Tuesday, October 1, 2024
Tuesday, October 1, 2024

ಜಾತಿಯ ವಿಷಬೀಜ ಬಿತ್ತುವವರನ್ನ ಕಿತ್ತೊಗೆಯುವ ಸಮಯ ಬಂದಿದೆ- ಕೆ.ಎಸ್.ಈಶ್ವರಪ್ಪ

Date:

ಶಿವಮೊಗ್ಗ:
ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದೆ. ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ನಿಜಶರಣ ಅಂಬಿಗರ ಚೌಡಯ್ಯ ಈ ನಾಡು ಕಂಡ ಅಪರೂಪದ ಮಹಾನ್ ಪುರಷ. ನಮ್ಮಲ್ಲಿ ಹಿರಿಮೆ ಇರಬೇಕು. ಕೀಳರಿಮೆ ಅಲ್ಲ ಎಂದು ತೋರಿದವರು. ಅನುಭವ ಮಂಟಪದಲ್ಲಿ ಯಾವುದೇ ಮುಲಾಜಿಲ್ಲದೇ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಿಜವಾದ ಧ್ವನಿಯಾಗಿದ್ದ ಅವರನ್ನು ಬಸವಣ್ಣನವರು ನಿಜಶರಣ ಎಂದು ಕರೆದಿದ್ದಾರೆ.

ಹಿಂದೆ ಭಾರತ ವಿಶ್ವಗುರು ಆಗಿದ್ದು ನಡುವಿನಲ್ಲಿ ಬಡ ರಾಷ್ಟ್ರವಾಗಿತ್ತು. ಇದೀಗ ಮತ್ತೆ ಇಂತಹ ಮಹಾನ್ ಪುರುಷರ ಪರಿಶ್ರಮದಿಂದಾಗಿ ವಿಶ್ವಗುರುವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರ ಸಬಲವಾಗುತ್ತಿದೆ. ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ದಿಗೆ ಬದ್ದವಾಗಿದೆ. ಅಭಿವೃದ್ದಿ ಕಾರ್ಯಕಗಳನ್ನು ಕೈಗೊಂಡಿದೆ ಎಂದ ಅವರು ಶಿವಮೊಗ್ಗದಲ್ಲಿ ಸಮಾಜದ ಏಳ್ಗೆಗಾಗಿ ದುಡಿದ ಗಾಂಧಿ ಬಸಪ್ಪನವರ ಹೆಸರನ್ನು ಸರ್ಕಲ್ ಮತ್ತು ರಸ್ತೆಗೆ ಇಡಲು ಸರ್ಕಾರ ನಿರ್ಧರಿಸಿದೆ.ಫೆ.08 ರಂದು ಮಾನ್ಯ ಮುಖ್ಯಮಂತ್ರಿಗಳು ನಾಮಕರಣ ಮಾಡುವರು ಎಂದು ಇದೇ ವೇಳೆ ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಸಹ ಅಗ್ರಗಣ್ಯರು. ಲೋಕ ಕಲ್ಯಾಣಕ್ಕಾಗಿ ಸ್ವಂತ ಒಡೆತನದ ಭೂಮಿಯನ್ನು ದಾನ ಮಾಡಿದ ಮಹಾನ್ ಶರಣರು ಇವರಾಗಿದ್ದು ಸಾಮಾಜಿಕವಾದ ಅನೇಕ ವಿರೋಧಗಳ ನಡುವೆಯೂ ವಚನ ಸಾಹಿತ್ಯದ ಮೂಲಕ ಸುಧಾರಣೆ ತಂದವರು. ದೋಣಿಗೆ ಹುಟ್ಟು ಹಾಕುವ ಮೂಲಕ ನಂಬಿದವರಿಗೆ ದಡ ಸೇರಿಸುವ ಮಹಾನ್ ಕಾಯಕಯೋಗಿ ಎಂದರು.

ಅಕ್ಕಮಹಾದೇವಿ ಜನ್ಮಸ್ಥಳವಾದ ಶಿಕಾರಿಪುರದಲ್ಲಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ನಾಡಿನ 30 ಶರಣರ ಪುತ್ಥಳಿಗಳನ್ನು ಅನಾವರಣ ಮಾಡಲಾಗುತ್ತಿದೆ. ಅದರಲ್ಲಿ ಅಂಬಿಗರ ಚೌಡಯ್ಯನವರ ಪುತ್ಥಳಿ ಸಹ ಇದ್ದು 12 ನೇ ಶತಮಾನದ ಮಹಿಳಾ ಧ್ವನಿಯಾದ ಅಕ್ಕಮಹಾದೇವಿಯವರ ಸುಮಾರು 75 ಅಡಿಗಿಂತ ಎತ್ತರದ ಪುತ್ಥಳಿಯನ್ನು ಅನಾವಣ ಮಾಡಲಾಗುತ್ತಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಉಪ ಕುಲಸಚಿವರಾದ ಡಾ.ಶ್ರೀಶೈಲ ಸಿ ಹರಕಂಚಿ ಇವರು ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಅಪರ ಜಿಲ್ಲಾಧಿಕರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಅವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಇತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...