ಚಿಕ್ಕಮಗಳೂರು: ಹಬ್ಬ ಹಾಗೂ ನಗರಸಭಾ ಅಧ್ಯಕ್ಷರ ಕಚೇರಿ ನವೀಕರಣ ಕಾರ್ಯದಲ್ಲಿ ಸಾರ್ವಜನಿಕರ ಕಂದಾಯದ ಲಕ್ಷಾಂತರ ರೂ.ಗಳ ಹಣವನ್ನು ಬೇಕಾಬಿಟ್ಟಿ ವ್ಯಯಿಸಿ ಹಗಲು ದರೋಡೆ ನಡೆಸುವ ಜೊತೆಗೆ ಹಬ್ಬವನ್ನು ಬಿಜೆಪಿಯ ಚುನಾವಣಾ ಉತ್ಸವದಂತೆ ಜಿಲ್ಲಾಳಿ ಡತವು ಆಚರಿಸುತ್ತಿದೆ ಎಂದು ಜೆಡಿಎಸ್ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಚಿಕ್ಕಮಗಳೂರು ಹಬ್ಬದ ಕಾರ್ಯಕ್ರಮದ ವೇದಿಕೆಗಳಲ್ಲಿ ಬಿಜೆಪಿ ಹೊರತುಪಡಿಸಿ ಬರ‍್ಯಾವ ಪಕ್ಷದವರಿಗೂ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂ ಘಿಸಿದ್ದಾರೆ. ಜಿಲ್ಲಾಡಳಿತದ ಕಾರ್ಯಕ್ರಮವನ್ನು ಬಿಜೆಪಿಯು ಚುನಾವಣಾ ರೀತಿಯಲ್ಲಿ ಬಳಸಿಕೊಂಡು ಸಾರ್ವಜನಿಕರ ಹಣವನ್ನು ಪುಕಟೆ ವ್ಯಯಿಸುತ್ತಿದೆ ಎಂದು ದೂರಿದ್ದಾರೆ.
ಜಿಲ್ಲಾ ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಗೌಡ ಆಸ್ಪತ್ರೆ ಸಮೀಪದಲ್ಲಿದ್ದ ಪಾದಚಾರಿಗಳ ಪುಟ್ ಬಾತ್‌ನ್ನು ತರಾತೂರಿಯಲ್ಲಿ ದುರಸ್ಥಿಗೊಳಿಸುವ ಮೂಲಕ ಕಳಪೆ ಕಾಮಗಾರಿ ಎಸಗಲಾಗಿದೆ. ಜೊತೆಗೆ ಸರ್ಕಲ್ ಸಮೀಪದಲ್ಲಿ ಮೇಕ್ ಇಂಡಿಯಾ ಸಂಬಂಧಿಸಿದ ಪ್ರತಿಮೆಯನ್ನು ಕೇವಲ 20 ದಿನಗಳಲ್ಲಿ ಕೆಲಸ ಪೂರ್ಣ ಗೊಳಿಸಿರುವುದು ಎಷ್ಟರ ಮಟ್ಟಿಗೆ ಸೂಕ್ತವೆನಿಸಿದೆ ಎಂದು ಪ್ರಶ್ನಿಸಿದ್ದಾರೆ.
ಹಿರೇಮಗಳೂರು ಹಾಗೂ ನಗರದ ಹೆರಿಗೆ ಆಸ್ಪತ್ರೆಯ ಸಮೀಪದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಕೆಲಸ ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಆದರೆ ಆಜಾದ್‌ಪಾರ್ಕ್ನಲ್ಲಿ ರಾಜಕೀಯ ದುರುದ್ದೇಶದಿಂದ ತಮಗೆ ಬೇಕಾದ ರೀತಿಯಲ್ಲಿ ಪ್ರತಿಮೆ ಕಾಮಗಾರಿಗಳನ್ನು ಪೂರೈಸುತ್ತಿ ರುವುದು ಗಮನಿಸಿದರೆ ದಲಿತರ ಮೇಲೆ ಅಸಡ್ಡೆ ವಹಿಸಲಾಗುತ್ತಿದೆ ಎಂದು ದೂರಿದ್ದಾರೆ.
ನಗರಸಭಾ ಕಚೇರಿಯು ಸ್ಥಾಪನೆಯಾಗಿ ಹತ್ತು ವರ್ಷಗಳು ಕಳೆದಿವೆ. ಇದಾದ ನಂತರ ಕಟ್ಟಡ ನಿರ್ಮಾಣದ ವೇಳೆಯಲ್ಲಿ ಗುಣಮಟ್ಟ ಕಾಪಾಡದೇ ಹಿನ್ನೆಲೆಯಲ್ಲಿ ಕಚೇರಿಯ ಬಿಲ್ಡಿಂಗ್‌ನ ಗೋಡೆಗಳು ಶಿಥಿಲೀಕರಣವಾಗಿ ಬಿರುಕು ಬಿಟ್ಟಿವೆ ಹಾಗೂ ಸೋರಿಕೆಯು ಕಾಣುತ್ತಿವೆ. ಕಟ್ಟಡ ನಿರ್ಮಾಣ ವೇಳೆಯಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ನಿರ್ವಹಣೆ ಕೆಲಸವನ್ನು ನಿಭಾಯಿಸದೇ ಅವರಿಂದಲೂ ಕಮೀಷನ್ ಆಸೆಯಿಂದಾಗಿ ದುರಸ್ಥಿ ಕಾಮಗಾರಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಇಂದಿಗೆ ನಗರಸಭಾ ಅಧ್ಯಕ್ಷರ ಅವಧಿ ಒಂದು ವರ್ಷ ಪೂರೈಸಿದ್ದು ಅಧ್ಯಕ್ಷರ ಕೊಠಡಿ ನವೀಕರಣ ಕ್ಕಾಗಿ ಸಾರ್ವಜನಿಕರ ಕಂದಾಯದ ೫೦ ಲಕ್ಷ ರೂ. ವ್ಯಯಿಸಿ ಸ್ವಂತ ರೀತಿಯಲ್ಲಿ ಅಧ್ಯಕ್ಷರು ಬಳಕೆ ಮಾಡಿ ಕೊಳ್ಳಲಾಗುತ್ತಿದೆ. ಇದರ ನಡುವೆ ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಬೇಕೆಂಬ ನಿರ್ಣಯವನ್ನು ಕಳೆದ ಸಭೆಯಲ್ಲಿ ತೀರ್ಮಾನಿಸಿದ್ದರೂ ಸಹ ಹತ್ತು ತಿಂಗಳ ಭತ್ಯೆಯ ಹಣವನ್ನು ನೀಡದೇ ಸತಾಯಿ ಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದಲ್ಲಿ ನಗರಸಭಾ ಆಡಳಿತವು ಬೀದಿಬದಿ ವ್ಯಾಪಾರಸ್ಥರಿಗೆ ಅನೇಕ ಬಾರಿ ತೊಂದರೆ ನೀಡಿ ವ್ಯವಹಾರಕ್ಕೆ ಅವಕಾಶ ನೀಡಿರುವುದಿಲ್ಲ. ಇದೀಗ ಚುನಾವಣಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಶಾಸಕರ ಪರ ಹಾಗೂ ಚುನಾ ವಣೆಯ ಪ್ರಚಾರಕ್ಕಾಗಿ ನಗರಸಭಾ ಕಾರ್ಯನಿರ್ವಹಿಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಲು ನಗರಸಭಾವು ನಾನಾರೀತಿಯ ದಾಳಿಗಳು ನಡೆಸಿರುವುದು ಸಂತಸದ ವಿಷಯ. ಆದರೆ ಸಣ್ಣಪುಟ್ಟ ಅಂಗಡಿಗಳು ಹಾಗೂ ಸೂಪರ್‌ಮಾರ್ಕೆಟ್‌ಗಳಲ್ಲಿ ತಿಂಗಳಲ್ಲಿ ಅನೇಕ ಬಾರಿ ದಾಳಿ ನಡೆಸಿ ದಂಡ ಹಾಕುವ ನಗರಸಭಾ ಅಧ್ಯಕ್ಷರು, ದಂಡ ಹಾಕಿದ ಮೊತ್ತದ ಮಾಹಿತಿ ಯನ್ನು ನೀಡುತ್ತಿಲ್ಲ. ಹಾಗಾದರೆ ದಂಡದ ಹಣವು ಎಲ್ಲಿ ವ್ಯಯವಾಗುತ್ತಿದೆ ಎಂದು ಸೂಕ್ತವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಉತ್ಸವದಲ್ಲಿ ವಿಐಪಿ ಹಾಗೂ ವಿವಿಐಪಿ ಪಾಸ್‌ಗಳಿಗೆ ವಿತರಣೆ ಸಂಬಂಧಪಟ್ಟಂತೆ ನಗರಸಭಾ ಸದಸ್ಯರಿಗೆ 2 ಪಾಸ್, ವಿಧಾನ ಪರಿಷತ್ ಸದಸ್ಯರಿಗೆ 10 ಪಾಸ್ ಮಾತ್ರ ವಿತರಿಸಲಾಗಿದೆ. ಆದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಕೈಯಲ್ಲೂ ಒಂದೊಂದು ಪಾಸ್‌ಗಳನ್ನು ವಿತರಿಸಲಾಗಿದ್ದು ಹಬ್ಬದಲ್ಲಿ ಎಷ್ಟು ಪಾಸ್ ಮುದ್ರಿಸಿ ಹಂಚಲಾಗಿದೆ ಎಂದು ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಖಾಸಗೀ ಉದ್ಯಮಿಗಳು ಸಹಯೋಗದೊಂದಿಗೆ ಜಿಲ್ಲಾ ಉತ್ಸವ ಆಚರಣೆ ಮಾಡಲಾಗು ತ್ತಿದೆ. ಇದನ್ನು ಹೊರತುಪಡಿಸಿ ನಗರಸಭಾದಿಂದ ಸಾಕಷ್ಟು ಅನುದಾನವನ್ನು ಹಬ್ಬಕ್ಕಾಗಿ ವ್ಯಯಿಸಿದ್ದರೂ ಇದುವರೆಗೂ ನಗರಸಭಾ ಹೆಸರನ್ನೇಳದೇ ಮುಚ್ಚಿಟ್ಟು ಅಲ್ಲಿಯೂ ಹಣವನ್ನು ಕಬಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೇವಲ ಸ್ಥಳೀಯ ಜನಪ್ರತಿನಿಧಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದರ ನಡುವೆ ಶಾಸಕರ ಹಿಂಬಾಲಕರು ಸಾರ್ವಜನಿಕರ ಹಣದಲ್ಲಿ ಇಂತಿಷ್ಟು ಕಮೀಷನ್ ಎಂದು ಹೆಸರೇಳಿಕೊಂಡು ಹಣವನ್ನು ದೋಚುವಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ನಗರಸಭಾದಿಂದ ಬಿಡುಗಡೆಯಾಗುತ್ತಿರುವ ಅನವಶ್ಯಕ ಹಣಕ್ಕೆ ಕಡಿವಾಣ ಹಾಕಬೇಕು ಹಾಗೂ ಜಿಲ್ಲಾ ಹಬ್ಬ ಮುಗಿದ ಕೂಡಲೇ ಒಂದುವಾರಗಳಲ್ಲಿ ಖರ್ಚಿನ ಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವ ಕೆಲಸ ಮೊದಲಾಗಬೇಕು ಎಂದು ಒತ್ತಾಯಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.