ಕಾಂಗ್ರೇಸ್ ಮತ್ತು ದಳ ಸರ್ಕಾರಗಳಿಂದ ರಾಜ್ಯ ಲೂಟಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ರವರು ಹೇಳಿಕೆ ನೀಡಿರುವುದು ನೋಡಿದರೆ, ಅಮಿತ್ ಷಾ ಮನೆಯಲ್ಲಿಯೇ ಸುಳ್ಳಿನ ಮಹಾರಥ ಮುರಿದುಕೊಂಡು ಬಿದ್ದಂತೆ ಕಾಣಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ. ಚಂದ್ರಕಾಂತ್ ಟೀಕಿಸಿದ್ದಾರೆ.
ಕಾಂಗ್ರೇಸ್ ಪಕ್ಷದ ನಾಯಕರು ರಾಜ್ಯವನ್ನು ಲೂಟಿ ಮಾಡಿದ್ದಾರೆಂದು ಅಮೀತ್ ಷಾ ರವರು ನೀಡಿರುವ ಹೇಳಿಕೆಯು ಭೂತದ ಬಾಯಿಯಲ್ಲಿ ಭಗವದ್ಗೀತೆ ಎನ್ನುವಂತೆ ಇದೆ. ಉತ್ತರ ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ ಅತಿವೃಷಿಯಿಂದ ಹತ್ತಾರು ಸಾವಿರ ಕುಟುಂಬಗಳು ಮನೆಮಠ ಕಳೆದುಕೊಂಡು ಅನ್ನಆಹಾರಕ್ಕಾಗಿ ಪರದಾಡಿತ್ತಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ನೆನಪು ಮಾಡೊಕೊಳ್ಳದ ಪ್ರದಾನಿ ನರೇಂದ್ರ ಮೋದಿ ಮತ್ತುಅಮಿತ್ ಷಾ ಜೋಡಿಗೆ ರಾಜ್ಯದಲ್ಲಿ ವಿಧಾನಸಭಾಚುನಾವಣೆ ನಡೆಯುವ ಕಾರಣಕ್ಕೆ ನೆನಪಾಗಿ ದೊಂಬರಾಟ ಮಾಡುತ್ತಿದ್ದಾರೆಂದು ವೈ. ಬಿ ಚಂದ್ರಕಾಂತ್ ಅವರು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ನಾಯಕರು ಒಂದು ಸುಳ್ಳನ್ನು ಸಾವಿರಾರು ಬಾರಿ ಹೇಳಿ ದೇಶದ ಮತ್ತು ರಾಜ್ಯದ ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದು, ಇದೇ ಸುಳ್ಳುಗಳನ್ನು ಹೇಳಿ ಮುಂದೆಯೂ ಪುನಃ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.ಆದರೆ ಇಂತಹ ಬಿ.ಜೆ.ಪಿ ನಾಯಕರಿಗೆ ಉತ್ತರ ಕರ್ನಾಟಕದ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ.
ಬಿಜೆಪಿ ಸರ್ಕಾರದೇಶದ ಸಾವಿರಾರು ಸ್ವತ್ತುಗಳನ್ನು ಹುಡುಕಿ ಅಂಬಾನಿ ಅದಾನಿಯಂತಹ ಹಣ ಉಳ್ಳವರಿಗೆ ಮಾರಾಟ ಮಾಡಿಯಾಗಿದೆ.ಇನ್ನು ಬಾಕಿ ಉಳಿದಿರುವುದು ದೇಶ ಅಡವಿಡುವುದು ಮಾತ್ರ. ದೇಶದಜನರಿಗೆ ಬಿ.ಜೆ.ಪಿ ಸರ್ಕಾರದ ಮತ್ತುಅದರ ನಾಯಕರ ಗೋಸುಂಬೆ ಬಣ್ಣದರಾಜಕೀಯ ನಾಟಕವು ಅರಿವಿಗೆ ಬಂದಿದೆ ಎಂದು ವೈ.ಬಿ. ಚಂದ್ರಕಾಂತ್ ಅವರು ತಿಳಿಸಿದರು.
ದೇಶದ ಗೃಹಮಂತ್ರಿಯಾಗಿ ಅಮಿತ್ ಷಾ ರವರು ಘನತೆಗೆ ತಕ್ಕಂತೆ ಮಾತನಾಡಬೇಕು. ಅದನ್ನು ಬಿಟ್ಟಕಾಂಗ್ರೇಸ್ ಪಕ್ಷದೇಶವನ್ನು ಲೂಟಿ ಮಾಡಿದೆಎಂದು ಹೇಳಿರುವ ಷಾ ರವರುತಮ್ಮ ಪಕ್ಷದಇತರೆ ಭ್ರಷ್ಟ ನಾಯಕರ ಬಗ್ಗೆ ಮಾತನಾಡವುದು ಇರಲಿ ತಮ್ಮ ಮಗನ ಬಳಿ ಇರುವ ಸಾವಿರಾರುಕೋಟಿ ರೂಪಾಯಿಗಳ ಸಂಪತ್ತುಯಾವ ಮೂಲದಿಂದ ಬಂದಿದೆಎನ್ನುವ ಬಗ್ಗೆ ಮೊದಲು ಮಾತನಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ. ಚಂದ್ರಕಾಂತ್ ಅವರು ಸವಾಲು ಹಾಕಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
