Saturday, November 23, 2024
Saturday, November 23, 2024

ವಸ್ತು ಖರೀದಿಸಿದಾಗ ಅಧೀಕೃತ ರಸೀದಿ ಪಡೆಯಿರಿ- ಡಾ.ಸೆಲ್ವಮಣಿ

Date:

ಯಾವುದೇ ವ್ಯಕ್ತಿ ತಾವು ಖರೀದಿಸುವ ವಸ್ತು, ವಸ್ತುವಿನ ಗುಣಮಟ್ಟ ಮತ್ತು ಅದರ ವಿಶೇಷತೆಗಳ ಬಗ್ಗೆ ಅರಿತು, ಅಧೀಕೃತ ಸ್ವೀಕೃತಿಯೊಂದಿಗೆ ಖರೀದಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತç ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಬಳಕೆದಾರರ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಚಂದನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಹಕರು ಖರೀದಿಸುವ ವಸ್ತುವಿನ ಮೇಲೆ ಸಂಬಂಧಿತ ಇಲಾಖೆಯ ಅಂಗೀಕೃತ ಆಗ್‌ಮಾರ್ಕ್ನ್ನು ಗಮನಿಸಬೇಕು. ಗ್ರಾಹಕರು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಲೋಪಯುಕ್ತ ಸರಕುಗಳು, ಸಮಾಧಾನಕರವಲ್ಲದ ಸೇವೆಗಳು, ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ದತಿಯನ್ನು ಕಂಡುಕೊಂಡರೆ ಅದರ ವಿರುದ್ಧ ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಆಹಾರ ಇಲಾಖೆಯ ಮೂಲಕ ಜನರಲ್ಲಿ ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿರುತ್ತದೆ. ಗ್ರಾಹಕರಿಗೆ ನೀಡುವ ಸೇವೆ, ಸರಕುಗಳಲ್ಲಿ ಲೋಪ ಉಂಟಾದಲ್ಲಿ ಗ್ರಾಹಕರು ತಮ್ಮ ಸಮೀಪದ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ತೆರಳಿ ದೂರು ಸಲ್ಲಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಗ್ರಾಹಕರ ಸೇವೆಗಳ ಅರಿವು ಹೊಂದಿರಬೇಕು. ವಸ್ತು ಅಥವಾ ಉತ್ಪನ್ನಗಳ ಮೇಲೆ ನಮೂದಿಸಿರು ಕಿರು ಮಾಹಿತಿಯನ್ನು ಕುತೂಹಲಕ್ಕಾಗಿಯಾದರೂ ಗಮನಿಸಬೇಕೆಂದವರು ನುಡಿದರು.

ಗ್ರಾಹಕರ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳು ತ್ವರಿತ ವಿಚಾರಣೆ ಮತ್ತು ವ್ಯಾಜ್ಯಗಳ ತ್ವರಿತ ಹಾಗೂ ಮಿತವೆಚ್ಚದಲ್ಲಿ ಅವುಗಳ ಇತ್ಯರ್ಥಕ್ಕೆ ಅವಕಾಶ ಒದಗಿಸಲಿದೆ. ಜೊತೆಗೆ ಗ್ರಾಹಕರಿಗೆ ನಿರ್ದಿಷ್ಟ ಪರಿಹಾರಗಳು ದೊರೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಆವಿನ್ ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕನೇ ಸಾರ್ವಭೌಮ. ನ್ಯಾಯಾಲಯಕ್ಕೆ ದಾಖಲಾಗುವ ದೂರುಗಳ ಸ್ವರೂಪವೇ ಬೇರೆಯದೇ ಅಗಿದೆ. ವಿವಿಧ ಕಂಪನಿ, ಬ್ಯಾಂಕ್ ಮತ್ತು ಇತರ ಸಡೇವೆಗಳ ಹೆಸರಿನಲ್ಲಿ ಮೊಬೈಲ್ ಕರೆ, ಎಸ್.ಎಂ.ಎಸ್., ಸಂದೇಶ, ವಾಯ್ಸ್ ಮೆಸೇಜ್‌ಗಳ ಮೂಲಕ ಗ್ರಾಹಕರನ್ನು ಸೆಳೆದು ಸುಲಭವಾಗಿ ಮೋಸಗೊಳಿಸುತ್ತಿವೆ. ಆದ್ದರಿಂದ ಡಿಜಿಟಲ್ ಹಣಕಾಸು ವ್ಯವಹಾರದ ಬಗ್ಗೆ ಪ್ರತಿಗಾಹಕನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನುa ಆಯೋಜಿಸಲಾಗುತ್ತಿದೆ.

ಆನ್‌ಲೈನ್, ಡಿಜಿಟಲ್ ಮತ್ತು ವಿವಿಧ ರೀತಿಯ ಆಫರ್‌ಗಳಲ್ಲಿ ಗ್ರಾಹಕರಿಗೆ ಜಾಗೃತಿ ಅಗತ್ಯವಾಗಿದೆ ಎಂದ ಅವರು, ಅನೇಕ ಕಂಪನಿಗಳು ತಪ್ಪು ಮಾಹಿತಿ ನೀಡಿ ನ್ಯೂನ್ಯತೆ ಇರುವ ಸರಕು ಸಾಮಾಗ್ರಿಗಳನ್ನು ಮಾರಾಟ ಮಾಡಿ, ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಸರಕು ಮಾರಾಟ ಮಾಡುವುದು ಅಪರಾಧ. ಈ ಕುರಿತು ಅಧಿಕಾರಿಗಳು, ಗ್ರಾಹಕರು ಎಚ್ಚರಿಕೆ ವಹಿಸಬೇಕೆಂದವರು ನುಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಯೋಗಾನಂದ ಭಾಂಡ್ಯ ಡಿ. ಅವರು ಗ್ರಾಹಕರ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ಪರಿಹಾರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಶಿವಣ್ಣ ಟಿ. ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಎಸ್.ನಾಗರಾಜ್, ಪ್ರೊ.ಹೆಚ್.ಎಂ.ಸುರೇಶ್, ಸಿ.ಎಲ್.ರಮೇಶ್, ಶ್ರೀಮತಿ ಶೀಲಾ ಸುರೇಶ್, ಸಾರಿಗೆ ಅಧಿಕಾರಿ ಗಂಗಾಧರ್, ಎಂ.ಎಂ.ಜಯಸ್ವಾಮಿ, ಮಂಜುನಾಥ ಎಸ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...