Wednesday, October 2, 2024
Wednesday, October 2, 2024

ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅತ್ಯಂತ ಅಗತ್ಯ-ಡಾ.ವಿನಯಾ

Date:

ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅತ್ಯಂತ ಅಗತ್ಯ ಕ್ಷೇತ್ರವಾಗಲಿದೆ. ಈ ಬಗೆಗಿನ ಸಾಂಪ್ರದಾಯಿಕ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳ ಪ್ರಾಮುಖ್ಯತೆಯೂ ಹೆಚ್ಚಲಿದೆ” ಎಂದು ಸುಬ್ಬಯ್ಯ ದಂತ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕಿ ಡಾ. ವಿನಯ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕ್ಲಿನಿಕಲ್ ಸೈಕಾಲಜಿ ವಿಭಾಗ ಮಂಗಳವಾರ ಆಯೋಜಿಸಿದ್ದ 2ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗೆಗಿನ ಪಿಡುಗುಗಳು ಇನ್ನೂ ಪ್ರಭಾವಿಯಾಗಿ ಇವೆ. ಈ ಸನ್ನಿವೇಶವನ್ನು ದೂರ ಮಾಡುವ ಪ್ರಮುಖ ಜವಾಬ್ದಾರಿ ನಮ್ಮ ಮನಶಾಸ್ತ್ರ ವಿದ್ಯಾರ್ಥಿಗಳ ಮುಂದಿದೆ ಎಂದರು.

ಪ್ರಾಚಾರ್ಯೆ ಡಾ ಸಂಧ್ಯಾ ಕಾವೇರಿ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ವೃತ್ತಿಪರವಾಗಿ ತರಬೇತಿಗೊಳಿಸುವುದು ನಮ್ಮ ಕಾಲೇಜಿನ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶ ಖಂಡಿತವಾಗಿ ಸಾಧಿತಗೊಂಡಿದೆ ಎನ್ನುವುದಕ್ಕೆ ವಿದ್ಯಾರ್ಥಿಗಳು ಹೊಂದಿರುವ ಪ್ರಾಯೋಗಿಕ ಪ್ರಮಾಣಪತ್ರಗಳೇ ನಿದರ್ಶನ. ಈ ಅನುಭವಗಳನ್ನು ವಿದ್ಯಾರ್ಥಿಗಳು ಬಹುಬೇಗ ಸಮುದಾಯಕ್ಕೆ ಉಪಯುಕ್ತವಾಗಿ ಬಳಸಲಿದ್ದಾರೆ ಎಂದರು.

ವಿದ್ಯಾರ್ಥಿಗಳು ನಿರಾಶ್ರಿತ ಕೇಂದ್ರಗಳಲ್ಲಿ ನಡೆಸಿದ ಆಪ್ತಸಮಾಲೋಚನೆ, ಹೊಂಗಿರಣ ಶಾಲೆಯಲ್ಲಿ ನಡೆಸಿದ ಸಂವಾದ, ಶಿವಮೊಗ್ಗ ಮಹಿಳಾ ಕಾರಾಗೃಹದಲ್ಲಿ ನಡೆಸಿದ ಆಪ್ತ ಸಮಲೋಚನೆ ಮತ್ತು ಖೈದಿಗಳೊಂದಿಗೆ ಸಂವಾದ, ಮಾನಸ ಆಸ್ಪತ್ರೆಯಲ್ಲಿ ನಡೆಸಿದ 2 ವರ್ಷದ ಕ್ಲಿನಿಕಲ್ ಅಧ್ಯಯನ ಮುಂತಾದ ಪ್ರಾಯೋಗಿಕ ಕಲಿಕೆಗಳನ್ನು ನೆನೆದರು.

ಕಾರ್ಯಕ್ರಮದಲ್ಲಿ ಮಾನಸ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಪೈ. ಎಂಸಿಸಿಎಸ್ ನಿರ್ದೇಶಕರಾದ ಪ್ರೊ. ರಾಜೇಂದ್ರ ಚೆನ್ನಿ, ಕಾಲೇಜಿನ ವೈಮಾನಿಕ ಮನೋವಿಜ್ಞಾನ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿ ಈವ್ಲಿನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...