ಮುಖ್ಯ ಶಿಕ್ಷಕರ ವಿರುದ್ಧ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದ ಪ್ರಕರಣದಲ್ಲಿ ಈಗ ಸುಳ್ಳು ದೂರು ನೀಡಿದವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ 3 ದಿನ ಕಳೆದರೂ ಆರೋಪಿ ಬಂಧಿಸದಿರುವ ಕುರಿತು ಕಲ್ಮನೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಗಣಪತಿ ಅವರು ಸಾಗರ ಗಾಮಾಂತರ ಠಾಣೆ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿ ರಾಜಾರೋಷವಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದರೂ ಪೊಲೀಸರು ಮಾತ್ರ ಆತನ ಬಂಧನಕ್ಕೆ ಆಸಕ್ತಿ ತೋರಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಎಂದ ಅವರು ವರದಾಮೂಲ ಎಳ್ಲಮವಾಸ್ಯೆ ಜಾತ್ರೆಯಲ್ಲಿ ಆರೋಪಿ ಕುಟುಂಬ ಸಮೇತ ಸಂಚರಿಸುತ್ತಿರುವ ಕುರಿತು ವಿವರಿಸಿದ ಅವರು ಸಾಗರ ನಗರ ಪೊಲೀಸ್ ಠಾಣೆ ಎದುರು ಬೈಕಿನಲ್ಲಿ ಹೋಗುತ್ತಿದ್ದರೂ ಆರೋಪಿಯ ಬಂಧನವಾಗಲಿಲ್ಲ ಯಾಕೆ?ಎಂದು ಪ್ರಶ್ನಿಸಿದರು.
ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕರು 7 ಮಕ್ಕಳಿಗೆ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗದ ಉಪ ನಿರ್ದೇಶಕರನ್ನು ಶಾಲೆಯಲ್ಲಿ ಕೂಡಿ ಹಾಕಿ ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ,ಸುಳ್ಳು ದೂರು ನೀಡಿದವರನ್ನು ನಮ್ಮೆದುರು ಕರೆತರುವಂತೆ ಪಟ್ಟು ಹಿಡಿದ ನಂತರ ಪೊಲೀಸ್ ಠಾಣೆಗೆ ಪೊಷಕರನ್ನು ಕರೆಯಿಸಿಕೊಂಡು ದೂರು ಪಡೆದು ತಡರಾತ್ರಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಕ್ಷತಾರಾಮಚಂದ್ರ ಮಾತನಾಡಿ ನಮ್ಮ ಶಾಲೆಯ ವಿರುದ್ಧ ಪಿತೂರಿ ಕಳೆದ ಒಂದು ವರ್ಷಗಳಿಂದ ನಡೆಯುತ್ತಿದೆ.ಶಾಲಾ ಶಿಕ್ಷಕಿಯರಿಬ್ಬರ ವೈಮನಸ್ಸು ಜಗಳದ ಪರಿಣಾಮ ಇಂತಹ ಘಟನೆಗಳಿಗೆ ಕುಮ್ಮಕ್ಕು ಸಿಕ್ಕಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ.ಆದ್ದರಿಂದ ಪೊಲೀಸರು ಮತ್ತು ಶಿಕ್ಷಣ ಇಲಾಖೆ ತನಿಖೆ ನಡೆಸುವ ಮೂಲಕ ನಮ್ಮ ಶಾಲೆಯ ಮಕ್ಕಳ ತರಗತಿ ಹಾಗೂ ಜಾತಿ ಸಮೇತ ಆರೋಪಿಗೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಶಾಲೆಯ ಅಂಚಿನಲ್ಲಿ ಶಾಲೆಗೆ ಅಪಾಯವಾಗಿರುವ ಹೊನ್ನೆ ಮರ ಗಾಳಿಗೆ ಅರ್ಧಮರ ಮುರಿದು ಬಿದ್ದಿತ್ತು.ಅಡುಗೆಕೋಣೆ ಸೇರಿದಂತೆ ಮಕ್ಕಳ ಸಂರಕ್ಷಣೆಯ ಉದ್ದೇಶದಿಂದ ಅರಣ್ಯ ಇಲಾಖೆಯವರು ಟೆಂಡರ್ ಪ್ರಕ್ರಿಯೆ ನಡೆಸಿ ಮರ ತೆರವುಗೊಳಿಸಿ ಮರದ ಹರಾಜು ಬಾಬ್ತು ಅರಣ್ಯ ಇಲಾಖೆಗೆ ಸಂದಾಯವಾಗಿರುವುದು 2020 ರಲ್ಲಿ ಪ್ರಕ್ರಿಯೆ. ಆದರೇ ಕಳೆದ ಒಂದು ವರ್ಷದಿಂದ ವಿನಾಕಾರಣ ಮರದ ವಿಚಾರ ಮುನ್ನೆಲೆಗೆ ಬಂದು ಶಾಲೆಗೆ ಸಂಬಂಧವೇ ಇಲ್ಲದ ಹರಾಜು ಪ್ರಕ್ರಿಯೆ ಕುರಿತು ಖ್ಯಾತೆ ತೆಗೆದು ಶಾಲೆಯ ವಾತವರಣ ಹಾಳು ಮಾಡುತ್ತಿದ್ದರು.
ಒಟ್ಟಾರೆ ಕಾಗೆಹಳ್ಳ ಶಾಲೆಯ ಕುರಿತು ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಹಗೆತನ ಸಾಧಿಸುವ ದುರುದ್ದೇಶಿತ ವ್ಯಕ್ತಿಯ ವಿರುದ್ಧ ಶಿಕ್ಷಣ ಅಧಿಕಾರಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಿ ಮಧ್ಯಾಹ್ನ 2:30 ರಿಂದ ರಾತ್ರಿ 8:00 ಗಂಟೆಯವರೆಗೂ ಹೋರಾಟ ನಡೆಸಿದ ಪರಿಣಾಮ ತಡರಾತ್ರಿ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಎದುರು ಕಲ್ಮೆನೆ ಗ್ರಾಮಪಂಚಾಯಿತಿ ಸದಸ್ಯರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಪೊಷಕರು ಪ್ರತಿಭಟನಾ ಧರಣಿ ನಡೆಸುವ ಮೂಲಕ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಲು ನಿರ್ಣಯಿಸಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಣಪತಿಗದ್ದೇಮನೆ,ಯುವರಾಜ್,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಕ್ಷತಾರಾಮಚಂದ್ರ,ಉಪಾಧ್ಯಕ್ಷ ಉಮೇಶ್,ಗ್ರಾಮಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ,ಪೊಷಕರುಗಳಾದ ನೂರ್‌ಜಾನ್,ಹೊನ್ನಪ್ಪ,ಆರೀಫ್‌ವುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
