ನು ಅರಸಿ ಈಗಾಗಲೇ ಸಾಕಷ್ಟು ಸಮಯ ಹಾಳು ಮಾಡಿಕೊಂಡಿದ್ದಾರೆ. ಅವರ ಬದುಕನ್ನು ಮತ್ತೇ ಉತ್ತೇಜಿಸಲು ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಕುವೆಂಪು ವಿವಿ ಆಶಾ ಕಿರಣವಾಗಿದೆ ಎಂದರು .
ಇತ್ತೀಚೆಗೆ ಯುವ ಜನತೆ ಗೋಡೆಗಳು ಮಧ್ಯಯೇ ಬೆಳೆದು ವಿಶ್ವವನ್ನು ಅರ್ಥ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಆಚೆ ಬಂದಾಗ ಮಾತ್ರ ಈ ಜಗತ್ತು ಏನೆಂದು ಅರ್ಥ ಆಗುತ್ತದೆ. ವಿದ್ಯಾರ್ಥಿ ಗಳು ಜಗದಗಲ ಮುಗಿದಗಲ ಬೆಳೆಯಬೇಕು. ಇದಕ್ಕೆ ನಮ್ಮ ವಿವಿ ಸದಾ ಸಹಕಾರ ನೀಡುತ್ತಿದೆ. ಕೋವಿಡ್ ನಿಂದ ಕಳೆದುಕೊಂಡ ಅವಕಾಶವು ಈಗ ಉದ್ಯೋಗ ಮೇಳ ಮುಖಾಂತರ ನಿಮ್ಮಮುಂದೆ ಇದೆ. ಈ ಅವಕಾಶವನ್ನು ಬೆಳೆಸಿಕೊಳ್ಳಬೇಕು ಎಂದರು.
ಇಲ್ಲಿ ಎಲ್ಲರೂ ಉದ್ಯೋಗಾಕಾಂಕ್ಷಿಗಳೇ ಆದರೆ ಅದನ್ನು ಪಡೆಯಲು ಶ್ರಮ ವಹಿಸಬೇಕು. ಜಗತ್ತಿನಾದ್ಯಂತ ಸಾಕಷ್ಟು ಕಂಪನಿಗಳಿವೆ. ಅದನ್ನು ಪಡೆಯುವಲ್ಲಿ ಕೌಶಲ್ಯವನ್ನೂ ಕರಗತ ಮಾಡಿಕೊಳ್ಳಬೇಕು. ಈಗಾಗಲೇ ಉದ್ಯೋಗ ಮೇಳದಲ್ಲಿ30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 40000 ವಿದ್ಯಾರ್ಥಿ ಗಳು ನೊಂದಾಣಿಯಾಗಿದ್ದಾರೆ. ಉದ್ಯೋಗ ಮೇಳ ಇಷ್ಟಕ್ಕೆ ಮಾತ್ರ ಸಿಮೀತವಾಗದೆ ಮುಂದಿನ ದಿನಗಳು 100 ಕಂಪನಿಗಳು ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿ ಗಳು ಯಾವುದಕ್ಕೂ ಸಿಮೀತವಾಗದೆ ಕೃಷಿ, ಕೈಗಾರಿಕಾ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡ್ಬೇಕು. ಈ ನಿಟ್ಟಿನಲ್ಲಿ ಬಲಾಢ್ಯ ದೇಶವನ್ನು ಕಟ್ಟಲು ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪ್ರಾಂಶುಪಾಲ ಪ್ರೊ.ಕೆ.ಬಿ ಧನಂಜಯ, ಕುವೆಂಪು ವಿವಿ ಪ್ಲೇಸ್ ಮೆಂಟ್ ಅಧಿಕಾರಿಗಳು ಡಾ.ಕೆ.ಆರ್.ಮಂಜುನಾಥ್, ವಾಣಿಜ್ಯ ಹಾಗೂ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಎಂಕೆ. ವೀಣಾ, ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೋ.ಎನ್. ರಾಜೇಶ್ವರಿ ಇನ್ನಿತರರಿದ್ದರು.