ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಅಧಿಸೂಚನೆ ಅಉ-ಆಐ-ಇ-12082021-228947 ನವದೆಹಲಿ, ದಿನಾಂಕ:-12.08.2021 ರಂತೆ 2022ರ ಜುಲೈ 1 ರಿಂದ ಜಾರಿಗೆ ಬರುವಂತೆ ಪಾಲಿಸ್ಟೈರೀನ್ ಮತ್ತು ಪಾಲಿಸ್ಟೈರೀನ್ ನಿಂದ ತಯಾರಿಸಿದ ಉತ್ಪನ್ನಗಳು ಮತ್ತು ಏಕ ಬಳಕೆ ಪ್ಲಾಸ್ಟಿಕ್ ಈ ಕೆಳಕಂಡ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇ ಧಿಸಲಾಗಿದೆ.
ಪ್ಲಾಸ್ಟಿಕ್ ಕಡ್ಡಿಗಳನ್ನು ಒಳಗೊಂಡಿರುವ ಕಿವಿಯ ಕೊಳೆ ತೆಗೆಯುವ ಇಯರ್ ಬಡ್ಸ್, ಬಲೂನ್ ಗಳಲ್ಲಿನ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್‍ಕ್ರೀಮ್ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟೈರೀನ್ ಮತ್ತು ಪ್ಲೇಟ್‍ಗಳು, ಕಪ್‍ಗಳು, ಗ್ಲಾಸ್‍ಗಳು, ಕಟ್ಲರಿ ಚಮಚ, ಚಾಕು, ಸ್ಟ್ರಾ, ಟ್ರೇಗಳು, ಸಿಹಿ ತಿನಿಸುಗಳ ಬಾಕ್ಸ್ ಗಳ ಮೇಲಿನ ಹೊದಿಕೆ, ಆಹ್ವಾನ ಪತ್ರಿಕೆ ಮತ್ತು ಸಿಗರೇಟು ಪ್ಯಾಕೆಟ್, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು, ಸ್ಟಿಕ್ಕರ್ಸ್ ಗಳನ್ನು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಮೇಲ್ಕಂಡ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆ ಮಾಡುವವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಎಸ್ ಡೊಳ್ಳೆ ಅವರು ತಿಳಿಸಿದ್ದಾರೆ.