Monday, December 8, 2025
Monday, December 8, 2025

ಗುಜರಾತ್ ಮಸ್ತ್ ಮಸ್ತ್ ಫಲಿತಾಂಶ.

Date:

ಮತದಾರನೋ ನೇತಾರನೋ ಯಾರು ಬುದ್ಧಿವಂತ?

ಚುನಾವಣೆಗಳು ಬರುತ್ತವೆ, ನಡೆಯುತ್ತವೆ.ಹೋಗುತ್ತವೆ
ಆದರೆ ಅದರ ಹವಾ ಮಾತ್ರ ಸಾಮಾಜಿಕವಾಗಿ ಸಾಮಾನ್ಯ ವಾತಾವರಣ ಸ್ವಲ ತಿಂಗಳು ಕದಡಿದ ನೀರಿನಂತಾಗಿರುತ್ತದೆ.

ಪ್ರಸ್ತುತ ರಾಜ್ಯವೂ ಮತ್ತು ಕೇಂದ್ರ ಸರ್ಕಾರದ ಆಡಳಿತ ಪಕ್ಷವೂ ಈಗ
ಹಲವು ತಿಂಗಳುಗಳಲ್ಲಿ ಚುನಾವಣಾ
ಆಖಾಡಕ್ಕಿಳಿಯಲಿವೆ.

ಈಗ ಗುಜರಾತ್ ಮತ್ತು ಹಿಮಾಚಲ ವಿಧಾನ ಸಭಾ ಚುನಾವಣೆ ಫಲಿತಾಂಶಗಳು ನಮ್ಮೆದುರಿಗಿವೆ.
ಮನೆಮಗ ಎಂಬ ಭಾವದಾಳ ಉರುಳಿಸಿದ ಮೋದೀಜಿಯವರ ಮೋಡಿ ಗೆದ್ದಿದೆ ಎಂದು ಮಾಧ್ಯಮಗಳಲ್ಲಿ ಢಾಳಾಗಿ ಸುದ್ದಿ ಬಂದಿದೆ. ಆದರೆ ಅದಲಿಗೆ ನಡೆದದ್ದೇನು? ಹೈ ಕಮಾಂಡಿನ ಯಾವ ಟ್ರಿಕ್ಕುಗಳು ಕೆಲಸಮಾಡಿದವು? ಎಂಬುದನ್ನು ತಜ್ಞರು ಲೆಕ್ಕಹಾಕುವಂತೆ ಮಾಡಿದೆ.
ಮೊದಲ ನೋಟಕ್ಕೆ ಅಲ್ಲಿ‌‌ಟಿಕೇಟು ಪಡದವರಲ್ಲಿ ಹೊಸಮುಖಗಳಿವೆ ಎಂಬುದು ಆದ್ಯತೆಯ ಅನಿಸಿಕೆಯಾಗಿದೆ. ಹಾಲಿ ಇದ್ದ 42 ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆಹಾಕಲಾಗಿತ್ತು‌. ಜೊತೆಗೆ ಪಕ್ಷವು ನಡೆಸಿದ ಸಭೆ, ರೋಡ್ ಶೋ ಗಳಲ್ಲಿ ಮೋದಿ ಮತ್ತು ಅಮಿತ್ ಶಾ ಭಾಗಿಯಾದದ್ದೂ ಇತ್ಯಾದಿಗಳು ಫಲನೀಡಿವೆ.

ಇನ್ನೂ ಒಂದು ಆಸಕ್ತಿಯ ವಿಚಾರವೆಂದರೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿ ಬಗ್ಗೆ ” ರಾವಣ” ಎಂದು ಕರೆದರು.ಮತ್ತೋರ್ವರು ಭಸ್ಮಾಸುರ ಅಂತ ಹೇಳಿದರು.ಇದೂ ಒಂದು
ನಕಾರಾತ್ಮಕ ಪರಿಣಾಮ ಬೀರಿದೆಯೆಂಬ ಲೆಕ್ಕಾಚಾರವಿದೆ.

ಇವೆಲ್ಲವೂ ಆಗಿನ ಕ್ಷಣಕ್ಕೆ ಸಾಮಾನ್ಯವೆ. ಆದರೆ ಒಬ್ಬ ಪ್ರಧಾನಿ ತನ್ನ ರಾಜ್ಯದ ರಾಜಕೀಯದಿಂದ ಎಂದೂ ಬೇರೆಯಾಗಿ ಗುರುತಿಕೊಳ್ಳಲಾರ. ‌ಆದ್ದರಿಂದಲೇ ಮೋದಿ ತಮ್ಮನ್ನು”ಘರ್ ಕಾ ಲಡಕಾ ” ಎಂದು ಹೇಳಿಕೊಂಡರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗುತ್ತಾರೆ. ಆಗ ಗುಜರಾತ್ ಮತ್ತಷ್ಟು ಪ್ರಗತಿಯಾಗಲು ಸಾಧ್ಯ ಎಂದು ಬಿಜೆಪಿ ಬಿಂಬಿಸಿತು.

ಅಲ್ಲಿ ವರದಾನವಾಗಿ ಬಂದ ಸಂಗತಿ ಎಂದರೆ ಕೆಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೋದಿಯವರು
ಪ್ರಧಾನಿಯಾಗಿರುವುದು ಗುಜರಾತಿನ ಹೆಮ್ಮೆ ಎಂದು ಪ್ರಶಂಸೆಯ ಮಾತುಗಳು.
ಇದೂ ಕೂಡ ಪ್ಲಸ್ ಪಾಯಿಂಟ್ ಆಯಿತು. ಕುಟುಂಬದ ಮಿತ್ರ ಅಂತ ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ
ನಾಡಿಯದ್ ಕ್ಷೇತ್ರದ ಧ್ರುವಲ್ ಪಟೇಲ್ ನೀಡಿದ ಹೇಳಿಕೆ ಅವರ ಪಕ್ಷಕ್ಕೇ ಬಿಸಿತುಪ್ಪವಾಗಿತ್ತು.

ತಮ್ಮ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿದಿರಬೇಕೆಂಬ ವಾಂಛೆ ಮೋದೀಜಿಗೆ ಸಹಜವಾಗೇ ಬಂದಿದೆ.
ಹಾಗೆಂದೇ ಪ್ರಧಾನಿ ಮೋದಿ ಅವರು ಆಪ್ತ ಅಮಿತ್ ಶಾ ಜೊತೆ ಸೂಕ್ತ ತಂತ್ರಗಳನ್ನ ಹೆಣೆದಿರಲೇಬೇಕು. ಇಲ್ಲದಿದ್ದರೆ ವಿರೋಧಪಕ್ಷವೇ ಇರದಂತೆ ಚುನಾವಣೆಯನ್ನ ಗೆಲ್ಲುವುದು ಸಾಮಾನ್ಯದ ವಿಷಯವಲ್ಲ.

ರಾಜ್ಯಕ್ಕೆ ತ್ವರಿತವಾಗಿ ನೀಡಿದ ಭೇಟಿ.ರಾಜ್ಯ ಸರ್ಕಾರದ ಸಂಪುಟದಲ್ಲಿ ಬದಲಾವಣೆಗಳು
ಇವೆಲ್ಲ ಅಲ್ಲಿನ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಪ್ರಧಾನಿಯವರಿಗೆ,ಗೃಹಮಂತ್ರಿಗಳಿಗೆ
ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ರಾಜಕೀಯ ಪರಿಣಿತರಿಗೆ ಕೊಂಚ ಅಚ್ಚರಿಯೂ ಆಗಿರಬಹುದು. ಏಕೆಂದರೆ ಮೋದಿಯವರ ಜನಪ್ರಿಯತೆ ದೇಶದಾದ್ಯಂತ ಮಸುಕಾಗುತ್ತಿದೆ ಎಂಬ ವದಂತಿಯ ಹಿಂದೆಯೇ ಈ ಅಚಾನಕ್ ಫಲಿತಾಂಶ ಬಂದಿದೆ.

ಇದರ ಜೊತೆ ಇನ್ನೊಂದು ಲಾಜಿಕ್ ಬೆಳೆದಿದೆ. ಅದೆಂದರೆ ಎದುರೆದುರೇ
ಕೈಕಾಲು ಮುಖ ಪಡೆದುಕೊಂಡ ಎಎಪಿ ಪಕ್ಷದ ಬೆಳೆವಣಿಗೆ.ಅವರ ಟಾರ್ಗೆಟ್ ಬಿಜೆಪಿ ಪಕ್ಷವಲ್ಲ. ಅವರದ್ದು ಇನ್ನೊಂದು ತಂತ್ರಗಾರಿಕೆ.
ದುರ್ಬಲವಾಗುತ್ತಿರುವ ಕಾಂಗ್ರೆಸ್ ನ ಮತಗಳನ್ನ ಕ್ರೋಢೀಕರಿಸಿ ಶಕ್ತವಾಗುವ ಒಳನೋಟ.
ಈ ಬಗ್ಗೆ ಕರ್ನಾಟಕದ ಆಪ್ ಪ್ರತಿನಿಧಿ
ಟೀವಿ ಕಾರ್ಯಕ್ರಮದಲ್ಲಿ ಇದನ್ನ ಬಹಿರಂಗ ಪಡಿಸಿದರು.

ದೆಹಲಿಯಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನ ಮತ್ತು ಒಂದಿಷ್ಟು ಬಿಜೆಪಿ ವಿರೋಧಿ ಮತಗಳನ್ನ ಕಲೆಹಾಕುವಲ್ಲಿ ಆಪ್ ಯಶಸ್ವಿಯಾಯಿತು.
ಈಗ ಬಿಜೆಪಿ 156 ,ಕಾಂಗ್ರೆಸ್17 ಬಹು ನಿರೀಕ್ಷೆಯ ಆಪ್ 5,ಇತರೆ 4 ಸ್ಥಾನಗಳನ್ನ ಬಾಚಿಕೊಂಡಿವೆ. ಚಲಾವಣೆಯಾದ ಮತಗಳಲ್ಲಿ
ಶೇ.52.52 ಬಿಜೆಪಿ, ಶೇ.27.27 ಕಾಂಗ್ರೆಸ್, ಶೇ.12.91ಆಪ್.
ಮತ್ತು ಶೇ.07.03 ಇತರೆಯವರು ಪಡೆದಿದ್ದಾರೆ.
ಕಳೆದ 2017 ರ ಚುನಾವಣೆಯಲ್ಲಿ
ಬಿಜೆಪಿ 99 ( ಶೇ.49.1) ,
ಕಾಂಗ್ರೆಸ್ 77 ( ಶೇ.41.4),ಇತರೆ 6
( ಶೇ.9.5)ಸ್ಥಾನಗಳನ್ನ ಪಡೆದಿದ್ದವು.

ಸಾಂಪ್ರದಾಯಿಕ ಮತಗಳಿಗಿಂತ ಹೊಸದಾಗಿ ಮತಪಟ್ಟಿಗೆ ಸೇರುತ್ತಿರುವ ಯುವ ಮತದಾರರ ಒಲವೂ ಮೋದಿಯ ನಾಯಕತ್ವಕ್ಕಿದೆ ಎಂಬುದನ್ನ ಪರಿಣಿತರು ಹೇಳುತ್ತಾರೆ.

ಗಮನ ಸೆಳೆಯುವ ಸಂಗತಿ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಅಭಿಯಸನವನಗನ ಗುಜರಾತಿನಲ್ಲಿ ನಡೆಸಲಿಲ್ಲ. ಇದೂ ಪ್ರಮುಖ ಕೊರತೆಯಾಗಿರಲೂ ಬಹುದು.ಅದನ್ನೇ ಒಂದು ಸಾಧನವನ್ನಾಗಿ ಗುಜರಾತನ್ನ ನಿರ್ಲಕ್ಷ್ಯ ಮಾಡಿದರು ಎಂಬ ವಿರೋಧಿ ಪ್ರಚಾರವನ್ನೂ ಬಿಜೆಪಿ ಅಸ್ತ್ರವಾಗಿಸಿತು ಎನ್ನುತ್ತಾರೆ.

ಭಾರತ್ ಜೋಡೋ ಕಾಂಗ್ರೆಸ್ ಗೆ ಸಹಾಯಮಾಡಿಲ್ಲ ಎಂದರೂ ಭಾರತವನ್ನ ಅರ್ಥಮಾಡಿಕೊಳ್ಳುವಲ್ಲಿ ರಾಹುಲ್ ಗೆ ವೈಯಕ್ತಿಕವಾಗಿ ಲಾಭವಾಗಿದೆ.
ಅದನ್ನ ಮುಂಬರುವ ಕರ್ನಾಟಕದ
ಚುನಾವಣೆಗೆ ಹೇಗೆ ಕಾಂಗ್ರೆಸ್
ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತದೆ
ಕಾದು ನೋಡಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ವಿಧಾನಸಭೆ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜು.

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣ...

Shimoga News ಜೀವರಕ್ಷಣಾ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು- ಸೀಮಾ ಆನಂದ್

Shimoga News ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ...

Gurudutt Hegde ಧ್ವಜವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರಿಗೆ & ಅವರ ಅವಲಂಬಿತರಿಗೆ ನೆರವಾಗೋಣ- ಗುರುದತ್ತ ಹೆಗಡೆ

Gurudutt Hegde ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ...

D S Arun ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಶಾಸಕ ಡಿ.ಎಸ್.ಅರುಣ್ ಆಯ್ಕೆ.

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ...