Friday, November 22, 2024
Friday, November 22, 2024

ಬಾಲ ಗಂಗಾಧರನಾಥ ಶ್ರೀಗಳು ಅನ್ನ ಮತ್ತು ಜ್ಞಾನ ದಾಸೋಹಿಯಾಗಿದ್ದರು

Date:

ಚಿಕ್ಕಮಗಳೂರು: ಸಂಪತ್ತು ಶಾಶ್ವತವಲ್ಲ, ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಿದವರು ಹಾಗೂ ಲೋಕಕ್ಕಾಗಿ ಬದುಕಿದ ಮಹನೀಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತಿ ಯನ್ನು ನಾವು ಆಚರಿಸಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ನಗರದ ಗೃಹಮಂಡಳಿಯ ಬಿಜಿಎಸ್ ಶಾಲೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಪೂಜ್ಯ ಸ್ವಾಮೀಜಿಯವರು ಶಿಕ್ಷಣ, ಆರೋಗ್ಯ, ಅನ್ನದಾನಿ ಹಾಗೂ ಪರಿಸರ ಪ್ರೇಮಿಯಾಗಿದ್ದವರು. ಜೊತೆಗೆ ಅವರ ಮೊಗದಲ್ಲಿ ಚಂದ್ರನ ತೇಜಸ್ಸು ಕಾಣುತ್ತಿತ್ತು ಎಂದು ತಿಳಿಸಿದರು.
ಶಿಕ್ಷಕರು ಲೌಕಿಕ ಬದುಕಿಗೆ ಪಾಠ ಮಾಡುತ್ತಾರೆ, ಹಾಗೆಯೇ ಶ್ರೀಗಳು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಸಾಕ್ಷಿ ಯಾಗಿ ಪ್ರವಚನ ನೀಡುತ್ತಾರೆ. ಬಾಲಗಂಗಾಧರ ಸ್ವಾಮೀಜಿಯವರು ಇಂದು ಅನ್ನ ದಾಸೋಹ, ಜ್ಞಾನ ದಾಸೋಹ, ಪರಿಸರ ಪ್ರೇಮಿಯಾಗಿದ್ದವರು, ಹೆಣ್ಣಾಗಿ ಹೊಟ್ಟೋದಕ್ಕಿಂತ, ಮಣ್ಣಾಗಿ ಹುಟ್ಟಿದರೆ, ಮಣ್ಣೀನ ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯಾವಂತರಿಗೆ ನೆರಳಾಗುತ್ತೀಯ ಎಂಬ ಅದ್ಭುತ ನುಡಿಗಳ ನ್ನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ತಿಪ್ಪೇರುದ್ರಪ್ಪ, ಮುಳ್ಳಿನ ಹಾದಿಯನ್ನು ಬೇಧಿಸಿ ದೇಶ-ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ನಿರ್ಮಾಣ ಮಾಡಿದವರು ಸ್ವಾಮೀಜಿ, ಇಂತಹ ಮಹಾನ್ ವ್ಯಕ್ತಿಗಳ ಚರಿತ್ರೆ ನಮ್ಮ ಬದುಕಿನ ಸನ್ಮಾರ್ಗದೆಡೆಗೆ ತೆಗೆದುಕೊಂಡು ಹೋಗುವುದು. ಶ್ರೀಗಳು ಸಂಘಜೀವಿ, ನಮ್ಮೊಂದಿಗೆ ಕುಳಿತು ಪ್ರಸಾದ ಸ್ವೀಕರಿಸುತ್ತಿದ್ದರು.

ಅನ್ನದಾಸೋಹಿ, ಜ್ಞಾನದಾಸೋಹಿ, ಪರಿಸರ ಪ್ರೇಮಿ, ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ ಮಹಾನ್ ವ್ಯಕ್ತಿ ಇವರು.

ತಂತ್ರಗಾರಿಕೆ ಬೆಳೆಯಬೇಕು ಎಂಬ ಉದ್ದೇಶದಿಂದ ಚಿಕ್ಕಮಗಳೂರಿನಲ್ಲಿ ತಂತ್ರ ಜ್ಞಾನ ಕಾಲೇಜನ್ನು ಸಹ ಸ್ಥಾಪಿಸಿದರು.

ಶ್ರೀಗಳು ಕೇವಲ ಮಠದ ಸ್ಥಾಪಕರಾಗಲಿಲ್ಲ, ಸಮಾಜ, ಸಂಘಟನೆ, ಶಿಕ್ಷಣವನ್ನು ಬೆಳೆಸಿದರು. ಇವರನ್ನು ಜ್ಞಾನಪೂರ್ಣ ಜಗನ್ ಜ್ಯೋತಿ, ಸುಜ್ಞಾನ ಜ್ಯೋತಿ ಎಂದು ಸಹ ಕರೆಯುವರು ಎಂದರು.

ಬಿಜಿಎಸ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಜೆ.ಜಿ.ಸುರೇಂದ್ರ ಮಾತನಾಡಿ ಬಾಲಗಂಗಾಧರನಾಥ ಸ್ವಾಮೀಜಿಯವರು ದೇಶಕ್ಕೆ ಸಿಕ್ಕಿರುವ ಮಹಾನ್ ಚೇತನ, ಸುಮಾರು 400 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಇವರು ಪ್ರತಿ ಹಳ್ಳಿಗಳ ಬಡ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು ಎಂಬುದು ಸ್ವಾಮೀಜಿಯವರ ಆಶಯವಾಗಿತ್ತು. 5 ಕೋಟಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಗುರಿ ಸ್ವಾಮೀಜಿಯವರು ಹೊಂದಿದ್ದರು ಎಂದು ತಿಳಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯುತ್ಸವದ ಅಂಗವಾಗಿ ಬಿಜಿಎಸ್ ಶಾಲೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಗೃಹಮಂಡಳಿ ಬಡಾವಣೆಯ ಮುಖ್ಯರಸ್ತೆಯನ್ನು ಸ್ವಚ್ಛಗೊ ಳಿಸುವ ಮೂಲಕ ಶ್ರಮದಾನ ಮಾಡಿ ಸ್ವಾಮೀಜಿಯವರಿಗೆ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇ ಖರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು. ಹತ್ತನೇ ತರಗತಿ ವಿದ್ಯಾರ್ಥಿನಿ ವರ್ಷ ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಪಿಯು ವಿದ್ಯಾರ್ಥಿನಿ ಭೂಮಿಕ ಸ್ವಾಗತಿಸಿ, ಹತ್ತನೇ ತರಗತಿ ವಿದ್ಯಾರ್ಥಿನಿ ಪೂರ್ವಿಕ ವಂದಿಸಿ, ಸಹಶಿಕ್ಷಕಿ ಪಲ್ಲವಿ ನಿರೂಪಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...