ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಡಿ ಸಾರ್ವಜನಿಕ ಉಪದ್ರವ ಉಂಟುಮಾಡುವುದಕ್ಕೆ ಹಾಗೂ ಇನ್ನಿತರೆ ಉಲ್ಲಂಘನೆಗಳಿಗೆ ಜುಲ್ಮಾನೆಗಳನ್ನು ವಿಧಿಸಲಾಗುವುದು.
ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣಾ ಮಾದರಿ ಉಪನಿಯಮಗಳು 2019, ಅಧಿಸೂಚನೆ ಸಂಖ್ಯೆ:ನಅಇ 90 ಸಿಎಸ್‍ಎಸ್ 2018, ಬೆಂಗಳೂರು ದಿನಾಂಕ:-09-10-2019 ನ್ನು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಗೆ ಯಥಾವತ್ತಾಗಿ ಅಳವಡಿಸಕೊಳ್ಳಲು ಪುರಸಭೆಯ ಸಾಮಾನ್ಯ ಸಭೆ ದಿನಾಂಕ:-14.07.2022ರಲ್ಲಿ ತೀರ್ಮಾನಿಸಲಾಗಿರುತ್ತದೆ.
ಅದರಂತೆ ಸದರಿ ಮಾದರಿ ಉಪನಿಯಮದ ನಿಯಮಗಳು, ಅಧಿಸೂಚಿ ಗಿII ರಂತೆ ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕವನ್ನು ಹಾಗೂ ಅಧಿಸೂಚಿ ಗಿIII ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಢಿ ಸಾರ್ವಜನಿಕ ಉಪದ್ರವ ಉಂಟುಮಾಡುವುದಕ್ಕೆ ಹಾಗೂ ಇನ್ನಿತರೆ ಉಲ್ಲಂಘನೆಗಳಿಗೆ ಜುಲ್ಮಾನೆಗಳನ್ನು ವಿಧಿಸಲಾಗುತ್ತದೆ ಎಂದು ಸಾರ್ವಜನಿಕರ ಮಾಹಿತಿಗಾಗಿ ಸದರಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಸದರಿ ಮಾದರಿ ಉಪನಿಯಮ ಪ್ರತಿಯನ್ನು ಶಿರಾಳಕೊಪ್ಪ ಪುರಸಭೆಯ ಅಧಿಕೃತ ಜಾಲತಾಣ www.shiralakoppatown.mrc.gov.in ರಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಪುರಸಭೆ ಕಛೇರಿ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಎಸ್ ಡೊಳ್ಳೆ ಅವರು ತಿಳಿಸಿದ್ದಾರೆ.