ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು, ವಯೋವೃದ್ದರು, ಮಹಿಳೆಯರು ಮಕ್ಕಳು ಓಡಾಡುವುದು ಕಷ್ಟವಾಗಿದೆ ಹಾಗೂ ಸರಕು ತುಂಬಿದ ಭಾರಿ ವಾಹನಗಳು ಬಂದಲ್ಲಿ ಅವುಗಳನ್ನು ತೆರವುಗೊಳಿಸಲು ಸಾಕಷ್ಟ ಸಮಯ ಬೇಕಾಗಿದೆ. ಹಿಂದೆ ಬರುವ ಲಘು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಆದ್ದರಿಂದ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಮತ್ತು ಹಳೆಯ ಅಧಿಸೂಚನೆಯನ್ನು ಮಾರ್ಪಡಿಸಿ ಕೆಳಗಿನಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.
ಪಶ್ಚಿಮ ಮತ್ತು ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾಮ್ ಬಾಡಾದಿಂದ ಸೀಗೆಹಟ್ಟಿ, ಬಿಬಿ ಸ್ಟ್ರೀಟ್, ಆರ್ ಎಸ್ ಪಾರ್ಕ್, ಕೋಟೆ ರಸ್ತೆ ಮೂಲಕ ಬೆಕ್ಕನಕಲ್ಮಠ ಸರ್ಕಲ್‍ವರೆಗೆ, ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್‍ನಿಂದ ವಿನೋಬನಗರ ಪೊಲೀಸ್ ಚೌಕಿವರೆಗೆ ಹಾಗೂ ಎನ್.ಟಿ.ರಸ್ತೆಯ ಸಂದೇಶ್ ಮೋಟಾರ್ಸ್ ಸರ್ಕಲ್‍ನಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹೆಲಿಪ್ಯಾಡ್ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಸಾಗರ ರಸ್ತೆಯ ಎಪಿಎಂಸಿ ಗೇಟ್‍ವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್‍ವರೆಗೆ, ಬಾಲರಾಜ್ ಅರಸ್ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಕೆಇಬಿ ಸರ್ಕಲ್ ಸಿಗ್ನಲ್ ವರೆಗೆ ಹಾಗೂ ಬಿಹೆಚ್ ರಸ್ತೆಯಲ್ಲಿ ಅಮೀರ್ ಅಹಮದ್ ಸರ್ಕಲ್‍ನಿಂದ ಕರ್ನಾಟಕ ಸಂಘ ಸರ್ಕಲ್ ಮಾರ್ಗವಾಗಿ ಶಂಕರಮಠ ಸರ್ಕಲ್‍ವರೆಗೆ ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಹಳೆಯ ಅಧಿಸೂಚನೆಯ ಮಾರ್ಪಾಡು ಸಮಯ : ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ವೀರಶೈವ ಕಲ್ಯಾಣ ಮಂದಿರದಿಂದ ಗೋಪಿ ವೃತ್ತದವರೆಗೆ, ಬಿಹೆಚ್ ರಸ್ತೆಯಿಂದ ಮಹಾವೀರ್ ವೃತ್ತದವರೆಗೆ, ಚರ್ಚ್ ವೃತ್ತದಿಂದ ಮಹಾವೀರ್ ವೃತ್ತದವರೆಗೆ ಮತ್ತು ಮಹಾವೀರ್ ವೃತ್ತದಿಂದ ಚರ್ಚ್ ವೃತ್ತದವರೆಗೆ, ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ, ಎಸ್‍ಎಂವಿ ರಸ್ತೆ ಮೂಲಕ ಬಿಹೆಚ್ ರಸ್ತೆಗೆ ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ ಹಾಗೂ ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ, ಗೋಪಿ ವೃತ್ತದಿಂದ ಮಹಾವೀರ್ ವೃತ್ತದವರೆಗೆ, ಬಾಲರಾಜ್ ಅರಸ್ ರಸ್ತೆಯ ಮೂಲಕ ಮತ್ತು ಗೋಪಿ ವೃತ್ತದಿಮದ ಎಎ ವೃತ್ತದವರೆಗೆ, ಎಎ ಸರ್ಕಲ್‍ನಿದ ಗೋಪಿ ವೃತ್ತದವರೆಗೆ ನೆಹರು ರಸ್ತೆಯಲ್ಲಿ ಹಾಗೂ ಸರ್ ಎಂವಿ ರಸ್ತೆಯ ಮಹಾವೀರ್ ವೃತ್ತದಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ ಸೇರುವ ಕಾನ್ವೆಂಟ್ ರಸ್ತೆ, ವೀರಭದ್ರೇಶ್ವರ ಚಿತ್ರಮಂದಿರ ರಸ್ತೆ, ಬಾಲರಾಜ್ ಅರಸ್ ರಸ್ತೆ ಸರ್ವಜ್ಞ ವೃತ್ತದಿಂದ ಸರ್ಕಾರಿ ನೌಕರರ ಭವನದ ಬಡಾವಣೆ ರಸ್ತೆ ಹಾಗೂ ಅಶೋಕ ವೃತ್ತದಿಂದ ಎಎ ವೃತ್ತದವರೆಗೆ, ಹಳೇ ತೀರ್ಥಹಳ್ಳಿ ರಸ್ತೆಯ ಕೃಷಿ ಕಚೇರಿಯ ಕ್ರಾಸ್ ರಸ್ತೆಯಿಂದ ಎಎ ವೃತ್ತದವರೆಗೆ, ಕುವೆಂಪು ರಸ್ತೆಯಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಸವಾರ್‍ಲೈನ್ ರಸ್ತೆಯ ಲಕ್ಷ್ಮಿ ಮೆಡಿಕಲ್ ಕ್ರಾಸ್‍ನಿಂದ ನೆಹರು ರಸ್ತೆವರೆಗೆ, ಗಾರ್ಡನ್ ಏರಿಯಾ 1,2 ಮತ್ತು 3 ನೇ ಕ್ರಾಸ್‍ಗಳಲ್ಲಿ ಎಲ್‍ಎಲ್‍ಆರ್ ರಸ್ತೆಯ ಗುಜರಿ ಅಂಗಡಿ ಕ್ರಾಸ್‍ನಿಂದ ಶೃಂಗಾರ್ ಷೋರೂಂವರೆಗೆ, ವಿನೋಬನಗರದ ಪೊಲೀಸ್ ಚೌಕಿಯಿಂದ ರೈಲ್ವೆಟ್ರ್ಯಾಕ್ ಕಡೆ ಹೋಗುವ ರಸ್ತೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಾಗೂ ವಿನೋಬನಗರ ಮೊದಲನೇ ಹಂತದ 6ನೇ ತಿರುವಿನಲ್ಲಿ ಸರಕು ಸಾಗಣೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.