ನಮ್ ಜನರಿಗೆ ಸಾರ್ವಜನಿಕರ ಆಸ್ತಿ ಅಂದ್ರೇ, ತುಂಬಾ ಪ್ರೀತಿ ಜಾಸ್ತಿ ಅನ್ಸುತ್ತೆ… ಅಲ್ವಾ…!
ಯಾಕ್ ಈ ತರ ಹೇಳ್ತಾ ಇದೀನಿ ಅಂದ್ರೆ, ಸಾರ್ವಜನಿಕ ಸ್ಥಳಗಳಾದ ಸಾರ್ವಜನಿಕ ಶೌಚಾಲಯ, ಬಸ್ ಸ್ಟ್ಯಾಂಡ್ ಈ ಸ್ಥಳಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಾರೆ… ಏನಿದು ಕಲಾಕೃತಿ ಅಂತ ಯೋಚಿಸುತ್ತಿದ್ದೀರಾ…
ಅದೇನು ಅಂದ್ರೆ ನಮ್ ಜನಗಳಿಗೆ ಚೆನ್ನಾಗಿರುವ ಸ್ಥಳಗಳನ್ನು ನೋಡಿದ್ರೆ, ಅದನ್ನ ಹೇಗಾದರೂ ಹಾಳು ಮಾಡಬೇಕೆಂಬ ಮನಸ್ಥಿತಿಯೇನೋ, ಬಸ್ಟಾಂಡ್ ಗೋಡೆಗಳ ಮೇಲೆ ತಮ್ಮದೇ ಆದ ಕಲಾ ಕೃತಿಗಳನ್ನು ಚಿತ್ರಿಸಿರುತ್ತಾರೆ…
ಅಷ್ಟೇ ಅಲ್ಲ ಬಸ್ಟಾಂಡ್ ಗೋಡೆಗಳ ಮೇಲೆ ತಂಬಾಕಿನ ಉಗುಳುವಿಕೆಯ ನಾನಾ ಕಲಾಕೃತಿಗಳು ಮೂಡಿಬಂದಿರುತ್ತವೆ. ಕೆಲವು ಜನಗಳಿಗೊಂತು ತಮ್ಮ ದಲ್ಲದ ಸ್ಥಳಗಳ ಬಗ್ಗೆ ಒಂದು ಚೂರು ಕಾಳಜಿನೇ ಇರೋದಿಲ್ಲ ಅಲ್ವಾ…!
ತಮ್ಮ ಮನಸ್ಸಿಗೆ ಬಂದಂತೆ ಕಲಾಕೃತಿಗಳನ್ನು ಗೋಡೆ ಮೇಲೆ ಕೆತ್ತಿ ತಮ್ಮ ಪ್ರೇಮಕಹಾನಿಗಳನ್ನು ಬಿಂಬಿಸಿರುತ್ತಾರೆ. ಸಿಕ್ಕಿದ ಕಡೆ ಕಸ ಹಾಕುವುದು. ಸಿಕ್ಕ ಕಡೆ ಎಂದು ತಂಬಾಕನ್ನು ಉಗುಳುವುದು. ಇದೇ ಆಗಿ ಹೋಗಿದೆ…
ಸಾರ್ವಜನಿಕ ಬಸ್ ಸ್ಟ್ಯಾಂಡ್ ಗಳಂತೂ ಅಬ್ಬಬ್ಬಾ…!
ಒಮ್ಮೊಮ್ಮೆ ಅನ್ಸಿಬಿಡುತ್ತೆ, ಅದು ಬಸ್ಟ್ಯಾಂಡೋ ಅಥವಾ ಮೋರಿಗುಂಡಿಯೋ? ಅಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ನರಕ ಲೋಕದಲ್ಲಿ ಇದ್ದಿವೋ ಅಥವಾ ಶೌಚಾಲಯದಲ್ಲಿ ಇದ್ದಿವೋ ಒಂದು ಕ್ಷಣ ಯಾವುದು ತಿಳಿಯುವುದಿಲ್ಲ…
ಅಷ್ಟರಮಟ್ಟಿಗೆ ಜನರು ಕೊಳಕು ಮಾಡಿರುತ್ತಾರೆ. ಇದರಿಂದ ಇನ್ನೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತೆ ಅನ್ನುವ ಪರಿಜ್ಞಾನವೂ ಕೂಡ ಅವರಲ್ಲಿ ಇರೋದಿಲ್ಲ ಅನ್ಸುತ್ತೆ. ಅಷ್ಟರಮಟ್ಟಿಗೆ ಜನ ಸಾರ್ವಜನಿಕ ಸ್ಥಳಗಳ ಮೇಲೆ ಗೌರವ ತೋರಿಸುತ್ತಾರೆ ನೋಡಿ…
ಇನ್ಮೇಲಾದ್ರೂ ನಮ್ ಜನಗಳು ಸಾರ್ವಜನಿಕ ಆಸ್ತಿ ನಮ್ಮೆಲ್ಲರ ಆಸ್ತಿ ಎಂದು ಅರಿತು, ಸ್ವಚ್ಛತೆಗೆ ಸಹಕರಿಸಿ…
- ರಚನಾ.ಕೆ. ಆರ್