ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ “ಸಿರಿಧಾನ್ಯಗಳ ಸಾರ ಜೀವಕ್ಕೆ ಆಧಾರ” ಎಂಬ ಧ್ಯೇಯ ವಾಕ್ಯದೊಂದಿಗೆ ಜನವರಿ 10, 11 ಮತ್ತು 12ರಂದು ಮೂರು ದಿನಗಳವರೆಗೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ “ಕೃಷಿಮೇಳ”ವನ್ನು ಆಯೋಜಿಸಿಲಾಗಿದೆ.
ಈ ಮೇಳದಲ್ಲಿ ಸಿರಿಧಾನ್ಯ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ನೀರು ಸಂರಕ್ಷಣೆ-ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಲಂಕಾರಿಕ ಮೀನು ಸಾಕಾಣಿಕೆ, ಬೀಜಗಳು, ಔಷಧೀಯ ಮತ್ತು ಸುಗಂಧಿತ ಸಸ್ಯಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕರು, ಜೈವಿಕ ಗೊಬ್ಬರಗಳು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಪಶುಸಂಗೋಪನೆ, ಸ್ವ-ಸಹಾಯ ಗುಂಪುಗಳ ಸಬಲೀಕರಣ, ಉನ್ನತ ತೋಟಗಾರಿಕೆ ತಂತ್ರಜ್ಞಾನ, ಗುಡಿ ಕೈಗಾರಿಕೆಗಳು, ಕೃಷಿ ಯಂತ್ರೋಪಕರಣಗಳು, ಕೊಯ್ಲು ಮತ್ತು ಕೊಯ್ಲೋತ್ತರ ಯಂತ್ರಗಳು, ಹನಿ ಮತ್ತು ತುಂತುರು ನೀರಾವರಿ, ಬೀಜ ಸಂಸ್ಕರಣೆ ಮತ್ತು ಆಹಾರ ಸಂಸ್ಕರಣಾ ಯಂತ್ರಗಳು, ಸಾಂಪ್ರದಾಯಿಕವಲ್ಲದ ಶಕ್ತಿ ಉಪಕರಣಗಳು, ನೈಜ ಬೆಳೆಗಳ ಪ್ರಾತ್ಯಕ್ಷಿಕೆ, ರೈತರಿಂದ ರೈತರಿಗೆ-ವಿಶೇಷ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಜಾನುವಾರು-ಮತ್ಸ್ಯ ಪ್ರದರ್ಶನ ಇವು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಈ ಕಾರ್ಯಕ್ರಮಕ್ಕೆ ಆಸಕ್ತ ರೈತರು, ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಚಟುವಟಿಕೆಗಳ ಮಾಹಿತಿ ಹೊಂದಬೇಕೆಂದು ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಸಿ.ಎಂ.ಕಾಲಿಬಾವಿ ಅವರು ತಿಳಿಸಿದ್ದಾರೆ.