ಮನುಸ್ಮತಿಯಲ್ಲಿ ದಲಿತ, ಹಿಂದುಳಿದವರನ್ನು ಪಶುಗಳಂತೆ ಕಾಣುವ ಅಂಶವನ್ನು ಕಂಡು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 1927 ಡಿ.25ರಂದು ಸುಟ್ಟು ಹಾಕಿದ ನೆನಪಿಗಾಗಿ ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಅಂಬೇಡ್ಕರ್ ಪ್ರತಿಮೆ ಎದುರು ದಲಿತ ಸಂಘಟನೆಗಳ ಐಕ್ಯಾತಾ ಚಾಲನಾ ಸಮಿತಿಯಿಂದ ಮನುಸ್ಮತಿ ಪ್ರತಿಯನ್ನು ದಹಿಸಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಂದು ದೇಶದಲ್ಲಿ ಮನುಸ್ಮತಿ ಹೇರುವಂತಹ ಸಂದರ್ಭ ಬಂದಾಗ ಬಾಬಾ ಸಾಹೇಬರು ಅಳುಕದೆ ಅದನ್ನು ವಿರೋಧಿ ಸಿದ್ದರು. ಅದರ ಭಾಗವಾಗಿ ನಾವು ಕೂಡ ವಿರೋಧಿಸಬೇಕು. ಯಾರು ಸಂವಿಧಾನ ಗೌರವಿಸುವುದಿಲ್ಲವೋ ಅಂತಹ ಸರಕಾರಗಳು ಬಹಳಷ್ಟು ದಿನ ಉಳಿಯವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ದಂಟರಮಕ್ಕಿ ಶ್ರೀನಿವಾಸ್ ದೇಶದಲ್ಲಿ ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆಗಾಗಿ ಅಂಬೇಡ್ಕರ್ ಅವರು ಸಂವಿಧಾನದಡಿ ಜೀವಿಸಲು ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಮನುಸ್ಮೃತಿಯಲ್ಲಿ ಸಮಾನತೆ ವಿರೋಧವಾಗಿ ಅಂಶಗಳನ್ನು ರಚಿಸಿ ಅವಮಾನ ಮಾಡಲಾಗಿತ್ತು ಆ ನಿಟ್ಟಿ ನಲ್ಲಿ ಮನುಧರ್ಮವನ್ನು ಸುಡುವ ಮೂಲಕ ಅಂಬೇಡ್ಕರ್ ಆಶಯದಂತೆ ನಡೆಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಬಾಲಕೃಷ್ಣ ಬಿಳೇಕಲ್ಲು, ಬಿ.ಪಿ.ಚಂದ್ರಶೇಖರ್‌ಪುರ, ವಿರೂಪಾಕ್ಷ, ಮೋಹನ್‌ಕುಮಾರ್, ಶೇಖರ್, ಚಿದಾನಂದ್, ಮತ್ತಿತರರು ಹಾಜರಿದ್ದರು.