ಕಷ್ಟ ಪಟ್ಟರೆ, ಏನನ್ನಾದರೂ ಸಾಧಿಸಬೇಕು ಅನ್ನೋ ಇಚ್ಛಾಶಕ್ತಿ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು ಅನ್ನೋದಿಕ್ಕೆ ನೈಜ ಉದಾಹರಣೆ ಡಾ. ಬ್ರೋ
ನಮಸ್ಕಾರ ದೇವ್ರು ಒಂದು ತಕ್ಷಣ ನೆನೆಪಿಗೆ ಬರುವುದು ಡಾ. ಬ್ರೋ ಅವರ ಮುಖ, ಅವರ ವಿಡಿಯೋಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಂಪು ಸಾರುತ್ತಿರುವ ನಮ್ಮ ಡಾ.ಬ್ರೋ (Dr Bro).
ಹೌದು, ಯುಟ್ಯೂಬ್ ನಲ್ಲಿ ಡಾ .ಬ್ರೋ ಅಂತಾನೆ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ ತೋರಿಸುತ್ತಾರೆ.
ಹಾಗಾದರೆ , ಈ ಬ್ರೋ ಯಾರು? ಅನ್ನೋದಾದ್ರೆ, ಸೋಶಿಯಲ್ ಮೀಡಿಯಾ, ಯು ಟ್ಯೂಬ್ ನೋಡೋರಿಗೆ ಬ್ರೋ ಗೊತ್ತೇ ಇರ್ತಾರೆ. ದೇಶ ವಿದೇಶಗಳನ್ನು ಸುತ್ತುತ್ತಾ ವಿವಿಧ ದೇಶಗಳಲ್ಲಿ ಕನ್ನಡದ ಕಂಪನ್ನ ಹರಿಸುತ್ತಿದ್ದಾರೆ.
ದೇಶ ವಿದೇಶಗಳನ್ನು ಸುತ್ತಲೂ ಅವರು ಅಷ್ಟೋಂದು ಹಣ ಎಲ್ಲಿಂದ ಬರುತ್ತೆ? ಬ್ರೋ ಅವರ ಮೂಲ ಹೆಸರೇನು? ಅವರ ಇತಿಹಾಸವೇನು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಎಲ್ಲಿದೆ ನೋಡಿ …
ಡಾಕ್ಟರ್ ಬ್ರೋ ಅವರ ಅಸಲಿ ನೇಮ್ ಗಗನ್. ಮೂಲತಃ ಬೆಂಗಳೂರಿನವರು. ಇವರ ತಂದೆಯ ಹೆಸರು ಶ್ರೀನಿವಾಸ್. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ. ಅವರು ಹೌಸ್ ವೈಫ್. ಡಾ ಬ್ರೋಗೆ ಓದಿಕ್ಕಿಂತ ಹಾಡು, ಡ್ಯಾನ್ಸ್ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ.
ಡಾ. ಬ್ರೋ ಅವರು ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ಕಾರು ಓಡಿಸಲು ಶುರು ಮಾಡ್ತಾರೆ. ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಾರೆ. ಫೋಟೋಗ್ರಫಿ, ವಿಡಿಯೂ ಗ್ರಫಿಯೂ ಇವರಿಗೆ ಗೊತ್ತು.
ಜೀವನದಲ್ಲಿ ಹೊಸದಾಗಿ ಏನನ್ನಾದರೂ ಮಾಡಬೇಕು ಎಂಬ ಆಸೆಯಿಂದ 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್ ಚಾನೆಲ್ ಶುರು ಮಾಡ್ತಾರೆ. ಅದೇ ಡಿ ಆರ್ ಬ್ರೋ ಅಂದರೆ ಡಾ.ಬ್ರೋ.
ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದರು. ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ ವಿವರ ಕೊಡಲು ಶುರುಮಾಡಿದ್ದರು. ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿದ್ದರು.
ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ ಖ್ಯಾತಿ ಗಗನ್ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್ ಒಂದೇ ಒಂದು ರೂಪಾಯಿ ತನ್ನ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ ಅಂದ್ರೇ ನಂಬುತ್ತಿರಾ?
ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ಬರೋಬ್ಬರಿ ತಿಂಗಳಿಗೆ 800 ಡಾಲರ್ ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ.