ಶಿವಮೊಗ್ಗ, ಹೊಸಮನೆ 1 ನೇ ಮುಖ್ಯ ರಸ್ತೆಗೆ ಕರ್ನಾಟಕ ರತ್ನ ದಿವಂಗತ ಡಾ|| ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕೋರಿ ಮಹಾಪೌರರಿಗೆ ಮನವಿ ನೀಡಲಾಯಿತು.
ನಾಡುಕಂಡ ಹೆಸರಾಂತ ನಟ, ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಿದ ಮಹಾನ್ ನಟ, ಮೇರು ವ್ಯಕ್ತಿತ್ವದ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಗರದ 20 ನೇ ವಾರ್ಡ್ ಹೊಸಮನೆ ಬಡಾವಣೆ, 1 ನೇ ಮುಖ್ಯ ರಸ್ತೆಗೆ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಅವರ ಅಭಿಮಾನಿಗಳು ಹಾಗೂ ಬಡಾವಣೆ ನಾಗರೀಕರು ಒಕ್ಕೊರಲಿನಿಂದ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್ ರವರೊಂದಿಗೆ ಸಭೆ ಸೇರಿ ತೀರ್ಮಾನಿಸಿದ್ದು.
ತಾವುಗಳು ಸಹ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೋರಿಕೊಂಡಿದ್ದು.
ಈ ಸಂದರ್ಭದಲ್ಲಿ ಹೊಸಮನೆ ಬಡಾವಣೆ ಪಾಲಿಕೆ ಸದಸ್ಯೆ ಹಾಗೂ ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್, ಹೊಸಮನೆ ನಾಗರೀಕ ಸಮಿತಿ ಅಧ್ಯಕ್ಷರಾದ ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಪದಾದಿಕಾರಿಗಳಾದ ಸುರೇಶ್, ಮಾರುತಿಭಗತ್ ಮುಂತಾದವರು ಉಪಸ್ಥಿತರಿದ್ದರು.
