ಶಿವಮೊಗ್ಗ: ಪರಿಣಿತಿ ಕಲಾಕೇಂದ್ರದ 8ನೇ ವರ್ಷದ ಸಂಭ್ರಮದ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಜನವರಿ 21 ಹಾಗೂ 22ರ ಸಂಜೆ 5ಕ್ಕೆ 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾಗರ ನಗರದ ಗಾಂಧಿ ಮೈದಾನದಲ್ಲಿ ಜನವರಿ 21ರ ಸಂಜೆ 5ಕ್ಕೆ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಸಾಗರ ಶಾಸಕ ಹರತಾಳು ಹಾಲಪ್ಪ ಅವರು 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಉದ್ಘಾಟಿಸುವರು.
ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಛಲವಾದಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಎಚ್., ಉದ್ಯಮಿ ಟಿ.ವಿ.ಪಾಂಡುರಂಗ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಸಿದ್ದಪ್ಪ, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ ಪಾಲ್ಗೊಳ್ಳುವರು.
ಎಲ್.ಬಿ. ಎಸ್.ಬಿ.ಎಸ್ ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮೀಶ ಎ.ಎಸ್, ಉದ್ಯಮಿ ಎಸ್.ಡಿ.ವೀರಪ್ಪ, ಆರಗ ಚಂದ್ರಶೇಖರ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಅರವಿಂದ ರಾಯ್ಕರ್, ಗಣೇಶ್ ಪ್ರಸಾದ್, ತುಕರಾಮ್ ಉಪಸ್ಥಿತರಿರುವರು.
ಸಾಗರ ನಗರದ ಗಾಂಧಿ ಮೈದಾನದಲ್ಲಿ ಜನವರಿ 22ರ ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್ ಹಿರಿಯ ವಕೀಲ ಕೆ.ದಿವಾಕರ್, ಭಾರತೀಯ ವಿದ್ಯಾಭವನ ಜಂಟಿ ನಿರ್ದೇಶಕ ವೇಣುಗೋಪಾಲ್, ವಿಠ್ಠಲ್ ಪೈ ಹೆಗ್ಗೋಡು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
2 ದಿನ ಆಯೋಜಿಸಿರುವ 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಕಾರ್ಯಕ್ರಮದಲ್ಲಿ ಸಾಗರ ಬಳಸಗೋಡಿನ ನಮನ ಎಸ್ ಅವರಿಂದ ಯೋಗ ಪ್ರದರ್ಶನ ನಡೆಯಲಿದೆ.
ಬೆಂಗಳೂರು, ಕೇರಳ, ಪಶ್ಚಿಮ ಬಂಗಾಳ, ಮಲೇಷಿಯಾ ಸೇರಿ ವಿವಿಧೆಡೆಯಿಂದ ಕಲಾವಿದರು ನೃತ್ಯ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಪರಿಣಿತಿ ಕಲಾಕೇಂದ್ರದ ವಿದ್ವಾನ್ ಎಂ.ಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.