Wednesday, October 2, 2024
Wednesday, October 2, 2024

ದಂಡಿಗೆ ಬೆತ್ತ ಹಿಡಿದು ದಣಿಯದೆ ಹಾಡಿದವರು

Date:

ಶ್ರೀ ಪುರಂದರ ದಾಸರು ಕನ್ನಡನಾಡು ಕಂಡ ಹಾಡಿನ ಮೂಲಕ ಧರ್ಮ ಪ್ರಸಾರವನ್ನು ಕೈಗೊಂಡ ಅಪ್ರತಿಮ ಹರಿದಾಸವರೇಣ್ಯರು. ಕನ್ನಡ ಭಾಷೆಗೆ ವಿಶಿಷ್ಟವಾದ ಮೆರುಗನ್ನು ತಮ್ಮ ಗೀತೆಗಳ ಮೂಲಕತಂದುಕೊಟ್ಟ ಮಹಾನುಭಾವರು.

ದಾಸರು ಪೂರ್ವ ಜೀವನದಲ್ಲಿ ಮಹಾ ಜಿಪುಣಾ
ಗ್ರೇಸರರೆಂದು ಪ್ರಸಿದ್ಧಿ ಪಡೆದ ಇವರು ನಂತರ ಸರ್ವಸ್ವವನ್ನೂ ದಾನಮಾಡಿ ದಾನ ಶೂರರೆನಿಸಿದ್ದು ವಿಶಿಷ್ಟ ದೈವ ಸಂಕಲ್ಪ.

ನವಕೋಟಿ ಎನ್ನಿಸಿದ ಮಹಾ
ಲಕ್ಷ್ಮಿಯನ್ನು ತೊರೆದು ಅವಳ ಪತಿಯಾದ ಶ್ರೀಮನ್ನಾರಾಯಣನನ್ನು ಆರಾಧಿಸಿದ್ದು ಇವರ ಜೀವನದ ಅಮೋಘ ಸಾಧನೆ.

ಕೇವಲ, ಮಹಾಲಕ್ಷ್ಮಿಯ ಉಪಾಸನೆ ಒಂದರಿಂದಲೇ ಜೀವನದಲ್ಲಿ ಸಾರ್ಥಕ್ಯ ಸಾಧ್ಯವಾಗುವುದಿಲ್ಲ. ಲಕ್ಷ್ಮೀರಮಣನಾದ ನಾರಾಯಣನ ಉಪಾಸನೆಯಿಂದ ಜೀವನ ಸಾರ್ಥಕ್ಯ ಪಡೆಯಬಹುದೆಂಬುದನ್ನು ಮಾನವ
ಕೋಟಿಗೆ ತೋರಿಸಿಕೊಟ್ಟ ಮಹಿಮರು. ಪೂರ್ವ ಜೀವನದಲ್ಲಿ ಚಿನಿವಾರ ವೃತ್ತಿಯಿಂದ ಬೆಳ್ಳಿ, ಬಂಗಾರದ ವ್ಯಾಪಾರಿಗಳಾಗಿದ್ದರೆ ಅನಂತರದಲ್ಲಿ ತಮ್ಮ ಪದಗಳ ಗಾಯನದ ಮೂಲಕ ಸಂಗೀತದ ಸುವರ್ಣ ಸುಧೆಯನ್ನು ಹರಿಸಿದ ಗೀತಾಚಾರ್ಯರು.

ಇವರ ಈ ಮಹಾನ್ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಕೈಹಿಡಿದ ಧರ್ಮಪತ್ನಿ ಸರಸ್ವತೀ
ಬಾಯಿಯವರ ಧರ್ಮಶ್ರದ್ಧೆಯೇ ಪ್ರಮುಖವಾದ
ಕಾರಣವೆಂದು ಹೇಳಬಹುದು.

ಪುರಂದರದಾಸರು ಎಷ್ಟು ಜಿಪುಣತನವನ್ನು ಹೊಂದಿದ್ದರೋ ಅಷ್ಟೇ ಹೆಚ್ಚಿನ ಧಾರಾಳತನವನ್ನು ಹೊಂದಿದ್ದವರು. ಶ್ರೀಮತಿ
ಸರಸ್ವತೀ ಬಾಯಿಯವರು. ಇದರ ಸ್ಮರಣೆಗೆಂಬಂತೆ” ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿ
ದಳಯ್ಯ”ಎಂದು ಪುರಂದರದಾಸರು ಹೆಂಡತಿಗೆ ಕೃತಜ್ಞತೆಯನ್ನು ಈ ಕೃತಿಯಲ್ಲಿ ಹೇಳಿದ್ದಾರೆ.

“ಹೆಂಡತಿ ಸಂತತಿ ಸಾವಿರವಾಗಲಿ…
ದಂಡಿಗೆ ಬೆತ್ತ ಹಿಡಿಸಿದಳಯ್ಯಾ,
ಪತಿಯು ಸನ್ಮಾರ್ಗವನ್ನು ಹಿಡಿಯಲು ಪತ್ನಿಯಾದವಳು ವಹಿಸಬೇಕಾದ ಎಚ್ಚರಿಕೆಯ
ತಿಳುವಳಿಕೆಯನ್ನು ಸರಸ್ವತೀ ಬಾಯಿಯವರಿಂದ
ತಿಳಿದುಕೊಳ್ಳಬಹುದಾಗಿದೆ.

ಶ್ರೀವ್ಯಾಸರಾಯರಂತಹ ಶ್ರೇಷ್ಠಯತಿಗಳನ್ನು ಗುರುಗಳಾಗಿ ಪಡೆದ ಮಹಾನುಭಾವರು ಶ್ರೀಪುರಂದರ
ದಾಸರು. ಅಂದು ವಿಜಯನಗರವೆಂದು ಕರೆಸಿಕೊಂಡ ಇಂದಿನ ಹಂಪೆ ಇವರ ಹರಿದಾಸ ಜೀವನದ ಮುಖ್ಯ ಕಾರ್ಯಕ್ಷೇತ್ರವಾಗಿದ್ದು, ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ. ಪುರಂದರದಾಸರ ದೇಶ ಸಂಚಾರ ಕೇವಲ ತೀರ್ಥಕ್ಷೇತ್ರ ದರ್ಶನ ಮಾತ್ರ ಆಗಿರದೇ,ತೀರ್ಥಕ್ಷೇತ್ರ ಮಹಿಮೆಯ ಪ್ರಸಾರ ಕಾರ್ಯವೂ ಆಗಿ ಜ್ಞಾನ
ಪ್ರಸಾರ ಕಾರ್ಯವೆನಿಸಿತು.

ಸಂಗೀತ ಪಿತಾಮಹರೆಂದು ಕರೆಸಿಕೊಂಡವರು ಶ್ರೀಪುರಂದರದಾಸರು.ಅವರತ್ಯಾಗಮಯಜೀವನ,ಅವರಲ್ಲಿದ್ದ ಅಪಾರವಾದ ತೇಜಸ್ಸು,ಅಪಾರವಾದ ಭಕ್ತಿ,ಸಂಗೀತಜ್ಞಾನ,ಎಲ್ಲಕ್ಕಿಂತಹೆಚ್ಚಾಗಿಪಾಮರರಿಗೆ,ಅಬಾಲವೃದ್ಧರಿಗೆ ಅರ್ಥವಾಗುವಂತೆ ಅವರು ರಚಿಸಿದ ಹಾಡುಗಳಲ್ಲಿ ಕಂಡ ಸರಳವಾದ ಭಾಷೆ. ಈ ಎಲ್ಲ ಗುಣಗಳೂ ಅವರನ್ನು ಜನಪ್ರಿಯರನ್ನಾಗಿಸಿತು.

ಸಾಮಾನ್ಯ ಜನರು ಜೀವನದಲ್ಲಿ ಸಮಾಧಾನ ಬೇಕೆನಿಸಿದಾಗ,ಧೈರ್ಯಗುಂದಿದಾಗ,ಸ್ಫೂರ್ತಿಯ ಅವಶ್ಯಕತೆ ಬೇಕಾದಾಗ,ಉತ್ಸಾಹ ಉಕ್ಕಿ ಬಂದಾಗ ಪುರಂದರದಾಸರು, ರಚಿಸಿದ ನುಡಿಮುತ್ತುಗಳನ್ನು ನೆನೆಸಿಕೊಂಡುಆನಂದವನ್ನು ಪಡೆದಿದ್ದಾರೆ.

ಇವರು ರಚಿಸಿರುವ ಹಾಡುಗಳಲ್ಲಿ ಕಂಡುಬರುವ ಸರಳವಾದ ಶೈಲಿ ಎಲ್ಲರ ಅಂತರಂಗವನ್ನು ಹೊಕ್ಕು ನಾಡಿನಲ್ಲಿ
ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡಿವೆ ಮತ್ತು ಉತ್ಸಾಹ ತುಂಬಿ ದೈವಭಕ್ತಿಯನ್ನು ಪ್ರೇರೇಪಿ
ಸಿವೆ. ಕೀರ್ತನೆ ಸಾಹಿತ್ಯದಲ್ಲಿ ಪುರಂದರ ದಾಸರದ್ದು ಬಹುದೊಡ್ಡ ಕೊಡುಗೆ,ಅದರಲ್ಲೂ ಕರ್ನಾಟಕ ಸಂಗೀತಕ್ಕೆಸಲ್ಲಿಸಿರುವಕೊಡುಗೆಬಹಳಅಪಾರ
ವಾಗಿದೆ. ಅವರು ಸಲ್ಲಿಸಿರುವ ಈ ಅಮೂಲ್ಯ ಸೇವೆಗಾಗಿಯೇ ಅವರನ್ನು ಸಂಗೀತ ಪಿತಾಮಹ ಎಂದು ಕರೆಯುತ್ತಾರೆ.

“ದಾಸರೆಂದರೆಪುರಂದರದಾಸರಯ್ಯ”ಎಂದು ಶ್ರೀವ್ಯಾಸರಾಯರಿಂದಲೇ ಮೆಚ್ಚುಗೆ ಪಡೆದಂತಹ ದಾಸ ಶ್ರೇಷ್ಠರು ಶ್ರೀಪುರಂದರದಾಸರು.

ಇವರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆ ಸಾಮಾಜಿಕ ಕಳಕಳಿಯನ್ನೂ ಸಾರುವಂತಹ ಸಾಹಿತ್ಯವಿದೆ. ಶೈಲಿಇದೆ. ಇವರ ಕೀರ್ತನೆಗಳು ಮನಸ್ಸಿಗೆ ಮುದವನ್ನುಕೊಡುತ್ತವೆ. ಶ್ರೀಪುರಂದರದಾಸರ ಕೃತಿಗಳು ಸಾರ್ವಕಾಲಿಕವಾಗಿ ಸತ್ಯವೂ,ಸುಲಲಿತವೂ ಮತ್ತು ಸುಂದರವೂ ಆಗಿವೆ.ಕೀರ್ತನೆಗಳನ್ನು ರಚಿಸಿ,ಹಾಡಿ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತೆ ಪ್ರಚಾರಮಾಡಿದ ರೀತಿ ಅನುಪಮವಾಗಿದೆ.

ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಮಾತನ್ನು ಪುರಂದರದಾಸರ ಕೀರ್ತನೆಯಿಂದ ತಿಳಿಯಬಹುದು.

“ಆಚಾರವಿಲ್ಲದನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ”.
ಯಾವುದೇ ಕಾರಣವಿಲ್ಲದೆ ಬೇರೆಯವರನ್ನು ದೂಷಿಸುವುದಕ್ಕೆಂದೇ ಚಾಚಿ ಕೊಂಡಿರುವಂಥ ನಾಲಿಗೆ ಎಂದು ತಿಳಿಸುವುದರಮೂಲಕ ಸಮಾಜವನ್ನು ತಿದ್ದುವ ಕಾರ್ಯಕ್ಕೂ ಮುಂದಾದ ದಾಸರ ಕೊಡುಗೆ ಅಮೂಲ್ಯವಾಗಿದೆ.

ಇವರು ಗೀತೆ ಗಳನ್ನು ರಚಿಸಿ ಜನ ಸಾಮಾನ್ಯರಿಗೂ ಕನ್ನಡ ಸಾಹಿತ್ಯಕ್ಕೂ ಚಿರವಾದ ಬೆಸುಗೆಯನ್ನು ಗಂಟು ಹಾಕಿದವರು ಶ್ರೀದಾಸರು.
ಶ್ರೀದಾಸರು ತಮ್ಮ ಹಾಡುಗಳ ಮೂಲಕ ಈ ಐಹಿಕ ಭೋಗ ಭಾಗ್ಯಗಳೆಲ್ಲ ಅಸ್ಥಿರ,ಭಗವಂತನ ಕರುಣೆಯೊಂದೇ ಸ್ಥಿರ ಎಂದು ತಿಳಿಯಪಡಿಸಿದವರು.

ಶ್ರೀಪುರಂದರ ವಿಠಲನ ಪರಮಾನುಗ್ರಹ ಪಾತ್ರರಾದ ಅವರು ಹೋದ ದಾರಿಯೇ ಹೆದ್ದಾರಿ,ನುಡಿದ ಮಾತೇ ದಿವ್ಯೋಪದೇಶ,ಅವರು ಮಾಡಿದ ಕಾರ್ಯವೇ ಲೋಕಕ್ಕೆ ಮಾದರಿ.ಮಿತಿಮೀರಿದ ಧನಲೋಭದಿಂದ ಕಿಲುಬು ಹಿಡಿದಿದ್ದ ಅವರ ಹೃದಯವು ಪುರಂದರ ವಿಠಲನಮೇಲಿನ ಭಕ್ತಿಯಿಂದ ಶುದ್ಧವಾದ ಸುಧಾ ಕಲಶವಾಯಿತು.

ಜಿಪುಣಾಗ್ರೇಸರ ಚಕ್ರವರ್ತಿಯಾಗಿದ್ದ ಶ್ರೀನಿವಾಸ ನಾಯಕರು ಭಕ್ತ ಪುರಂದರದಾಸರಾದರು.
ಇಂತಹ ದಾಸ ಶ್ರೇಷ್ಠರು ಹರಿಪಾದವನ್ನು ಸೇರಿದ್ದು ಶಾಲಿ ವಾಹನಶಕ 1486ರ ಪುಷ್ಯಮಾಸದ ಬಹುಳ
ಅಮಾವಾಸ್ಯೆಯಂದು ಹಂಪಿಯಲ್ಲಿ.

ಇಂತಹ ಮಹಾಮಹಿಮರನ್ನು ,ಪರಮಭಾಗವತ
ರನ್ನು,ಹರಿದಾಸ ಶ್ರೇಷ್ಠರನ್ನು ನೆನೆವ ದಿನವೇ ಸುದಿನ.ಪುಷ್ಯಮಾಸದ ಬಹುಳ ಅಮಾವಾಸ್ಯೆ
ಶ್ರೀಪುರಂದರದಾಸರ ಆರಾಧನೆಯ ದಿನನಾವೂ
ಅವರ ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಗುರುಪುರಂದರದಾಸರೇ ನಿಮ್ಮ ಚರಣ ಸರಸಿಜ ನಂಬಿದೆ.
ಗರುವ ರಹಿತನ ಮಾಡಿ ಎಮ್ಮನು
ಪೊರೆವ ಭಾರವು ನಿಮ್ಮದೆ…

ಬರಹ:
ಎನ್.ಜಯಭೀಮ್ ಜೊಯಿಸ್.
ಶಿವಮೊಗ್ಗ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...