Tuesday, March 24, 2026
Tuesday, March 24, 2026

ಮನೆಯಿಂದಲೇ ಸಾಹಿತ್ಯ ಪ್ರೀತಿ ಮೂಡಿತು- ಕು.ಅಚಿಂತಾ

Date:

ನಾವು ಮಕ್ಕಳು, ನಮ್ಮ ತಂದೆ ತಾಯಿ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಿದ್ದಾರೆ. ನಾವು ಇಷ್ಟಪಟ್ಟು ಓದಬೇಕು. ನಮ್ಮ ತಂದೆ, ತಾಯಿ ತಲೆತಗ್ಗಿಸದಂತೆ ಜವಾಬ್ದಾರಿ ನಿರ್ವಹಿಸಬೇಕು. ನಂಬಿಕೆಗೆ ಮೋಸಮಾಡಬೇಡಿ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಮಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು .
ಅನನ್ಯ ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ನೇತೃತ್ವದಲ್ಲಿಅಶೋಕನಗರ ಬಡಾವಣೆಯ ಅನನ್ಯ ಶಿಕ್ಷಣ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ಬೆಳಗಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ. ಬಿ. ಪ್ರಸನ್ನಕುಮಾರ್ ಮಾತನಾಡಿ, ಶಾಲೆಯ ಓದಿನ ಜೊತೆಗೆ ಸಾಹಿತ್ಯ ಕೃಷಿ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಮಕ್ಕಳು ನೀವು ನಿಮ್ಮ ಮನೆಗೆ ಮಾತ್ರ ಆಸ್ತಿಯಲ್ಲ. ನೀವು ದೇಶಕ್ಕೆ ಆಸ್ತಿಯಾಗಬೇಕು. ಸಾಹಿತ್ಯ ಎಲ್ಲರ ಹಿತಕಾಯುವ ಕಾರ್ಯಮಾಡುತ್ತೆ. ಮನಸ್ಸಿಗೆ ಮುದನೀಡುವ, ಉತ್ತಮ ಸಂದೇಶ ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ. ನಾಗರಾಜ್ ಮಾತನಾಡಿ, ಪ್ರತಿ ಶಾಲೆಗೆ ಹೋಗಿ ಕಮ್ಮಟ ಮಾಡಿ ಆಸಕ್ತಿಯಿರುವವರನ್ನು ಆಯ್ಕೆಮಾಡಿ ಈ ಸಮ್ಮೇಳನ ಅರ್ಥಪೂರ್ಣ ವಾಗಿದೆ. ಕನ್ನಡ ಸ್ಪಷ್ಟವಾಗಿ ಓದುವ, ಬರೆಯುವ, ಮಾತನಾಡುವ ಕಲಿಕೆ ಶಿಕ್ಷಣದ ಜೊತೆಗೆ ನಡೆಯಬೇಕು. ಆದರೆ ಕೆಲವು ಶಾಲೆಗಳು ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿವರಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕು. ಅಚಿಂತಾ ಅವರು ಮಾತನಾಡಿ ಈ ಸಮ್ಮೇಳನ ನಮಗೆ ಮಕ್ಕಳಿಗೆ ಅವಿಸ್ಮರಣೀಯವಾಗಿದೆ. ನಾನು ಮೂರು ವರ್ಷದ ಮಗುವಾಗಿದ್ದಾಗ ನಮ್ಮ ತಾಯಿ ಸಂಗೀತ, ಸಾಹಿತ್ಯ ಕಾರ್ಯಕ್ರಮ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮನೆಯಲ್ಲಿ ಅಪ್ಪ ಕಥೆ ಹೇಳುತ್ತಿದ್ದರು. ಹಾಗೆ ಒಡನಾಡಿದ ನನಗೆ ಬರೆಯಲು, ಹಾಡಲು ಆಸಕ್ತಿ ಮೂಡಿತ್ತು. ನಮ್ಮ ಶಾಲೆಯಲ್ಲಿ ಉತ್ತಮ ವಾತಾವರಣವಿತ್ತು. ಸಾಹಿತ್ಯದ ವಾತಾವರಣ ಕಲ್ಪಿಸಲು ಕಸಾಸಾಂ ವೇದಿಕೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ, ಅನನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿಗಳಾದ ಆರ್. ಗಿರೀಶ್, ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ, ಕಾವ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಗಾಜನೂರು ಪ್ರೌಢಶಾಲೆಯ. ತನುಶ್ರೀ, ಪ್ರಬಂಧ ಗೋಷ್ಠಿ ಅಧ್ಯಕ್ಷತೆ ವಹಿಸಲಿರುವ ದುರ್ಗಿಗುಡಿ ಶಾಲೆಯ ಕು. ದಿವ್ಯ ಟಿ. ಪಿ., ಕಥಾ ಗೋಷ್ಠಿ ಅಧ್ಯಕ್ಷರಾದ ಪುರುದಾಳು ಶಾಲೆಯ ಕು. ವಿನೋದ ಉಪಸ್ಥಿತರಿದ್ದರು.

ಕು. ಪಾವನ ಸ್ವಾಗತಿಸಿದರು, ಕೃತಿಕ ಎಂ. ನಾಡಿಗ್, ಐಶ್ವರ್ಯ ನಿರೂಪಿಸಿದರು. ದೀಕ್ಷಿತ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ...