ಚನ್ನಗಿರಿ ಅನ್ನೋ ಪುಟ್ಟ ಊರಿಂದ, ಬೆಂಗಳೂರು ಅನ್ನೋ ಮಹಾನಗರಕ್ಕೆ ಬಂದು, ಅದ್ರಲ್ಲೂ ಸಿನಿಮಾರಂಗ ಅನ್ನೋ ಸಾಗರಕ್ಕೆ ಬೀಳೋಕೆ ದೊಡ್ಡ ಸ್ಫೂರ್ತಿ #ಹಂಸಲೇಖ ಗುರುಗಳೇ ನೀವೇ. ಇಲ್ಲಿಂದ ಏನೇ ಬಂದ್ರೂ ಎಲ್ಲವೂ ನಿಮಗೆ ಅರ್ಪಣೆ ನನಗೆ ಸಿನಿಮಾರಂಗ ಬದುಕೋದು ಹೇಗೆ ಅನ್ನೋದನ್ನ ಬಹಳಾ ಚೆನ್ನಾಗ್ ಕಲಿಸಿದೆ. ಈ ಸಿನಿಮಾ ನನ್ನ ಬದುಕನ್ನ ನಾನು ಜೀವಿಸುವ ಹಾಗೆ ಮಾಡ್ತು. ಹಾಗೇ ತುಂಬಾ ಹೊಸತುಗಳನ್ನ ಕೊಟ್ಟಿದೆ. ನಾನೂ ಸಿನಿಮಾದಲ್ಲಿ ಕೆಲಸ ಮಾಡ್ಬೇಕು, ನನ್ ಹೆಸರು ಕೂಡ ಸ್ಕ್ರೀನ್ ಮೇಲೆ ಬರ್ಬೇಕು ಅನ್ನೊದು ಬಹಳ ವರ್ಷಗಳ ಕನಸು. ಕನಸು ಕಾಣೋದು ಸುಲಭವೇ. ಆದ್ರೆ ಅದನ್ನ ತನ್ನದಾಗಿ ಗಿಟ್ಟುಸ್ಕೊಳೋದಿದಿಯಲ್ಲಾ, ಅದಕ್ಕೆ ಬಹಳಾನೇ ಶ್ರದ್ಧೆ, ಶ್ರಮ, ಸಮಯ, ಸಮಾಧಾನ, ಹೋರಾಟ, ಪ್ರೀತಿ ಎಲ್ಲವೂ ಬೇಕು. ನನಗೆ ಅದು ಈ ಹಾಡಿನ ಬಿಡುಗಡೆಯ ಮೂಲಕ ನೆರವೇರ್ತಿದೆ. ಇದಕ್ಕೆಲ್ಲ ಕಾರಣ ಅನ್ನದಾತರಾದ Hoysala Nimmondige ಸರ್. ನಿಮಗೆ ಸದಾ ಋಣಿ ಸರ್ . ಹಾಗೇ ಈ ಹಾಡುಗಳ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು, ಕೂತು, ನಡೆದು ಕೆಲಸ ಮಾಡಿದ ದೇಸಿ ಮೋಹನ್ ಅಣ್ಣಾ ನಿಮಗೂ ಸದಾ ಋಣಿ. ಇವರ ಸಂಗೀತವಿರುವ ಈ ಹಾಡುಗಳನ್ನ ಕೇಳಿದ್ರೆ ಖಂಡಿತ ನಮ್ಮ ಮಣ್ಣಿನ ಸೊಗಡಿನ, ವಿದ್ಯಾವಂತ ಸಂಗೀತ ನಿರ್ದೇಶಕನೊಬ್ಬ ನಮ್ಮ ಸಿನಿಮಾರಂಗಕ್ಕೆ ಸಿಕ್ಕ ಖುಷಿ, ಹೆಮ್ಮೆ ಎಲ್ಲವೂ ಆಗತ್ತೆ. ಇನ್ನೂ ನಿರ್ದೇಶಕ Raj Kumar Aski ಇವನ ಬಗ್ಗೆ ಸಿನಿಮಾ ರಿಲೀಸ್ ಟೈಮ್ ಅಲ್ಲಿ ಮಾತಾಡ್ತಿನಿ. ಆದ್ರೆ ಈ ದೊಡ್ಡ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಶಿವು..ಇನ್ನು ಕೇವಲ ಮೂರು ಘಂಟೆಯಲ್ಲಿ ನಮ್ಮ ಕೂಸು ನಿಮ್ಮ ಮಡಿಲಿಗೆ….ಕೇಳಿ, ನೋಡಿ, ಇಷ್ಟ ಆದ್ರೆ, ಯಾರೋ ಹೊಸ ಹುಡುಗರು ಚೆನ್ನಾಗ್ ಕೆಲಸ ಮಾಡಿದರಲ್ಲಾ ಅಂತ ಅನ್ಸಿದ್ರೆ, ಪ್ಲೀಸ್ ಮರಿದಲೇ ನಿಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲೂ ಶೇರ್ ಮಾಡಿ. ನಿಮ್ಮ ಪ್ರೀತಿ ಆಶೀರ್ವಾದವೇ ನಮಗೆ ಸಂಜೀವಿನಿ…
ಸಿನಿಮಾ ನೋಡಿ.ಹಾಡು ಕೇಳಿ.
ನಿಮ್ಮ
ವಾಗೀಶ್ ಚನ್ನಗಿರಿ