Wednesday, October 2, 2024
Wednesday, October 2, 2024

ಸಂಗೊಳ್ಳಿ ರಾಯಣ್ಣ ಯುವಕರಿಗೆ ಸ್ಫೂರ್ತಿ- ಮಹೇಶ್

Date:

Book Your Advertisement Now.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಬಲಿದಾನಗೊಂಡ ದಿನವಾದ ಇಂದು ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಜಿ.ಪಂ. ಸಮೀಪದ ಕನಕ ಕಟ್ಟಡ ಭವನದಲ್ಲಿ 192ನೇ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಬ್ರಿಟಿಷರ ವಿರುದ್ಧ ನಾಡು ಹಾಗೂ ದೇಶದ ರಕ್ಷಣೆ ದೃಷ್ಟಿಯಿಂದ ಕೆಂಚದೆಯಿಂದ ಹೋರಾಡಿದ ಅಪ್ರತಿಮ ನಾಯಕ ಸಂಗೊಳ್ಳಿ ರಾಯಣ್ಣ ಎಂದ ಅವರು ಕಿತ್ತೂರು ಠಾಣಿ ಚೆನ್ನಮ್ಮ ಅವರ ನಂಬಿಕಾರ್ಹ ಬಲಗೈ ಬಂಟನಾಗಿ ಕಾರ್ಯನಿರ್ವಹಿಸಿ ವೀರಯೋಧ ಎನಿಸಿಕೊಂಡವರು ಎಂದರು.

ರಾಯಣ್ಣನವರು ಸ್ವಾತಂತ್ರ್ಯ ಭೂಮಿಕೆಯಲ್ಲಿ ತನ್ನದೇಯಾದ ಕೊಡುಗೆ ನೀಡಿದವರು. ಕೆಲವು ಕಿಡಿಗೇಡಿಗಳು ನಾಡಿನ ಮೇಲೆ ದ್ವೇಷವನ್ನು ಬಿತ್ತುವ ಹಾಗೂ ಚೆನ್ನಮ್ಮನ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಬ್ರಿಟಿಷರಿಂದ ರಾಯಣ್ಣ ಹತನಾದ ಎಂಬ ಸುಳ್ಳು ಸಂದೇಶ ರವಾನಿಸಿ ಚೆನ್ನಮ್ಮನ ಸಾವಿಗೂ ಕಾರಣರಾಗಿದ್ದರು ಎಂದು ಹೇಳಿದರು.

ನೇರ ಹೋರಾಟದ ಮೂಲಕ ಸಂಗೊಳ್ಳಿ ರಾಯಣ್ಣನನ್ನು ಸೆರೆ ಹಿಡಿಯಲು ಅಸಾಧ್ಯವಾದ ಕಾರಣ ಸಂಚು ಮಾಡಿ ಸೆರೆ ಹಿಡಿಯಲು ಬ್ರಿಟಿಷ್ ಅಧಿಕಾರಿಗಳು ತೀರ್ಮಾನಿಸಿ ಕೆಲವು ಕಿಡಿಕೇಡಿಗಳಿಗೆ ಜಮೀನು, ನಗದು ಬಹುಮಾನ ನೀಡುವ ಆಮಿಷವೊಡ್ಡಿ ಮೋಸದಿಂದ ಬಂಧಿಸಲಾಗಿತ್ತು ಎಂದರು.

ರಾಜ್ಯ ಕುರುಬರ ಸಂಘದ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ ರಾಯಣ್ಣ ಅವರ ಜನ್ಮದಿನ ಆಗಸ್ಟ್ 15 ಅವರ ಬಲಿದಾನದ ದಿನ ಜನವರಿ 26. ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರ ತ್ಯಾಗ, ಬಲಿದಾನಗಳನ್ನು ಪ್ರತಿಯೊಬ್ಬರು ಸ್ಮರಿಸಿ ಅವರ ಮಾರ್ಗದರ್ಶದಲ್ಲಿ ನಡೆಯಬೇಕು ಎಂದು ಹೇಳಿದರು.

ರಾಯಣ್ಣ ಶೂರತನ ಮತ್ತು ಪ್ರಾಮಾಣಿಕತೆಗೆ ಮೆಚ್ಚಿ ಕಿತ್ತೂರು ರಾಣಿ ಚೆನ್ನಮ್ಮ ತಮ್ಮ ಅಂಗ ರಕ್ಷಕರ ನಾಯಕನ್ನಾಗಿ ಮಾಡಿಕೊಂಡರು. ಅವರ ಪ್ರಾಮಾಣಿಕತೆ ಇಂದಿನ ಯುವಕರಿಗೆ ಸ್ಪೂರ್ತಿಯಾಗಿ ದೇಶದಲ್ಲಿ ಭ್ರಷ್ಟಾಚಾರ ಅಡಗಿಸಲು ಯುವಕರ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ಮೂರ್ತಿ ಅಡವೇಗೌಡ, ಕನಕ ಜಯಂತಿ ಸಮಿತಿ ಅಧ್ಯಕ್ಷ ಬಿ.ಸಿ.ಗಂಗಾಧರ್, ಮುಖಂಡರುಗಳಾದ ನಾಗೇಶ್, ಜಗದೀಶ್, ಡಿ.ಜಿ.ರಂಗನಾಥ್, ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...