ನಿರಂತರ ಪುನಶ್ವೇತನ ಕಾರ್ಯಕ್ರಮ ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ
ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಮಾನಸಾಧಾರ ಟ್ರಸ್ಟ್(ರಿ) ಶಿವಮೊಗ್ಗ ಮತ್ತು ವಿಶೇಷ ಚೇತನ ಮಕ್ಕಳ ಕೌಶಲಾಭಿವೃದ್ಧಿ ಪುನಶ್ವೇತನ ಮತ್ತು ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರ ದಾವಣಗೆರೆ ಇವರ ಸಂಯುಕ್ತ ಸಹಕಾರದೊಂದಿಗೆ ದಿನಾಂಕ 12-12-2022 ರಿಂದ ದಿನಾಂಕ 16-12-2022ರವರೆಗೆ ಸಮಯ : ಬೆಳಗ್ಗೆ 10ಗಂಟೆ ಯಿಂದ ಸಂಜೆ 5ಗಂಟೆಯ ವರೆಗೆ ಮನಸ್ಪೂರ್ತಿ ಕಲಿಕಾ ಕೇಂದ್ರದಲ್ಲಿ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ಪಡೆದ 30 ಜನ ಶಿಕ್ಷಕರಿಗಾಗಿ ವಿಶೇ಼ಷ ಚೇತನರ ಮಕ್ಕಳ ಜೀವನ ಕೌಶಲ ಹಾಗೂ ಶೈಕ್ಷಣ ಕ ಪ್ರಗತಿಗಾಗಿ ಪೂರ್ವ ಪ್ರಾಥಮಿಕ ಹಂತದ ನಿರಂತರ ಪುನಶ್ವೇತನ ಕಾರ್ಯಕ್ರಮದ ಕಾರ್ಯಾಗಾರವನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ಮಾನಸ ಟ್ರಸ್ಟ್ ನಿರ್ದೇಶಕರು ಡಾ| ರಜನಿ ಎ ಪೈ ಹಾಗೂ ಶೈಕ್ಷಣ ಕ ನಿರ್ದೇಕರು ಡಾ| ಪ್ರೀತಿ ವಿ ಶಾನ್‌ಭಾಗ್ ಮತ್ತು ಡಾ|ವಿಜಯ ರಾಜ್ ಸಿ.ಆರ್.ಸಿ ಸಮನ್ವಯಾಧಿಕಾರಿ ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ 5 ದಿನದ ಕಾರ್ಯಾಗಾರವನ್ನು ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದು, ನೊಂದಾಯಿತ ಶಿಕ್ಷಕರು ಕಾರ್ಯಾಗಾರದ ಸದುಪಯೊಗವನ್ನು ಪಡೆದುಕೊಳ್ಳಲಿದ್ದಾರೆ