ಸಮಾಜದ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು ಎಂದು ಶಿವಮೊಗ್ಗ ಶಾಸಕರಾದ ಕೆ.ಎಸ್.ಈಶ್ವರಪ್ಪನವರು ತಿಳಿಸಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ, ಎನ್. ಸಿ ಸಿ.ಕ್ರೀಡೆ, ಎನ್ ಎಸ್ ಎಸ್., ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ 2022-23 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾನ್ಯ ಶಾಸಕರಾದ ಶ್ರೀ ಕೆ. ಎಸ್ ಈಶ್ವರಪ್ಪನವರು ಮಾತನಾಡಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ” ಸಹ್ಯಾದ್ರಿ ಕಾಲೇಜಿಗೆ ಉನ್ನತ ಶೈಕ್ಷಣಿಕ ಮಾನ್ಯತೆ ಇದೆ. ಇಲ್ಲಿ ಅಭಿವೃದ್ಧಿಪರವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಸಂಗತಿ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರು. ಓದಿನ ಜೊತೆಗೆ ಎನ್. ಎಸ್.ಎಸ್., ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅತ್ಯಂತ ಅಗತ್ಯ. ಬದುಕು ರೂಪಿಸಿಕೊಳ್ಳಲು ಇಂತಹ ಆಸಕ್ತಿಗಳು ನಮಗೆ ನೆರವು ನೀಡುತ್ತವೆ.ಸಮಾಜದ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು. ಆಗ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ. ” ಎಂದರು.
ಕಾಲೇಜಿಗೆ ಹೆಚ್ಚುವರಿಯಾಗಿ ಎಂಟು ಕೊಠಡಿಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.
ಹಾಸ್ಯ – ಹಾಡಿನ ಮೂಲಕ ರಂಜಿಸಿದ ಹಾಸ್ಯ ಕಲಾವಿದೆ ಶ್ರೀಮತಿ ಇಂದುಮತಿ ಸಾಲಿಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ” ಕನ್ನಡ ನಮ್ಮ ಅಂತರಂಗದ ಭಾಷೆಯಾಗಬೇಕು. ಸಾಧ್ಯವಾದಷ್ಟು ಸಂಬಂಧವಾಚಕಗಳನ್ನು ಕನ್ನಡದಲ್ಲಿ ಬಳಸಬೇಕು.ಅಮ್ಮನಿಗೆ ಮಮ್ಮಿ ಅಪ್ಪನಿಗೆ ಡ್ಯಾಡಿ ಅನ್ನೋರು ಚಿಕ್ಕಮ್ಮನಿಗೆ ಮಿನಿಮಮ್, ದೊಡ್ಡಮ್ಮನಿಗೆ ಮ್ಯಾಕ್ಸಿಮಮ್ ಅನ್ನೋದರಲ್ಲಿ ವಿಶೇಷವೆನಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಸಂಸ್ಕಾರ ಮುಖ್ಯ. ಅದನ್ನು ನಮ್ಮ ಪರಿಸರದಿಂದ, ಶಿಕ್ಷಣದಿಂದ ಕಲಿಯಬೇಕು” ಎಂದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ ಕೆ. ವೀಣಾ ಅವರು ಅಧ್ಯಕ್ಷತೆ ವಹಿಸಿ, ” ವಿದ್ಯಾರ್ಥಿ ಜೀವನಕ್ಕೆ ಕನಸುಗಳಿರಬೇಕು. ಆ ಕನಸುಗಳು ನನಸಾಗಲು ನಿರಂತರ ಪರಿಶ್ರಮ ಬೇಕು. ಸಾಹಿತ್ಯ ಕಲೆ ಸಂಸ್ಕೃತಿಗಳ ಅರಿವು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿ. ವಿ ಕುಲಸಚಿವರಾದ ಪ್ರೊ. ನವೀನ್ ಕುಮಾರ್ ಎಚ್. ಕೆ., ಕಾಲೇಜಿನ ಹಿರಿಯ ವಿದ್ಯಾರ್ಥಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಂಜುನಾಥ್ ಎಚ್., ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಧನಂಜಯ ಕೆ. ಬಿ., ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜೇಶ್ವರಿ ಎನ್., ಪ್ರಾಧ್ಯಾಪಕರಾದ ಡಾ. ಶಿವಮೂರ್ತಿ ಎ., ಡಾ. ಕುಂದನ್ ಬಸವರಾಜ್, ಡಾ. ಕೆ. ವಿ. ಗಿರಿಧರ್., ಡಾ. ಸರಳಾ ಕೆ ಎಸ್., ವಿದ್ಯಾರ್ಥಿ ಪ್ರತಿನಿಧಿಗಳಾದ ತಾರಾದೇವಿ ಎಚ್, ಉದಯ್ ಶಂಕರ್, ಚಿನ್ಮಯಿ, ಕಾವ್ಯ ಜಿ. ಉಪಸ್ಥಿತರಿದ್ದರು. ಮಹೇಂದ್ರ ಶೆಟ್ಟಿ, ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.