ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಫೆಬ್ರವರಿ 1 ಮತ್ತು 2 ರಂದು 17 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜನವರಿ 22ರಂದು ಸಂಜೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಬಿಡುಗಡೆ ಗೊಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಿಂದ ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿಯಿರುವ ಸದಸ್ಯರಗಳು, ಕನ್ನಡದ ಮನಸ್ಸುಗಳು ಭಾಗವಹಿಸಲು ಅನುಕೂಲ ಆಗುವಂತೆ ಪ್ರತಿನಿಧಿಗಳನ್ನು ನೋಂದಣಿ ಮಾಡಲು ತೀರ್ಮಾನ ಮಾಡಲಾಯಿತು.
ಸಾಹಿತ್ಯ ಆಸಕ್ತಿಯಿರುವ ಎಲ್ಲರೂ ಸಮ್ಮೇಳನಕ್ಕೆ ಬರುವಂತೆ ಪ್ರಯತ್ನ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಆಮಂತ್ರಣ ವಿತರಣೆ, ಸಮ್ಮೇಳನದ ಎರಡೂ ದಿನಗಳು ತಾಲ್ಲೂಕು, ಹೋಬಳಿ ಸಮಿತಿಯ ಪದಾಧಿಕಾರಿಗಳು ಶಿವಮೊಗ್ಗದಲ್ಲಿ ಉಳಿದು ಕೊಳ್ಳಲು ಒಮ್ಮತದ ತೀರ್ಮಾನ ಮಾಡಲಾಯಿತು.
ವಿವಿಧ ಉಪ ಸಮಿತಿಗಳಲ್ಲಿ ಎಲ್ಲರೂ ತೊಡಗಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಕೋರಲಾಯಿತು.
ಹೊಳೆಹೊನ್ನೂರು ಹೋಬಳಿ ಸಮಿತಿಯು ನಡೆಸಿದ ಪ್ರಥಮ ಹೋಬಳಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಅವರನ್ನು ಹೋಬಳಿ ಸಮಿತಿಯನ್ನು ಅಭಿನಂದಿಸಲಾಯಿತು.
ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ಭದ್ರಾವತಿ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಹೊಸನಗರ ಅಧ್ಯಕ್ಷರಾದ ತ. ಮ. ನರಸಿಂಹ, ಸೊರಬ ಅಧ್ಯಕ್ಷರಾದ ಶಿವಾನಂದ ಪಾಣಿ, ಕಸಾಸಾಂ ವೇದಿಕೆ ಭದ್ರಾವತಿ ಅಧ್ಯಕ್ಷೆ ಸುಧಾಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.