ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ವತಿಯಿಂದ ರಾಷ್ಟ್ರಕವಿ ಕುವೆಂಪುರವರ 118 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಕುಪ್ಪಳಿಯ ಹೇಮಾಂಗಣದಲ್ಲಿ ಏರ್ಪಡಿಸಲಾಯಿತು.
ಉದ್ಘಾಟನೆಯನ್ನು ಸನ್ಮಾನ್ಯ ಜಿಲ್ಲಾಧಿಕಾರಿಗಳಾದ ಮಾನ್ಯಶ್ರೀ ಡಾ. ಆರ್.ಸೆಲ್ವಮಣಿರವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷರಾದ ಮಾನ್ಯಶ್ರೀ ಬಿ.ಎಲ್.ಶಂಕರ್ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ತೊದಲಬಾಗಿ, ತಹಶೀಲ್ದಾರ್ ಸನ್ಮಾನ್ಯ ಅಮೃತ್ ಅತ್ರೇಶ್, ನಾಡೋಜ ಸನ್ಮಾನ್ಯ ಶ್ರೀ ಹಂಪಾ ನಾಗರಾಜಯ್ಯ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಸನ್ಮಾನ್ಯ ಫ್ರೊ ಬಿ.ಪಿ.ವೀರಭದ್ರಪ್ಪ, ದೇವಂಗಿ ಗ್ರಾಪಂ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಅಮೂಲ್ಯ, 2022 ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸನ್ಮಾನ್ಯ ಶ್ರೀ ಇಮಯಮ್, ಗಾಂಧಿ ಚಿಂತಕರಾದ ಸನ್ಮಾನ್ಯ ಫ್ರೊ ಶಿವರಾಜ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಸರೋಜ, ಶ್ರೀ ನಾಗರಾಜ್ ಹಾಜರಿದ್ದರು.
ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್. ಸ್ವಾಗತಿಸಿ , ಪ್ರತಿಷ್ಠಾನದ ದೇವಂಗಿ ಮನುದೇವ್ ವಂದಿಸಿದರು.
ಶ್ರೀ ರಾಜೇಂದ್ರ ಬುರುಡಿಕಟ್ಟಿ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕವಿಶೈಲದಲ್ಲಿ ಕವಿನಮನವನ್ನು ಸಲ್ಲಿಸಲಾಯಿತು.