ಚಿಕ್ಕಮಗಳೂರು: ಪ್ರಜಾಪ್ರಭುತ್ವ ರಕ್ಷಿಸುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂ ಗ ಎಂಬ ಆಧಾರಸ್ಥಂಬಗಳು ಸಮಯಪ್ರಜ್ಞೆ ಮತ್ತು ಮಾನವೀಯ ಧರ್ಮದಲ್ಲಿ ರೈತರ ಭೂ ಕಂದಾಯ ಕಾಯ್ದೆಯ ಅಧ್ಯಾಯ ಬಗ್ಗೆ ನ್ಯಾಯಯುತವಾಗಿ ಪರಿಹಾರ ನೀಡುವಲ್ಲಿ ಶ್ರಮವಹಿಸಿದ್ದರೆ ಇಂದು ರೈತರು ಹೋರಾಟ ಮಾಡುವ ಅನಿವಾರ್ಯವಿರಲಿಲ್ಲ ಎಂದು ಆಮ್‌ಆದ್ಮಿ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ಅವರು ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ದೇಶದ ಬೆನ್ನೆಲುಬು ರೈತ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಅಧಿಕಾ ರಿಗಳಾಗಲೀ ಸ್ಥಳಕ್ಕೆ ಭೇಟಿ ನೀಡಿ ಅಹವಾಲನ್ನು ಸ್ವೀಕರಿಸದಿರುವುದು ಮಾನವೀಯತೆಗೆ ಬಹುದೂರವಾದ ಕಾಯಕವಾಗಿದೆ ಎಂದು ದೂರಿದ್ದಾರೆ..
ಕಳಸ ಜಿಲ್ಲಾಧಿಕಾರಿ ಕಚೇರಿಯಿಂದ 200 ಮೀ.ವರೆಗೆ ಯಾವುದೇ ಚಳುವಳಿಯನ್ನು ಮಾಡದಂತೆ ನಿಷೇಧ ವನ್ನು ಹೇರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತವಾಗಲಿ, ಜನಪ್ರತಿ ನಿಧಿಗಳಾಗಲೀ ಚಿಂತನೆ ನಡೆಸದೇ ಗಾಡನಿದ್ರೆಯಲ್ಲಿರುವುದು ಜನತಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಗೌರವವಾಗಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಅಪಘಾತವಾದಾಗ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೆ ಸರ್ಕಾರವೇ ಅವರಿಗೆ ನಗದು ನೀಡುವುದು. ಅಪಘಾತ ವ್ಯಕ್ತಿಯನ್ನು ನೋಡಿಕೊಳ್ಳುವುದು. ಉಚಿತ ಸೇವೆಯ ದೃಷ್ಟಿಯಲ್ಲಿ ಮೊಹಲ್ಲಾ ಕ್ಲೀನಿಕ್‌ಗಳನ್ನು ತೆರೆದು ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತಿದ್ದರೆ ಕರ್ನಾಟಕದಲ್ಲಿ ಈ ಯೋಜನೆಗಳನ್ನು ಯಾಕೆ ಜಾರಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಲು ಸಾರ್ವಜನಿಕರು ಮುಂದಾಗಬೇಕು. ಭ್ರಷ್ಟಾಚಾರವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಜೊತೆಗೆ ರಾಜ್ಯದಲ್ಲಿ ಎಎಪಿ ಯನ್ನು ಸಂಪೂರ್ಣವಾಗಿ ಬೆಂಬಲಿಸಿ ಅಧಿಕಾರ ನೀಡಿದ್ದಲ್ಲಿ ದೆಹಲಿ ಮಾದರಿಯ ಜನಪರ ಯೋಜನೆಗಳು ಹಾಗೂ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ರಾಜ್ಯದಲ್ಲಿ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
