Monday, December 15, 2025
Monday, December 15, 2025

ನಗರದಲ್ಲಿ ಬಿಡಾಡಿ ಕುದುರೆಗಳ ಕಾಟ ನಿಯಂತ್ರಣಕ್ಕೆ ಶಿಮಪಾ ಪ್ರಕಟಣೆ

Date:

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಬಡಾವಣೆಗಳಲ್ಲಿ ಬಿಡಾಡಿ ಕುದುರೆಗಳ ಸಂಖ್ಯೆ ಹೆಚ್ವಾಗುತ್ತಿದ್ದು, ಇವುಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾ ದಿಡ್ಡಿ, ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು ಹಾಗೂ ವಾಹನಗಳಿಗೆ ಅಡ್ಡಿ ಬರುತ್ತಿರುವುದರಿಂದ ಅವಘಾತಗಳು ಮತ್ತು ಸಾರ್ವಜನಿಕ ಉಪದ್ರವದ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು, ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಮಾಲೀಕರು/ ವಾರಸುದಾರರಿಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತಿಳುವಳಿಕೆ ಹೊರಡಿಸಲಾಗಿತ್ತು.

ಹಾಗೂ ಸುಪರ್ದಿಗೆ ಪಡೆಯದಿದ್ದಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಅಥವಾ ಆ ಬಿಡಾಡಿ ಕುದುರೆಗಳನ್ನು ಸಾಕಿ ಸಲಹಿ ಉಪಯೋಗ ಪಡೆಯುವಂತ ಆಸಕ್ತಿಯುಳ್ಳ ವಿವಿಧ ಯೋಜನೆಗಳನ್ನು ಉಳ್ಳಂತ ಸಾರ್ವಜನಿಕರು ಮುಂದೆ ಬಂದಲ್ಲಿ ಕುದುರೆಗಳನ್ನು ನೀಡುವುದಾಗಿ ಪಕಟಣೆ ಹೊರಡಿಸಲಾಗಿದ್ದು, ಆದಾಗ್ಯೂ ಬಿಡಾಡಿ ಕುದುರೆಗಳು ಕುದುರೆಯ ಮರಿಗಳು, ರೋಗಗ್ರಸ್ತ ಹಾಗೂ ಅಂಗವಿಕಲ ಕುದುರೆಗಳು ರಸ್ತೆಗಳಲ್ಲಿ ಓಡಾಡುತ್ತಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು ಈ ಸಂಬAಧ ಈಗಾಗಲೇ ಹಲವಾರು ಸಾರ್ವಜನಿಕ ದೂರುಗಳು ಸ್ವೀಕೃತವಾಗಿರುತ್ತವೆ.

ಕೆಲವು ಸ್ವಯಂ ಸೇವಾ ಸಂಸ್ಥೆಗಳು/ಏಜೆನ್ಸಿಗಳು ಈ ಬೀಡಾಡಿ ಕುದುರೆಗಳನ್ನು ಉಚಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗಿಸಲು ಅನುಮತಿ ನೀಡಿದಲ್ಲಿ ಅವುಗಳನ್ನು ಬಳಸಿಕೊಂಡು ಯಾಂತ್ರೀಕೃತವಾಗಿ ಬ್ಯಾಟರಿ ಚಾಲಿತ ಯಂತ್ರವನ್ನು ಬಳಸಿ, ವ್ಯವಸಾಯ ಕ್ಷೇತ್ರಕ್ಕೆ ಬಳಸಿಕೊಳ್ಳುವುದು, ಸಾಗಾಣಿಕೆ ಕ್ಷೇತ್ರಕ್ಕೆ ಬಳಸಿಕೊಳ್ಳುವುದು ಇತ್ಯಾದಿ ತೋಟದಲ್ಲಿ ಜೀವಾಮೃತವನ್ನು ಸಾಗಿಸುವುದು ಹಾಗೂ ಇತರೆ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಾಗಿ ಮನವಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಸ್ತಾವನೆಗೆ ಕೇಂದ್ರ ಆಹಾರ ಸಂಶೋಧನ ಕೇಂದ್ರ ಮೈಸೂರು ಹಾಗೂ ರಾಷ್ಟ್ರೀಯ ತೋಟಗಾರಿಕ ಮಿಷನ್ ಬೆಂಗಳೂರು ಇವರ ಮಾರ್ಗದರ್ಶನ ಪಡೆಯಲಾಗಿದೆ, ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಪರಿಣಿತಿ ಹೊಂದಿರುವುದಾಗಿ ಪ್ರತ್ಯಕ್ಷವಾಗಿ ನಡೆದಂತಹ ಹಲವಾರು ಸಭೆಗಳಲ್ಲಿ ಮತ್ತು ಹಲವು ಪ್ರಸ್ತಾವನೆಗಳಲ್ಲಿ ತಿಳಿದುಬಂದಿರುತ್ತದೆ.

ಅಂತಿಮವಾಗಿ ಮತ್ತೊಮ್ಮೆ ಎಲ್ಲಾ ಶಿವಮೊಗ್ಗದ ನಾಗರಿಕರಿಗೆ ಅಥವಾ ಬಿಡಾಡಿ ಕುದುರೆಗಳ ಮಾಲೀಕತ್ವವುಳ್ಳಂತ ಯಾರಾದರು ವಾರಸುದಾರರಿದ್ದಲ್ಲಿ ಕಡ್ಡಾಯವಾಗಿ ಈ ಪ್ರಕಟಣೆಯ 7 ದಿನಗಳೊಳಗಾಗಿ ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯತಕ್ಕದ್ದು. ಇಲ್ಲವಾದಲ್ಲಿ ಕಟ್ಟು ನಿಟ್ಟಾಗಿ ಸದರಿ ಕುದುರೆಗಳನ್ನು ಬಿಡಾಡಿ ಕುದುರೆಗಳೆಂದು ಪರಿಗಣಿಸಿ ಸಾರ್ವಜನಿಕ ಉಪಟಳವೆಂದು ಪರಿಗಣಿಸಿ ಕರ್ನಾಟಕ ಕಾರ್ಪೋರೇಷನ್ ಕಾಯ್ದೆಯ ವಿಧಿಗಳ ಅನುಸಾರ ಆಯುಕ್ತರಿಗೆ ದತ್ತವಿರುವ ಅಧಿಕಾರವನ್ನು ಚಲಾಯಿಸಿ ಬೀಡಾಡಿ ಕುದುರೆಗಳನ್ನು ಯಾವುದೇ ಮುನ್ಸೂಚನೆ ಅಥವಾ ತಿಳುವಳಿಕೆ ನೀಡದೆ ಸೂಕ್ತ ಎನ್‌ಜಿಓಗಳ ವಶಕ್ಕೆ ನೀಡುವಂತೆ ನಿಯಾಮಾನುಸಾರ ಕ್ರಮಗಳನ್ನು ಜರುಗಿಸಲಾಗುವುದೆಂದು ಮತ್ತೊಮ್ಮೆ ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಯಪಡಿಸಿದೆ.

ಬೀಡಾಡಿ ಕುದುರೆಗಳಿಗೆ ಸಂಬಂಧಪಟ್ಟಂತೆ ವಾರಸುದಾರರಿದ್ದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಪಶುಸಂಗೋಪನ ಅಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ವಿವರಗಳನ್ನು ನೀಡಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...