Saturday, November 23, 2024
Saturday, November 23, 2024

ಜೆಸಿಐ ಸಮಾಜಮುಖಿ ಕಾರ್ಯಗಳಿಗೆ ಸರ್ಕಾರಿ ನೌಕರರ ಸಂಘದ ಸಹಕಾರವಿದೆ- ಷಡಕ್ಷರಿ

Date:

ಶಿವಮೊಗ್ಗ : ಕಾರ್ಯಕ್ರಮ ಶಿಸ್ತು, ಸಂಯಮಕ್ಕೆ ಜೆಸಿಐ ಮಾದರಿಯಾಗಿದೆ ಅಲ್ಲದೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮಾಜಮುಖಿಯಾಗಿ ಅಮೂಲಾಗ್ರ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿಎಸ್.ಷಡಾಕ್ಷರಿಯವರು ತಿಳಿಸಿದರು.

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಜೆಸಿಐ ಶಿವಮೊಗ್ಗ ಶರಾವತಿ ಘಟಕದ 5ನೇ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ನಿರಂತರವಾಗಿ ಜೆಸಿಐ ಸಂಸ್ಥೆ ಮಹಿಳಾ ಸಬಲತೆ, ನಾಯಕತ್ವ ರೂಪಿಸುವಿಕೆ, ಪರಿಸರದ ಕಾಳಜಿ, ವಿವಿಧ ಸಮುದಾಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಆಯಾ ಘಟಕಗಳಿಗೆ ಸ್ವಂತದ ಕಚೇರಿ ಹೊಂದಿರುವುದಿಲ್ಲ ಬದಲಿಗೆ ಆ ವರ್ಷದ ಘಟಕಾಧ್ಯಕ್ಷರ ಮನೆಯೇ ಕಛೇರಿಯಾಗಿಸಿಕೊಂಡು ಅಚ್ಚುಕಟ್ಟಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಶ್ಲಾಘನೀಯವಾಗಿದೆ.

ಮುಂದಿನ ದಿನಗಳಲ್ಲಿ ಜೆಸಿಐ ಸಂಸ್ಥೆಯಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮವಾಗಿರಲಿ ಉಚಿತವಾಗಿ ಈ ನೌಕರರ ಭವನವನ್ನು ಉಪಯೋಗಿಸಿಕೊಳ್ಳಬಹುದು ಎಂದು ಸಿ.ಎಸ್ ಷಡಾಕ್ಷರಿಯವರು ಭರವಸೆ ನೀಡಿದರು.

ಅಧಿಕಾರ ಎನ್ನುವುದು ಶಾಶ್ವತವಲ್ಲ. ಅಧಿಕಾರ ಲಭಿಸಿದಾಗ ಅಂತಹ ಆವಕಾಶವನ್ನು ಸದುಪಯೋಗಪಡಿಸಿಕೊಂಡು ಜನಮಾನಸದಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದಾಗ ಮಾತ್ರವೇ ಅಧಿಕಾರ ಸಿಕ್ಕಿದ್ದಕ್ಕೂ ಸಾರ್ಥಕ ಎಂದು ಅವರು ನುಡಿದರು.

ಇಂತಹ ಹಾದಿಯಲ್ಲಿ ಸುಧೀರ್ಘ ಒಂದು ವರುಷದ ಅವಧಿಯಲ್ಲಿ ಜೆಸಿ. ಸೌಮ್ಯ ಅರಳಪ್ಪನವರು ಮೆಚ್ಚುಗೆಯ ಕೆಲಸಗಳನ್ನು ಮಾಡಿದ್ದಾರೆ. ಇದಕ್ಕೆ ಅವರ ಕುಟುಂಬದವರ ಬೆಂಬಲ ಕಾರಣ ಎಂದು ತಿಳಿದಾಗ ನಾವು ನಮ್ಮ ನೌಕರರ ಸಂಘಟನೆಯಲ್ಲಿ ಕುಟುಂಬದವರನ್ನು ಜೋಡಿಸಿಕೊಂಡರೆ ಕೆಲಸಗಳು ಸುಗಮವಾಗಬಹುದು ಎಂದು ತಿಳಿಸಿದ್ದರಲ್ಲದೆ ಕಾರ್ಯಕ್ರಮದ ಅಭಿವೃದ್ದಿಗಳು, ಪರಸ್ಪರ ಹೊಂದಾಣಿಕೆ, ಜೆಸಿಐ ಶಿಷ್ಟಾಚಾರಗಳು ಗಮನ ಸೆಳೆದಿದೆ ಎಂದರು. ಹೀಗೆಯೇ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿರುವ ಜೆಸಿ.ಶೋಭಾ ಸತೀಶ್‌ರವರು ಇನ್ನೂ ಹೆಚ್ಚಿನ ಒಳಿತಿನ ಸಮಾಜಮುಖಿ ಕೆಲಸಗಳು ಮಾಡುವಂತಾಗಲಿ ಇದಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ನೌಕರರ ಸಂಘದಿಂದಲೂ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಜೆಡಿಎಸ್ ರಾಜ್ಯ ವಕ್ತಾರರು ಹಾಗೂ ಜಿಲ್ಲಾಧ್ಯಕ್ಷರಾಗಿರುವ ಎಂ.ಶ್ರೀಕಾಂತ್‌ರವರು ಮಾತನಾಡಿ, ಸಮಾಜಸೇವೆಯಲ್ಲಿ ತಾಳ್ಮೆ ಇರಬೇಕು ಇಲ್ಲದಿದ್ದರೆ ಸೇವೆ ಅಪೂರ್ಣ ಎಂದು ಅವರು ಅಭಿಪ್ರಾಯಿಸಿದರು.

ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಅಧ್ಬುತ ಕಾರ್ಯಕ್ರಮಗಳನ್ನು ರೂಪಸಿ ಸಾಗುತ್ತಿರುವುದು ಗಮನಿಸಿದ್ದೇನೆ.

ಹಿಂದಿನ ಅವಧಿಯಲ್ಲಿ ನಡೆದ ಮಂಗಳಮುಖಿ ಕಾರ್ಯಕ್ರಮ ನಿಜಕ್ಕೂ ನಾಗರೀಕ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.

ಮಂಗಳಮುಖಿಯರ ಪ್ರತಿನಿಧಿ ಅಕ್ಕಯ್ಯನವರ ಕುರಿತಾದ ನಾಟಕರೂಪಕವನ್ನು ನಾವು ಹಮ್ಮಿಕೊಳ್ಳುವುದಕ್ಕೆ ಪ್ರೇರಣೆಯಾಗಿತ್ತು ಎಂದರೆ ತಪ್ಪಾಗಲಾರದು ಎಂದು ಎಂ.ಶ್ರೀಕಾಂತ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್‌ರವರ ನೇತೃತ್ವದ ತಂಡಕ್ಕೂ ಸಹಕಾರ ಇದ್ದೇ ಇರುತ್ತದೆ ಎಂದು ಅವರು ತಿಳಿಸಿ ನೂತನ ತಂಡಕ್ಕೆ ಹಾರೈಸಿದರು.

2022ರ ಅವಧಿಯ ವರದಿಯನ್ನು ಓದಿ ತಿಳಿಸಿ ಜೆಸಿಗಳ ಸ್ಪಂದನೆಯನ್ನು ಸ್ಮರಿಸಿ ನೆನಪಿನ ಕಾಣಿಕೆಯನ್ನು ಜೆಸಿ. ಸೌಮ್ಯ ಅರಳಪ್ಪನವರು ನೀಡಿದರು.

ನೂತನ ಅಧ್ಯಕ್ಷರಾ ಜೆ.ಸಿ.ಶೋಭಾ ಸತೀಶ್‌ರವರಿಗೆ ವಲಯ-24ರ ಅಧ್ಯಕ್ಷರಾದ ಜೆಸಿ.ಅನುಷ್‌ಗೌಡರವರು ಪ್ರಮಾಣವಚನ ಬೋಧಿಸಿದರು. 2023ರ ಅವಧಿಯ ಎಲ್‌ಜಿಬಿ ತಂಡಕ್ಕೆ ನೂತನ ಅಧ್ಯಕ್ಷರಿಂದ ಪ್ರಮಾಣವಚನ ಬೋಧಿಸಲಾಯಿತು. ನೂತನ ಜೆಸಿ ಸದಸ್ಯರಿಗೆ ವಲಯ ಉಪಾಧ್ಯಕ್ಷರಾದ ಜೆಸಿ. ಸತೀಶ್ ಚಂದ್ರರವರು ಪ್ರಮಾಣವಚನ ಬೋಧಿಸಿದರು.

ವೇದಿಕೆಯಲ್ಲಿ 2022ರ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪ, 2023ರ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್, ಕಾರ್ಯದರ್ಶಿಗಳಾದ ಜೆಸಿ.ಮಮತಾ ಶಿವಣ್ಣ, ವಲಯಾಧ್ಯಕ್ಷರಾದ ಜೆಸಿ.ಅನುಷ್ ಗೌಡ, ವಲಯ ಉಪಾಧ್ಯಕ್ಷರಾದ ಜೆಸಿ.ಸತೀಶ್ ಚಂದ್ರ, ಜೆಜೆಸಿ ವಿಭಾಗದ ಅಧ್ಯಕ್ಷರಾದ ಜೆಜೆಸಿ ನಿಶಾಂತ್ ಎಸ್ ಗಾರಾ, ಲೇಡಿ ಜೆಸಿ ವಿಭಾಗದ ಜೆಸಿ.ದಿವ್ಯಾ ಪ್ರವೀಣ್ ಸೇರಿದಂತೆ ಘಟಕದ ಐಪಿಪಿ ಜೆಸಿ.ಮೋಹನ್ ಕಲ್ಪತರು, ಕಾರ್ಯಕ್ರಮದ ಪಿಡಿ. ಜೆಸಿ ಎಂ.ಡಿ ಯಾಹ್ಯರವರುಗಳು ಉಪಸ್ಥಿತರಿದ್ದರು.

ಪದಗ್ರಹಣದಲ್ಲಿ ಘಟಕದ ಎಲ್ಲಾ ಜೆಸಿಗಳು ಹಾಗೂ ಶಿವಮೊಗ್ಗದ ಎಲ್ಲಾ ಜೆಸಿಐ ಘಟಕದವರು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...