Wednesday, October 2, 2024
Wednesday, October 2, 2024

ಅಂಬೇಡ್ಕರ್ ಚಿಂತನೆಗಳನ್ನ ವಿಮರ್ಶಾತ್ಮಕವಾಗಿ ಅರ್ಥೈಸಬೇಕು- ಪ್ರೊ.ಚಿನ್ನಸ್ವಾಮಿ

Date:

ನಮ್ಮಲ್ಲಿರುವ ಅಜ್ಞಾನದಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಹೊತ್ತು ಮೆರೆಸಿದರೆ, ಸಂಜೆ ನಾವೇ ತಿಥಿ ಮಾಡುತ್ತಿದ್ದೇವೆ ಎಂದು ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ ವಿಷಾದಿಸಿದರು.

ಚಿಕ್ಕಮಗಳೂರಿನ ಭೀಮ್ ಆರ್ಮಿ ಹಾಗೂ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಆಜಾದ್ ವೃತ್ತದಲ್ಲಿ ಆಯೋಜಿಸಿದ್ದ ಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶತಶತಮಾನಗಳಿಂದ ಅಜ್ಞಾನದ ಅಂಧಕಾರದಲ್ಲಿ ಬಳಲುತ್ತಿದ್ದ ದೇಶದ ಜನರನ್ನು ಬೌದ್ದಿಕ,ತಾಂತ್ರಿಕ, ಸಾಂಸ್ಕೃಕವಾಗಿ ಜಾಗೃತಿಗೊಳಿಸಿದವರು ಡಾ.ಬಾಬಾ ಸಾಹೆಬ್ ಅಂಬೇಡ್ಕರ್ ಎಂದರು.

ರಾಜ ಮಹಾ ರಾಜರು ತಮ್ಮ ಆಯುಧಗಳ ಮೂಲಕ ರಾಜ್ಯಗಳನ್ನು ಕಟ್ಟಿದರೆ, ಬಾಬಾ ಸಾಹೇಬ್ ಅಂಭೇಡ್ಕರರು ತಮ್ಮ ಲೇಖನಿಯ ಮೂಲಕ ಭವ್ಯ ಭಾರತದ ಭವಿಷ್ಯವನ್ನೆ ಬದಲಾಯಿಸಿದ್ದರು ಎಂದರು.

ಮಹಾಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರವರು ಭಾರತದ ಭವಿಷ್ಯ ರೂಪಿಸಿದವರಲ್ಲಿ ಅಪ್ರತಿಮರಾಗಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಭಾರತಕ್ಕೆ ತನ್ನದೇ ಆದ ದೃಷ್ಟಿಕೋನವನ್ನು ನೀಡಿರುವಂತಹ ಅಂಬೇಡ್ಕರ ಆಲೋಚನಾ ಕ್ರಮಗಳನ್ನು ಪ್ರತಿಯೊಬ್ಬ ಭಾರತೀಯನ ಮನೆ-ಮನೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅವರ ಚಿಂತನೆಗಳ ಸಮಕಾಲೀನತೆಯನ್ನು ವಿಮರ್ಶಾತ್ಮಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಮೂಲಕ ಅಂಬೇಡ್ಕರವರನ್ನು ಅರ್ಥ ಮಾಡಿಕೊಳ್ಳಬೇಕು ಆಗ ಮಾತ್ರ ಅಂಬೇಡ್ಕರ್‌ರ ಈಗಿನ ಅವಶ್ಯಕತೆ ಏನು ಎಂಬುದು ಅರ್ಥವಾಗುತ್ತಿದೆ ಎಂದರು.

ವಿಚಾರ ಕ್ರಾಂತಿಗೆ ಒಳಪಟ್ಟು, ನಮ್ಮೊಳಗೆ ನಾವು ಮರುಹುಟ್ಟು ಪಡೆಯಬೇಕಾಗಿದೆ, ವಿಪ್ರರ ಪಾಂಡಿತ್ಯ ಮತ್ತು ವಿಚಾರಕ್ರಾಂತಿಯ ಮೂಲಕ ಶತ ಶತಮಾನಗಳ ಕಾಲ ಮಾನನೀಯರು ಮೇಲು-ಕೀಳು, ಮೌಢ್ಯ,ದಬ್ಬಾಳಿಕೆ, ಧಾರ್ಮಿಕ ಅಂಧಶ್ರದ್ಧೆಯನ್ನು ಮೆಟ್ಟಿ ನಿಂತು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬೇಕಾದ ಸರಕುಗಳನ್ನು ನೀಡಿದವರು ಬಾಬಾಸಾಹೇಬರು ಎಂದರು.

ಜಾತಿ, ಪ್ರಜ್ಞೆ ಇಲ್ಲದ ಸಮ ಸಮಾಜದ ಭಾರತವನ್ನು ಕಟ್ಟುವ ಕನಸನ್ನು ಹೊತ್ತಿದ್ದ ಮಹಾನಾಯಕ ಡಾ. ಅಂಬೇಡ್ಕರ್ ಡಿಸೆಂಬರ್ ೬ ರಂದು ಅಸಂಖ್ಯಾತ ದಲಿತ ದಮನಿತರನ್ನು ಆಗಲಿ ಪರಿನಿಬ್ಬಾಣ ಹೊಂದಿದರು. ದೈಹಿಕವಾಗಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಭಾರತದ ಎಲ್ಲಾ ಮಜಲುಗಳಲ್ಲೂ ತಮ್ಮ ಛಾವು ಮೂಡಿಸಿ, ಸ್ಪೂರ್ತಿಯಾಗಿರುವ ಬಾಬಾಸಾಹೇಬರನ್ನು ಅವರ ಸ್ಮರಣೆಯ ದಿನವನ್ನು ಸ್ಮರಿಸುವ ಭಾರತೀಯರಾದ ನಮ್ಮೆಲ್ಲರ ಕರ್ತವ್ಯ ಬಾಬಾ ಸಾಹೇಬರನ್ನು ಸ್ಮರಿಸೋಣ ಅವರು ತೋರಿದ ಮಾರ್ಗದಲ್ಲಿ ನಡೆಯೋಣ ಎಂದರು.

ಈ ವೇದಿಕೆಯಲ್ಲಿ ಭೀಮ್ ಆರ್ಮಿ ಗೌರವಾಧ್ಯಕ್ಷ, ಅಧ್ಯಕ್ಷ ಗಿರೀಶ್, ಹೊನ್ನೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬಿಎಸ್ಪಿ ಜಿಲ್ಲಾ ಸಂಚಾಲಕ ಕೆ.ಟಿ ರಾಧಾಕೃಷ್ಣ, ಮುಖಂಡರಾದ ಕೆ.ಭರತ್, ಗೌಸ್ ಮುನೀರ್ ಸೇರಿದಂತೆ ಹಲವರಿದ್ದರು.

ತಾಲ್ಲೂಕು ಕಚೇರಿ ಆವರಣದಿಂದ ಸಂಜೆ ಏಳು ಗಂಟೆ ಸುಮಾರಿಗೆ ವಿಧ್ಯಾರ್ಥಿಗಳು, ಸಾರ್ವಜನಿಕರನ್ನೊಳಗೊಂಡ ಬೃಹತ್ ಮೆರವಣಿಗೆ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಮೇಣದ ಬತ್ತಿಯ ಹಣತೆಯೊಂದಿಗೆ ಹೆಜ್ಜೆ ಹಾಕಿದರು.ಅಲಂಕೃತ ವಾಹನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ವನ್ನಿರಿಸಿ ಮೆರವಣಿಗೆ ಮಾಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...