Monday, February 2, 2026
Monday, February 2, 2026

ಜಿಲ್ಲಾ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕ ಉದ್ಘಾಟನೆ

Date:

ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದಿದೆ.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗೋಪಾಲ್ ಯಡಗೆರೆ ಅಧಿಕೃತವಾಗಿ ಘೋಷಣೆ ಮಾಡಿದರು.

ಹೊಬಳಿ ಘಟಕದ ಅಧ್ಯಕ್ಷರಾಗಿ ಹೆಚ್.ಜಿ. ವಿಜಯರಾಜ್, ಉಪಾಧ್ಯಕ್ಷರಾಗಿ ರವಿಕುಮಾರ್ ಕಾರ್ಯದರ್ಶಿಯಾಗಿ ಕೆ. ರಂಗನಾಥ್ , ಖಜಾಚಿಯಾಗಿ ಕುಮಾರ್ ಅಗಸನಹಳ್ಳಿ
ಆಯ್ಕೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಮಾತನಾಡಿ, ಸಂಘಟನೆಯ ಮೂಲಕ ಪತ್ರಕರ್ತರಿಗೆ ಗರಿಷ್ಠ ಸವಲತ್ತುಗಳು ಸಿಗಬೇಕೆಂಬುದು ನಮ್ಮ ಗುರಿ. ಯಾರನ್ನೂ ಧ್ವೇಷಿಸದೇ ಎಲ್ಲರ ಪ್ರೀತಿಯಿಂದ ಸಂಘಟನೆ ಮಾಡುವುದು ನಮ್ಮ ಉದ್ದೇಶ ಎಂದರು.

ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಹೆಚ್.ಜಿ. ವಿಜಯರಾಜ್ ಮಾತನಾಡಿ, ಎಲ್ಲರೂ ಒಂದಾಗಿ ಸಾಗೋಣ. ಪತ್ರಕರ್ತರ ಏಳಿಗೆಗಾಗಿ, ಭದ್ರತೆಗಾಗಿ ಕೆಲಸ ಮಾಡೋಣ ಎಂದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ
ಎನ್. ಮಂಜುನಾಥ್ ಮಾತನಾಡಿ, ನಂಬಿಕೆಯೇ ನಮ್ಮ ಬಲ. ಪರಸ್ಪರ ನಂಬಿಕೆಯು ನಮ್ಮನ್ನು ಕಾಪಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಗೋ. ವ. ಮೋಹನ್, ಖಜಾಂಚಿ ಶಿವಮೊಗ್ಗ ನಂದನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಟ್ರಸ್ಟ್ ಪದಾಧಿಕಾರಿಗಳು, ಹಲವು ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...