ರಾಜ್ಯದ ಯಾವುದೇ ದೇವಾಲಯಗಳಲ್ಲಿ ಆರತಿ ಪದ್ಧತಿ ರದ್ದಾಗಿಲ್ಲ. ಸಲಾಂ ಆರತಿ ಹೆಸರಿನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಧಾರ್ಮಿಕ ಪರಿಷತ್ ಗೂ ಕೆಲ ಅಧಿಕಾರಗಳು ಇವೆ. ಸಲಾಂ ಎಂಬುದು ಸಂಸ್ಕೃತ ಪದವಲ್ಲ ಹಾಗಾಗಿ ಸಲಾಂ ಜಾಗದಲ್ಲಿ ಬೇರೊಂದು ಸಂಸ್ಕೃತ ಹೆಸರಿರಬೇಕು ಎಂದು ಹೇಳಿದೆ. ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ. ಆದರೆ ಈ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡಿಲ್ಲ ಎಂದರು.
ಅಧಿಕಾರಿಗಳು, ಇತಿಹಾಸಕಾರರ ಜೊತೆ ಸಮಾಲೋಚಿಸಿ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಲಾಂ ಆರತಿ ಬದಲಿಗೆ ಆರತಿ ನಮಸ್ಕಾರ, ದೀವಟಿಗೆ ಸಲಾಂ ಬದಲಿಗೆ ಮಂಗಳಾರತಿ ನಮಸ್ಕಾರ ಎಂದು ಬದಲಿಸಲು ಚಿಂತನೆ ನಡೆದಿದೆ ಎಂದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಲಾಂ ಮಂಗಳಾರತಿ ಎಂಬ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಧಾರ್ಮಿಕ ಪರಿಷತ್ ಮನವಿ ಮಾಡಿದೆ ಎಂದು ತಿಳಿಸಿದರು.