ಶಿವಮೊಗ್ಗ: ವಿಷಪೂರಿತ ಆಹಾರ ನೀಡಿ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಆಗ್ರಹಿಸಿದ್ದಾರೆ.
ಪ್ರತಿನಿತ್ಯ ಹಾಸ್ಟೆಲ್ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಂಡಿದ್ದ ವಿವಿಧ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳನ್ನು ಭಾನುವಾರ ಯೋಗ ಕಾರ್ಯಕ್ರಮದ ನೆಪದಲ್ಲಿ ಶಿವಮೊಗ್ಗ ನೆಹರು ಕ್ರೀಡಾಂಗಣಕ್ಕೆ ಕರೆಸಿಕೊಂಡು ವಿಷಪೂರಿತ ಆಹಾರ ನೀಡಿರುವುದೇ ಮಕ್ಕಳು ಅಸ್ವಸ್ಥರಾಗಲು ಪ್ರಮುಖ ಕಾರಣ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ವಿಷಪೂರಿತ ಆಹಾರ ನೀಡಿದ್ದರೇ ಅಲ್ಲಿನ ಎಲ್ಲಾ ಮಕ್ಕಳು ಅಸ್ವಸ್ಥರಾಗಬೇಕಿತ್ತು, ಆದರೆ, ಯೋಗ ಕಾರ್ಯಕ್ರಮಕ್ಕೆ ಹೋಗಿ ಬಂದವರಿಗೆ ಮಾತ್ರವೇ ಅನಾರೋಗ್ಯ ಕಂಡು ಬಂದಿದೆ. ಅಲ್ಲಿ ಮಕ್ಕಳಿಗೆ ಅವಧಿ ಮೀರಿದ ಎಳ್ಳು, ಬೆಲ್ಲ, ಮಜ್ಜಿಗೆ ನೀಡಿರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳ ಬಗ್ಗೆ ನೂರೆಂಟು ಕನಸು, ಆಸೆಗಳನ್ನು ಕಟ್ಟಿಕೊಂಡು ಶಾಲೆ, ಹಾಸ್ಟೆಲ್‌ಗಳಿಗೆ ಸೇರಿಸಿದ್ದಾರೆ. ಆದರೆ, ಈ ಘಟನೆಯಿಂದ ಪೋಷಕರು ಭಯಭೀತರಾಗಿದ್ದಾರೆ. ಹಲವೆಡೆ ಹಾಸ್ಟೆಲ್‌ಗಳಿಗೆ ಪೋಷಕರನ್ನು ಕರೆಯಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ಎನ್ನುವ ದೃಶ್ಯಾವಳಿಗಳು ಕಾಣುತ್ತಿವೆ. ಇದರಿಂದ ಪೋಷಕರು ದಿಕ್ಕುತೋಚದಂತಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ: ಮಕ್ಕಳಿಗೆ ಆಹಾರ ನೀಡುವ ಮುನ್ನ ಹತ್ತಾರು ಬಾರಿ ಪರಿಶೀಲಿಸಬೇಕು. ಆದರೆ, ಯಾವುದೇ ಮುನ್ನೆಚ್ಚರಿಕೆ ಇಲ್ಲದ ಆಹಾರ ನೀಡಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡಸಬೇಕು, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.