ಫೋಟೋಗ್ರಾಫಿ ವೃತ್ತಿಯಲ್ಲಿ ಕಾಲ ಕಾಲಕ್ಕೆ ಬದಲಾಗುವ ಹೊಸ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಹೇಳಿದರು.
ಶಿವಮೊಗ್ಗ ನಗರದ ಎನ್‌ಆರ್‌ಬಿ ಸ್ಟುಡಿಯೋದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, 25 ವರ್ಷಗಳಿಂದ ಎನ್‌ಆರ್‌ಬಿ ಸ್ಟುಡಿಯೋ ಶಿವಮೊಗ್ಗ ನಗರದಜನತೆಗೆಸೇವೆ ನೀಡುತ್ತಿದ್ದು, ಹೊಸ ವಿನ್ಯಾಸದಆಧುನಿಕತಂತ್ರಜ್ಞಾನದಕ್ಯಾನನ್ ಫೈನ್‌ಆರ್ಟ್ ಪ್ರಿಂಟಿಂಗ್ ಅಳವಡಿಸಲಾಗಿದೆ.
ಅತ್ಯಾಧುನಿಕ ಸೇವೆಗಳನ್ನು ಶಿವಮೊಗ್ಗ ಜನರಿಗೆಒದಗಿಸುವಂತಾಗಲಿ ಎಂದು ಆಶಿಸಿದರು.
ಪತ್ರಕರ್ತಚಂದ್ರಕಾಂತ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಂಡು ಮರ‍್ನಾಲ್ಕು ದಿನದ ನಂತರ ಫೋಟೋಗಳು ಸಿಗುತ್ತಿದ್ದವು.ಆದರೆ ಇಂದಿನ ಕಾಲದಲ್ಲಿಆಧುನಿಕತಂತ್ರಜ್ಞಾನದ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಫೋಟೊ ಲಭ್ಯವಾಗುತ್ತವೆ.
ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಿದ್ದ ಸೇವೆಗಳನ್ನು ಶಿವಮೊಗ್ಗದಲ್ಲಿಯೂ ಎನ್‌ಆರ್‌ಬಿ ಸ್ಟುಡಿಯೋ ಆರಂಭಿಸಿರುವುದು ಅಭಿನಂದನೀಯ ಎಂದರು.
ರೋಟರಿಯ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಹೊಸ ತಂತ್ರಜ್ಞಾನದ ಅಳವಡಿಕೆ ಜತೆಯಲ್ಲಿ ಹೆಚ್ಚಿನ ಸೇವೆಗಳನ್ನು ಎನ್‌ಆರ್‌ಬಿ ಸ್ಟುಡಿಯೋಒದಗಿಸುತ್ತದೆ. ತಂತ್ರಜ್ಞಾನದಿಂದ ಪರಿಣಾಮಕಾರಿ ಹಾಗೂ ಉತ್ತಮಗುಣಮಟ್ಟದ ಫೋಟೋತೆಗೆಯಲು ಸಾಧ್ಯವಿದೆಎಂದು ಹೇಳಿದರು.
ಭಾರತದಎಲ್ಲೆಡೆಯು ಮನೆ ಮನೆಯಿಂದಎನ್‌ಆರ್‌ಬಿ ಆನ್‌ಲೈನ್ ಸ್ಟುಡಿಯೋ ಹೊಸ ತಾಂತ್ರಿಕತೆ ಲಭ್ಯಇರುವುದುಖುಷಿಯ ಸಂಗತಿಯಾಗಿದೆ. ಹೊಸ ಟೆಕ್ನಾಲಜಿಯ ಫೊಟೋಸ್, ಫ್ರೇಮ್, ಎಲ್‌ಇಡಿ ಲೈಟ್ ಫ್ರೇಮ್, ಅಲೂಮಿನಿಯಂ ಫ್ರೇಮ್, ಮಗ್ ಪ್ರಿಂಟಿAಗ್ ಸೇವೆಗಳು ಲಭ್ಯವಿದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಓಂ ಗಣೇಶ್ ಶೇಟ್, ಮಾಲೀಕ ಸತೀಶ್‌ಚಂದ್ರ, ನೇತ್ರಾವತಿ, ಅಮೋಘ, ಅಪೂರ್ವ, ಚೇತನ್, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
