ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ತಾ. ಕಸಾಪ, ತಾ. ಕಜಾಪ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹುಣಸವಳ್ಳಿ ಇವರ ಸಹಕಾರದಲ್ಲಿ ಸೊರಬ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹುಣಸವಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ಸಂಭ್ರಮದಿಂದ ನಡೆಯಿತು
ಬೆಳಿಗ್ಗೆ ಊರಿನ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಕು. ಮಾನ್ಯ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿರುವ ಐಶ್ವರ್ಯ ಸಿ. ವೈ. ಉದ್ಘಾಟಕರಾದ ಕು. ಸಾನಿಕಾ ಬಿ. ಗೌಡ ಅವರ ಮೆರವಣಿಗೆ ನಡೆಯಿತು.
ತಾ.ಕಸಾಸಾಂ ವೇದಿಕೆ ಅಧ್ಯಕ್ಷರಾದ ಡಿ. ಎಸ್. ಶಂಕರ್ ಆಶಯ ಮಾತುಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ತಾ.ಕಸಾಪ ಅಧ್ಯಕ್ಷರಾದ ಶಿವಾನಂದ ಪಾಣಿ, ಪ್ರಿನ್ಸಿಪಾಲ್ ಸಂತೋಷ ಕುಮಾರ್, ತಾ. ಕಜಾಪ ಅಧ್ಯಕ್ಷರಾದ ವಿಶ್ವನಾಥ ಹೆಚ್ಚೆ, ಆನವಟ್ಟಿ ಕಸಾಪ ಅಧ್ಯಕ್ಷರಾದ ಬಸವನಗೌಡ್ರು ಮಲ್ಲಾಪುರ, ಕಸಾಸಾಂ ವೇದಿಕೆ ಅಧ್ಯಕ್ಷರಾದ ಕಾರ್ತಿಕ್ ಸಾಹುಕಾರ್, ಕಜಾಪ ಅಧ್ಯಕ್ಷರಾದ ಖಲಂದರ್ ಸಾಬ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಹಾಲೇಶ್ ನವುಲೆ, ರೇಣಕಮ್ಮ ಗೌಳಿ, ಎಸ್. ಕೃಷ್ಣಾನಂದ, ಡಾ. ಉಮೇಶ್ ಸೊರಬ, ಶಿರಾಳಕೊಪ್ಪ ಮಂಜಣ್ಣ, ಸಂಜಯ್ ಡೋಂಗ್ರೆ, ಎಂ. ನವೀನ್ ಕುಮಾರ್, ಸಂಪತ್ ಕುಮಾರ್ ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.
ಸಿರಿಗೌರಿ ಎಸ್. ಡಿ. ತಂಡದವರು ಪ್ರಾರ್ಥಿಸಿದರು. ಕವಿತಾ ಬಾಯಿ ಸ್ವಾಗತಿಸಿದರು. ತನ್ಮಯ ವಂದಿಸಿದರು. ಸಂಜನಾ, ವಿನೋದ ನಿರೂಪಿಸಿದರು.
ವಿಚಾರ ಗೋಷ್ಠಿ ಯು ಮಂಯ ಗಾವಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕು. ವಿನುತ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾನಿಕಾ ಅಧ್ಯಕ್ಷತೆಯಲ್ಲಿ ಕಥಾ ಗೋಷ್ಠಿ ನಡೆಯಿತು. ಸುತ್ತಲಿನ ಶಾಲೆಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದರು.