ಶಿವಮೊಗ್ಗ: ಅಬ್ದುಲ್ ಕಲಾಂ ಅವರು ಬಾಲ್ಯದಲ್ಲಿ ಪಕ್ಷಿಗಳಂತೆ ಹಾರಬೇಕೆಂಬ ಕನಸು ಕಂಡಿದ್ದರು. ಹಾಗೆಯೇ ಅವರು ರಾಷ್ಟçಪತಿಗಳಾಗಿದ್ದಾಗ ಯುದ್ಧ ವಿಮಾನದಲ್ಲಿ ಪ್ರಯಾಣ ಮಾಡುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡರು ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಧ್ಯಾರ್ಥಿಗಳ ೨೫ನೇ ವರ್ಷದ ರಾಜ್ಯ ಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವ ಕಾರ್ಯಕ್ರಮ ಸಂಸ್ಥೆಯ ಯೋಗ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಾಲದಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಈಗ ಎಲ್ಲ ಇದೆ. ವಿದ್ಯಾರ್ಥಿಗಳ ಅದನ್ನು ಸದ್ಬಳಕೆ ಮಾಡಿಕೊಂಡು ಕನಸುಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾನ ಎಂಬುದು ಪ್ರಕೃತಿಯಲ್ಲೇ ಇದೆ. ಇದನ್ನು ಸಿಎನ್‌ಆರ್ ರಾವ್ ಅವರು ಹೇಳಿದ್ದರು. ಕೆಂಪಿರಿವೆ ದೊಡ್ಡ ದೊಡ್ಡ ಎಲೆಗಳನ್ನ ಕೂಡಿಸಿ ಗೂಡುಕಟ್ಟುವುದು? ದೋಸೆಯಲ್ಲಿ ತೂತುಗಳು ಯಾಕೆ ಇರುತ್ತದೆ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಂಡಿಲ್ಲ. ಪ್ರಶ್ನೆಗಳನ್ನು ಹಾಕಿಕೊಂಡಾಗ ಉತ್ತರ ಸಿಗುತ್ತದೆ. ವಿಜ್ಞಾನ ತುಂಬಾ ಬೇಗ ಮುಂದುವರೆದಿದೆ, ಆದ್ದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದ ಕಡೆ ಅತಿ ಹೆಚ್ಚಿನ ಗಮನ ಹರಿಸಬೇಕು ವಿಜ್ಞಾನ ತುಂಬಾ ಬೇಗ ಮುಂದುವರೆದಿದೆ, ಆದ್ದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದ ಕಡೆ ಅತಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ಈ ಹಿಂದೆ ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕöÈತಿಕ ಸ್ಪರ್ಧೆಗಳನ್ನು ಒಟ್ಟಿಗೆ ನಡೆಸುತ್ತಿದ್ದೆವು. ಈ ಮೂರು ವಿಭಾಗಗಳಾಗಿ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಕೌಶಲ ಪ್ರದರ್ಶನ ಮಾಡಿ ಬಹುಮಾನಗಳಿಸಬೇಕು ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ವಿಜ್ಞಾನವನ್ನು ನಾವು ಉತ್ಸವದ ರೀತಿ ನೋಡಬೇಕು. ಹೊಸ ಬಗೆಯ ಆವಿಷ್ಕಾರ ನಡೆಸುವ ಕುತೂಹಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಸಾಧ್ಯ. ನಮ್ಮ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನಕ್ಕೆ ತುಂಬಾ ಆಳವಾದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಹೊಸ ಬಗೆಯ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಈ ರೀತಿಯ ಕಾರ್ಯಕ್ರಮ ಹಾಗೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಇದೇ ನಿಮಗೆ ಸಾಧನೆಯ ಮೆಟ್ಟಿಲಾಗಲಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವದಲ್ಲಿ ವಸ್ತು ಪ್ರದರ್ಶನ, ಚೆಸ್ ಕ್ರೀಡೆ, ಪಿಪಿಟಿ, ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾತ್ತು. ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಡಳಿತಾಧಿಕಾರಿ ಎ.ಟಿ ಶಿವರಾಂ, ನಿರ್ದೇಶಕರುಗಳಾದ ಡಿ.ವಿ.ಸತೀಶ್, ವಾಸಪ್ಪಗೌಡ, ಪ್ರಾಂಶುಪಾಲ ಎಸ್.ವಿ ಗುರುರಾಜ್, ಮುಖ್ಯ ಶಿಕ್ಷಕ ರಮೇಶ್ ಮತ್ತಿತರರು ಹಾಜರಿದ್ದರು.