ಶ್ರೀ ಮಧ್ವಾಚಾರ್ಯರು:
ಒಂದು ಬಾರಿ ಸ್ಮರಣೆ ಸಾಲದೆ/ಆನಂದತೀರ್ಥರ/
ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ//
ಇದು ಶ್ರೀವಾದಿರಾಜ ಗುರುಗಳು ,ಗುರುಗಳಾದ
ಮಧ್ವಾಚಾರ್ಯರ ಬಗ್ಗೆ ಹೇಳಿರುವುದು.
ವಾಯು ಜೀವೋತ್ತಮರಾದ ಹನುಮಂತ ದೇವರ ಮೂರನೆಯ ಅವತಾರವಾದ ಮಧ್ವರಾಯರನ್ನು ಈ ಕಲಿಯುಗದಲ್ಲಿ ಒಮ್ಮೆ ಭಕ್ತಿಯಿಂದ ಸ್ಮರಣೆ ಮಾಡಿದರೆ ಭಕ್ತರನ್ನು ಅನುಗ್ರಹಿಸುತ್ತಾರೆ ಎಂದು ಹೇಳಿದ್ದಾರೆ.
ಈ ಕಲಿಯುಗದಲ್ಲಿ ಭಗವಂತನನ್ನುಒಲಿಸಿಕೊಳ್ಳುವ ಸಾಧನ ಎಂದರೆ ಅವನ ನಾಮಸಂಕೀರ್ತನೆ. ಭಕ್ತಿಯ
ಸಮರ್ಪಣೆ ಮಾಡುವುದರಿಂದ ಯತಿಗಳು,ಸಂತರು ಮತ್ತು ಹರಿದಾಸರುಗಳು ಭೂಮಿಯಲ್ಲಿ ಅವತಾರ ಮಾಡಿದ್ದೇ ಧರ್ಮ ರಕ್ಷಣೆ ಮತ್ತು ಮನುಕುಲದ ಉದ್ಧಾರಕ್ಕಾಗಿ. ಶ್ರೀಮಧ್ವರು ಕನ್ನಡ ನಾಡಿನ ಕಡಲ
ತಡಿಯ ಉಡುಪಿಯ ಹತ್ತಿರದಲ್ಲಿರುವ ಪಾಜಕಾ ಎಂಬ ಪುಟ್ಟಗ್ರಾಮದಲ್ಲಿ ಅವತರಿಸಿದವರು.
ಬಾಲ್ಯದಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿ
ದವರುಮಧ್ವರು. ಪ್ರತಿಭಾನ್ವಿತ ಬಾಲಕ ವಾಸು ದೇವನು ಗುರುಗಳಾದ ಅಚ್ಯುತಪ್ರಜ್ಞರ ಕಣ್ಣಿಗೆ ಬಿದ್ದರು. ವಾಸು ದೇವನಿಗೆ ಹನ್ನೊಂದನೇ ವರ್ಷದಲ್ಲಿ ಅಚ್ಯುತ ಪ್ರಜ್ಞರಿಂದ ಸನ್ಯಾ ಸದೀಕ್ಷೆ ಪಡೆದು “ಪೂರ್ಣಪ್ರಜ್ಞ” ರೆಂದು ಹೆಸರು ಪಡೆಯುತ್ತಾರೆ.
ಸನ್ಯಾಸದೀಕ್ಷೆ ಪಡೆದ ಸ್ವಲ್ಪ ಕಾಲದಲ್ಲಿಯೇ ಪಂಡಿತರುಗಳನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದರು.
ಗುರುಗಳು ಇವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆದು “ಆನಂದತೀರ್ಥ”ರೆಂಬ
ಬಿರುದನ್ನು ಕೊಡುತ್ತಾರೆ. ವೇದದ ಬಲಿತ್ಥ ಸೂಕ್ತದಲ್ಲಿ ಇರುವ ಮಧ್ವರ ಹೆಸರನ್ನು ಆರಿಸಿಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಮಧ್ವಾಚಾರ್ಯರು ಪ್ರಚುರ ಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತಮತವೆಂದು ಪ್ರಸಿದ್ಧವಾಗಿದೆ.
ಮಧ್ವಾಚಾರ್ಯರು 13-14ನೇ ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು.ವಾಯುವಿನಅವತಾರದಲ್ಲಿ ಮೂರನೆಯ ಅವತಾರವಾಗಿ ಬಂದವರೇ ಆಚಾರ್ಯ ಮಧ್ವರು. ಮೊಟ್ಟ ಮೊದಲು ದಕ್ಷಿಣ ಭಾರತ ಪ್ರವಾಸ ಕೈಗೊಂಡರು.ಅಲ್ಲಿ ತಮ್ಮ ಸಿದ್ಧಾಂತ ತತ್ವವಾದವನ್ನು
ಪ್ರಚಾರ ಮಾಡಿದರು. ಅಲ್ಲಿಂದ ಮುಂದೆ ಉಡುಪಿಗೆ
ಬಂದು ಗೀತೆಗೆ ಭಾಷ್ಯ ಬರೆದರು. ತತ್ವವಾದದ ಸಿದ್ಧಾಂತದ ಆಧಾರದ ಮೇಲೆ 37 ಗ್ರಂಥಗಳನ್ನು
ಬರೆದರು. ಅವುಗಳನ್ನು “ಸರ್ವಮೂಲ”ಗ್ರಂಥ
ಗಳೆಂದು ಕರೆಯುತ್ತಾರೆ.
ಅವರು ಮುಂದೆ ಬದರಿಗೆ ಹೋಗಿ ವೇದವ್ಯಾಸರಿಗೆತಮ್ಮ ಗೀತಾಭಾಷ್ಯವನ್ನು ತೋರಿಸಿಅವರಮೆಚ್ಚುಗೆಗಳಿಸುತ್ತಾರೆ. ಬದರಿಯಿಂದ ಹಿಂದಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು.
ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು.ಮಹಾಭಾರತ ತಾತ್ಪರ್ಯ ನಿರ್ಣಯವನ್ನು ಬರೆದರು. ಋಗ್ವೇದದ 40 ಸೂಕ್ತಗಳಿಗೆ ಟೀಕೆಯನ್ನು ಬರೆದರು. ಇದೇ ಸಮಯದಲ್ಲಿ ಗೋಪಿಚಂದನ ಗೆಡ್ಡೆಯಲ್ಲಿ ಬಂದ ಕೃಷ್ಣನ ಮೂರ್ತಿ
ಯನ್ನು ಉಡುಪಿಯಲ್ಲಿ ಸ್ಥಾಪಿಸಿದರು. ಜ್ಞಾನ ಪ್ರಪಂಚಕ್ಕೆ ಶ್ರೀಮಧ್ವರ ಕೊಡುಗೆ ಅಪಾರ.
ಹರಿದಾಸರು ಶ್ರೀಮಧ್ವಾಚಾರ್ಯರನ್ನು ತಮ್ಮ ಕೃತಿ
ಗಳಲ್ಲಿ ಹಾಡಿ ಹೊಗಳಿದ್ದಾರೆ. ಶ್ರೀನಾರಾಯಣ ಪಂಡಿತಾಚಾರ್ಯರ “ಸುಮಧ್ವವಿಜಯ” ಆಚಾರ್ಯರ ಸಮಗ್ರ ಚಿತ್ರಣ ನೀಡುವ ಗ್ರಂಥ. ಶ್ರೀತ್ರಿವಿಕ್ರಮ ಪಂಡಿತಾಚಾರ್ಯರು ವಾಯುಸ್ತುತಿ ಎನ್ನುವ ಅವತಾರತ್ರಯ ಸ್ತೋತ್ರ ರಚಿಸಿದ್ದಾರೆ.
ಪರಂಪರೆಯಲ್ಲಿ ಬಂದಂತಹ ಅನೇಕ ಯತಿಗಳು ಆಚಾರ್ಯ ಮಧ್ವರನ್ನು ಹೊಗಳಿದ್ದಾರೆ.
ಹರಿದಾಸರು ವಾಯುದೇವರ ಅವತಾರಗಳಾದ
ಹನುಮ-ಭೀಮ-ಮಧ್ವರ ರೂಪಗಳಹಿರಿಮೆಗಳನ್ನು ಕೊಂಡಾಡಿದ್ದಾರೆ. ಮಧ್ವರು ಉಪದೇಶಿಸಿದ ಹರಿಸರ್ವೋತ್ತಮತ್ವ,ಪಂಚಭೇದ ತಾರತಮ್ಯದ ವಿಚಾರಗಳನ್ನುತಮ್ಮರಚನೆಗಲ್ಲಿ ವರ್ಣಿಸಿದ್ದಾರೆ.
ಗುರುಗಳಾದ ಮಧ್ವಾ ಚಾರ್ಯರನ್ನು ಕೊಂಡಾಡಿದ್ದಾರೆ.
ಸಂಗೀತ ಪಿತಾಮಹರಾದ ಪುರಂದರದಾಸರು
ಹನುಮ ಭೀಮ ಮಧ್ವರ ಬಗೆಗೆ ಹಲವು ಕೃತಿಗಳನ್ನು ರಚಿಸಿದ್ದಾರೆ.
“ಇಂಥಾತನು ಗುರುವಾದದ್ದು ನಮಗೆ ಇನ್ನೆಂಥಾ
ಪುಣ್ಯದಫಲವೋ”ಎನ್ನುವಕೃತಿಯಲ್ಲಿಭಗವಂತನನ್ನು ಸುಲಭವಾಗಿ ಕಾಣುವ ಉಪಾಯವನ್ನು ಆಚಾರ್ಯರು ತಿಳಿಸಿಕೊಟ್ಪಿದ್ದಾರೆ ಎಂದು ಪುರಂದರದಾಸರು ಹೇಳಿದ್ದಾರೆ.
ವೈಷ್ಣವ ಮತವನ್ನು ಸ್ಥಾಪಿಸಿ ಜಗತ್ತು ಸತ್ಯವೆಂದು ಸಾರಿದರು.ಪಂಚಭೇದಗಳನ್ನು ತಿಳಿಸಿಕೊಟ್ಟವರಲ್ಲಿಮಧ್ವರೇ ಆದ್ಯರು ಎಂದು ಹೇಳಿದ್ದಾರೆ.
ಭಾರತದ ವೈದಿಕ ಮತಾಚಾರ್ಯರಲ್ಲಿ ಮೊದಲು ಶ್ರೀಶಂಕರಾಚಾರ್ಯರು, ಎರಡನೆಯವರಾಗಿ ಶ್ರೀರಾಮಾನುಜಾಚಾರ್ಯರು,ನಂತರದಲ್ಲಿ ಶ್ರೀಮಧ್ವಾಚಾರ್ಯರುಕ್ರಮವಾಗಿಅದ್ವೈತ,ವಿಶಿಷ್ಟಾದ್ವೈತಮತ್ತುದ್ವೈತಮತಗಳನ್ನುಲೋಕೋದ್ಧಾರಕ್ಕಾಗಿ ಸ್ಥಾಪಿಸಿದ ಮಹಾನುಭಾವರುಗಳು.
ಶ್ರೀಮಧ್ವಾಚಾರ್ಯರ ನಂತರ 4ನೇಯ ಆಚಾರ್ಯರು ಇನ್ನೂ ಅವತರಿಸಿಲ್ಲ. ಕಾಲಕ್ರಮೇಣ
ಶ್ರೀಮಧ್ವಾಚಾರ್ಯರೇ ಕೊನೆಯವರು. ಅಂತೆಯೇ
ಅವರ ಸಿದ್ಧಾಂತವೂ ಕೊನೆಯದು. ಈ 3
ಜನ ಆಚಾರ್ಯತ್ರಯರಿಗೂ ಕನ್ನಡನಾಡೇ ಕರ್ಮ
ಭೂಮಿ.ಆದರೆ ಆಚಾರ್ಯ ಮಧ್ವರಿಗೆ ಕರ್ನಾಟಕ
ಜನ್ಮ ಭೂಮಿಯೂ ಹಾಗೂ ಕರ್ಮ ಭೂಮಿಯೂ ಆಯಿತು.ದಾರ್ಶನಿಕರು,ಸಕಲಶಾಸ್ತ್ರಗಳು,ಸಕಲ
ಭಾಷೆಗಳು,ಸಕಲಕಲೆಗಳು ಅವರಿಗೆ ಕರತಲಾ
ಮಲಕವಾಗಿದ್ದವು. ಅದಕ್ಕೆಂದೇ ಅವರನ್ನು ಪೂರ್ಣಪ್ರಜ್ಞರೆಂದು ಕರೆದಿದ್ದಾರೆ.
ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿ,ಮಠಾಧಿಪತಿಗಳನ್ನು ನೇಮಿಸಿ ಶ್ರೀಕೃಷ್ಣಪೂಜೆಯನ್ನು ಪ್ರತಿ 2 ತಿಂಗಳು ಅಷ್ಟ ಮಠದ ಯತಿಗಳು ಸರತಿಯಂತೆ ಕ್ರಮವಾಗಿ ಪೂಜೆಯನ್ನು ನೆರವೇರಿಸಿಕೊಂಡು ಹೋಗುವ ಪದ್ಧತಿಯನ್ನು ಜಾರಿಗೆ ತಂದರು.
ಶ್ರೀಮಧ್ವಾಚಾರ್ಯರು 2ನೇ ಬಾರಿ ಬದರೀ ಯಾತ್ರೆಯನ್ನು ಕೈಗೊಂಡಾಗ ಗಂಗೆಯನ್ನು ದಾಟಿ
ಹೋಗಬೇಕಾದಾಗ ಅಲ್ಲಿದ್ದ ಮುಸ್ಲಿಂ ದೊರೆ ಇವರ ಮಾತುಗಳಿಂದ ಆಕರ್ಷಿತನಾಗಿ ಇವರನ್ನು ಗೌರವಿಸುತ್ತಾನೆ.
ಮುಂದೆ ಇವರು ಬದರಿಯಲ್ಲಿ ಶ್ರೀವೇದವ್ಯಾಸರನ್ನು ಮತ್ತು ಬದರಿನಾರಾಯಣನ ದರ್ಶನ ಮಾಡಿ
ಹಿಂದಿರುಗಿ ಬರುವಾಗ ಕುರುಕ್ಷೇತ್ರದಲ್ಲಿ ದ್ವಾಪರ ಯುಗದಲ್ಲಿ ಭೀಮಸೇನ ದೇವರು ಉಪಯೋಗಿಸಿದ ಗದೆಯನ್ನು ದರ್ಶನ ಮಾಡುತ್ತಾರೆ.ಅಲ್ಲಿಂದ ಉಡುಪಿಗೆ ಬರುತ್ತಾರೆ.ಅವರು ನಂತರ ಸಂಚಾರ ಹೋದಾಗ ತ್ರಿವಿಕ್ರಮ ಪಂಡಿತಾಚಾರ್ಯರೆಂಬ ವಿದ್ವಾಂಸರು ಆಚಾರ್ಯರ ಜೊತೆ ವೇದಾಂತ ವಾದದಲ್ಲಿ ಸೋತು ಶರಣಾಗಿ ಶ್ರೀಮದಾಚಾರ್ಯರ ಶಿಷ್ಯರಾಗುತ್ತಾರೆ.
ತಮ್ಮ 79ನೇ ವಯಸ್ಸಿನಲ್ಲಿ ಪಿಂಗಲನಾಮ ಸಂವತ್ಸರ ಮಾಘ ಶುದ್ಧ ನವಮಿಯಂದು ಏಕಾಂಗಿಯಾಗಿ ಬದರಿಗೆ ತೆರಳಿದರು. ನಂತರ ಅವರನ್ನು ಯಾರೊಬ್ಬರೂ ಪ್ರತ್ಯಕ್ಷವಾಗಿ ಕಂಡವರಿಲ್ಲ ಎಂದು ತಿಳಿದುಬರುತ್ತದೆ.
ಈ ದಿನವನ್ನು ಆಚಾರ್ಯರ ಸ್ಮರಣಾರ್ಥವಾಗಿ “ಮಧ್ವನವಮಿ”ಎಂದುಆಚರಿಸಲಾಗುತ್ತದೆ. ಮಧ್ವನವಮಿಯ ಶುಭದಿನದಂದು ನಾವೂ ಆಚಾರ್ಯರಿಗೆ ಭಕ್ತಿಯ ನಮನಗಳನ್ನ ಸಲ್ಲಿಸೋಣ.
ಬರಹ: ಎನ್. ಜಯಭೀಮ್ ಜೊಯ್ಸ್
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.