ಶಿವಮೊಗ್ಗ ಜಿಲ್ಲಾ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 25 ರಂದು ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಿತು.
ಸಾಹಿತಿಗಳು, ನಿವೃತ್ತ ಶಿಕ್ಷಕರಾದ ಜಂಬರಘಟ್ಟ ಟಿ. ಮಂಜಪ್ಪ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಹೋಬಳಿ ಅಧ್ಯಕ್ಷರಾದ ಸಂ. ಬ. ಸಿದ್ದಪ್ಪ, ಶಾಸಕರಾದ ಅಶೋಕ್ ನಾಯ್ಕ, ರೈತನಾಯಕ ಬಸವರಾಜಪ್ಪ, ಮಹಾನಗರ ಪಾಲಿಕೆ ಸದಸ್ಯರು, ಹೋರಾಟಗಾರರು ಆಗಿರುವ ಬಿ. ಎ. ರಮೇಶ್ ಹೆಗಡೆ, ನಿ. ಪ್ರಿನ್ಸಿಪಾಲ್ ರಂಗನಾಥಯ್ಯ, ಖಗ್ಗದ ಖ್ಯಾತಿ ಜಿ.ಎಸ್. ನಟೇಶ್, ಟಿ. ಎಂ. ಸಂಗಪ್ಪ, ಚಂದ್ರಶೇಖರ, ಕಲ್ಪನಾ, ಡಾ. ಆಸ್ಮಾ ಮೇಲಿನಮನಿ, ಕೂಡ್ಲಿಗೆರೆ ಗಿರೀಶ್, ಅಣ್ಣಪ್ಪ, ರೇಖಾ ಉಮೇಶ್ ಅವರು ಭಾಗವಹಿಸಿ ವಿವಿಧ ಗೋಷ್ಠಿಗಳಲ್ಲಿ ಮಾತನಾಡಿದರು.
ಹಿರಿಯರಾದ ದ್ಯಾಮಪ್ಪ, ಎಚ್. ತಿಮ್ಮಪ್ಪ, ಎಂ.ಇ. ಜಗದೀಶ್, ಪ್ರಕಾಶ್, ನಾಗೋಜಿರಾವ್, ಚಂದ್ರಪ್ಪ ಓ, ಶ್ರೀನಿವಾಸ ಹೆಚ್. ಬಿ., ಯು. ಕೆ. ರಮೇಶ್, ಮೈಲಾರಪ್ಪ, ಮಂಜುನಾಥ ರಾವ್, ಜ್ಞಾನೇಶ್, ರುದ್ರೇಶನ್ ಪಿ., ಶಾಂತಾ ರವಿಕುಮಾರ್, ಡಾ ವಿಜಯ್ ಶೆಟ್ಟಿ, ಜಿ. ಆರ್. ಸೀತಾರಾಮ, ಅರುಣಾ ಜಿ. ಎಸ್.,ಕೃಷ್ಣಮೂರ್ತಿ ಆರ್, ಕೆ. ಟಿ. ಪ್ರಸನ್ನ, ಪ್ರಕಾಶ್ ಬಿ.ಎಸ್., ಪ್ರಶಾಂತ ಹೊಳೆಹೊನ್ನೂರು, ರಾಜೇಶ್ ಹೆಚ್. ಸಿ., ರೇಣುಕಾ ಈ, ಆರ್. ಮಂಜುನಾಥ, ಆಶಾ, ಶಾಂತಾಬಾಯಿ, ಚಂದ್ರಕುಮಾರ್, ಮಕ್ಸುದಾಬಾನು, ಜಿಲ್ಲಾ ಸಮಿತಿಯ ಎಸ್. ಷಣ್ಮುಖಪ್ಪ, ಸೋಮಿನಕಟ್ಟಿ ಸೇರಿದಂತೆ ಹಲವರು ಭಾಗವಹಿಸಿ ಅನೇಕ ಕಾರ್ಯನಿರ್ವಹಿಸಿದರು.