ಯಾವುದೇ ವಿಶ್ವವಿದ್ಯಾಲಯ ಅಥವಾ ಕಾಲೇಜು ನ್ಯಾಕ್ ಪರಿಶೀಲನೆಯಲ್ಲಿ ಉತ್ತಮ ಶ್ರೇಯಾಂಕ ಪಡೆಯಬೇಕಾದರೆ ಸತತ ಪರಿಶ್ರಮ ಅತ್ಯಂತ ಅಗತ್ಯ. ಉಪಲಬ್ಧ ಮಾಹಿತಿಗಳನ್ನು ಸೂಕ್ತ ಕ್ರಮದಲ್ಲಿ ಮಂಡಿಸುವ ಕೆಲಸ ಮೊದಲು ಆಗಬೇಕು. ಪರಸ್ಪರ ಸಹಕಾರ ಭಾವನೆ, ಸಹ ಸಂವೇದನೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ. ಅನಗತ್ಯ ಗೊಂದಲಗಳಿಗೆ ಅವಕಾಶವನ್ನು ಕೊಡದೆ ಸೂಕ್ತ ಕ್ರಮವನ್ನು ಅನುಸರಿಸಿದಲ್ಲಿ ಮ್ಯಾಕ್ ಮಂಡಳಿಯನ್ನು ಎದುರಿಸುವುದು ಕಷ್ಟವಾಗಲಾರದು.
ಪ್ರಬಲ ಆತ್ಮವಿಶ್ವಾಸ ವಿ ದ್ದರೆ ನ್ಯಾಕ್ ಮಂಡಳಿಯನ್ನು ಎದುರಿಸುವುದು ಸುಲಭ” ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ
ಅವರು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆಯೋಜಿಸಿದ್ದ ” ನ್ಯಾಕ್ ಪರಿಶೀಲನೆ :ಆತಂಕ ಮತ್ತು ಸವಾಲುಗಳು” ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ಕುಲಪತಿಗಳಾದ ಪ್ರೊ ಬಿ ಪಿ ವೀರಭದ್ರಪ್ಪ ಅವರು ವಹಿಸಿದ್ದರು.
” ಭಾರತೀಯ ಶಿಕ್ಷಣ ಪರಂಪರೆಗೆ ಉನ್ನತ ಸ್ಥಾನವಿದೆ. ಶಿಕ್ಷಣ ಸಂಸ್ಥೆಗೂ ಮತ್ತು ಸಮಾಜಕ್ಕೂ ಇರುವ ನಿರಂತರ ಸಂಬಂಧವನ್ನು ಗುಣಮಟ್ಟದ ಶಿಕ್ಷಣ ನೀಡಲು ನ್ಯಾಕ್ ಮಾನ್ಯತೆಯು ಅತ್ಯಂತ ಅವಶ್ಯಕವಾಗಿದೆ. ಶಿಕ್ಷಣ ಸಂಸ್ಥೆ,ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ನಿರಂತರ ಮೌಲ್ಯಮಾಪನದಲ್ಲಿ ಭಾಗಿಯಾಗಬೇಕಾಗಿದೆ.” ಎಂದರು.
ಕಾರ್ಯಕ್ರಮದಲ್ಲಿ ವಿ.ವಿ ಕುಲಸಚಿವರಾದ ಪ್ರೊ. ನವೀನ್ ಕುಮಾರ್ ಎಸ್. ಕೆ, ವಾಣಿಜ್ಯಶಾಸ್ತ್ರವಿಭಾಗದ ಡೀನ್ ಪ್ರೊ.ವೆಂಕಟೇಶ್ ಎಸ್., ಐಕ್ಯೂ ಎಸಿ ಸಂಚಾಲಕರಾದ ಡಾ.ಸರಳಾ ಕೆ ಎಸ್ ಉಪಸ್ಥಿ ತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ. ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಕುಂದನ್ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.