Saturday, November 23, 2024
Saturday, November 23, 2024

ಜ್ಞಾನ ವಿಜ್ಞಾನ ಹಾಗೂ ಸೃಜನಶೀಲತೆ ಪರಸ್ಪರ ಹೊರತಾಗಿಲ್ಲ- ಹೊನ್ನಾಳಿ ಚಂದ್ರಶೇಖರ್

Date:

ಜೀವನದ ಅತ್ಯಂತ ಅಗತ್ಯದ, ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಎಲ್ಲಾ ಕ್ರಿಯೆಯೂ ಸೃಜನಶೀಲ ಅಭಿವ್ಯಕ್ತಿಯೇ ಆಗಿರುತ್ತದೆ. ಸಮಾಜದ ಚಟುವಟಿಕೆಗಳ ಎಲ್ಲಾ, ಸ್ತರಗಳಲ್ಲಿ ನಮ್ಮ ಸೃಜನಶೀಲತೆ ಅತಿ ಮುಖ್ಯವಾಗಿ ಗುರುತಿಸಿಕೊಳ್ಳುತ್ತದೆ. ಜ್ಞಾನ ವಿಜ್ಞಾನ ಹಾಗೂ ಸೃಜನಶೀಲತೆ ಒಂದಕ್ಕೊಂದು ಹೊರತಾಗಿಲ್ಲ, ಪೂರಕವಾಗಿವೆ. ಆದರೆ ಸೃಜನಶೀಲತೆ ಕಲಿಕೆಯಿಂದ ಬರುವಂತಹದಲ್ಲ. ಸ್ವ ಮನಸಿನ ವೈಯುಕ್ತಿಕವಾದ ಅಂಶಗಳಿಂದ ಹೊರಬರುತ್ತದೆ ಎಂದು ಕನ್ನಡ ಮೀಡಿಯಂ 24×7 ವಾಹಿನಿಯ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.

ಅವರು ಅನುಪಿನ ಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ರಂಗಭೂಮಿ, ಸಾಹಿತ್ಯ, ನಿರೂಪಣೆ, ಭಾಷಣ ಸೇರಿದಂತೆ ಎಲ್ಲಾ ಕಲಾತ್ಮಕ ಚಟುವಟಿಕೆಗಳಿಗೆ ಸೃಜನಶೀಲತೆ ಕಾರಣವಾಗಿದೆ. ಈ ಮೂರೂ ಅಂಶಗಳನ್ನು ಮುಂದಿಟ್ಟುಕೊಂಡು ಮಕ್ಕಳಲ್ಲಿ ಇರುವಂತಹ ಸೃಜನಶೀಲತೆಯನ್ನು ಗುರುತಿಸುವ ಇಂತಹ ಕಾರ್ಯಕ್ರಮ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.

ನಮ್ಮಲ್ಲಿ ನಾವು ಸೃಜನಶೀಲತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕಬೇಕಾಗಿದೆ ಎಂದು ಮಕ್ಕಳಿಗೆ ಕಥೆಯೊಂದರ ಮೂಲಕ ವಿವರಿಸಿದ ಅವರು ಸೃಜನಶೀಲ ಶಕ್ತಿ ನಮ್ಮಲ್ಲಿಯೇ ಇರುತ್ತದೆ. ಅದನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಅವರು, ಆಶೀರ್ವಚನದಲ್ಲಿ ಉತ್ಕೃಷ್ಟವಾದ ಯೋಚನೆಯಿಂದ ಮಾತ್ರ ಉತ್ತಮವಾದ ಸಾಧನೆ ಹಾಗೂ ಯಶಸ್ಸು ಗಳಿಸಲು ಸಾಧ್ಯ. ನಾವು ಕಷ್ಟಗಳು ಬಂದಾಗ ಅವುಗಳಿಗೆ ಬಗ್ಗದೆ ಅಲ್ಲಿಂದ ಹೊರಬಂದು ಹೊಸತನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.

ನಾನು ಕುರಿಯಲ್ಲ ಸಿಂಹ ಎಂಬ ಮನೋಭಾವ ನಮ್ಮಲ್ಲಿ ಬೆಳೆದಿರಬೇಕು. ನಾವು ಯಾವ ರೀತಿ ನಮ್ಮನ್ನು ಯೋಚಿಸಿಕೊಳ್ಳುತ್ತೇವೆ ಅಂದರೆ ಭಾವಿಸುತ್ತೇವೆಯೂ ಹಾಗೆಯೇ ನಮ್ಮತನ ರೂಪಿತಗೊಳ್ಳುತ್ತದೆ ಎಂದರು.

ನಾನು ಕಂಡಂತೆ ಇಡೀ ರಾಜ್ಯ ಹಾಗೂ ದೇಶವಿದೇಶಗಳಲ್ಲಿ ಆಧ್ಯಾತ್ಮದ ಜೊತೆ ವೈಜ್ಞಾನಿಕ ಕಲಿಕೆಗೆ ಆದ್ಯತೆ ನೀಡಿದ ರಾಮಕೃಷ್ಣ ವಸತಿ ಶಾಲೆಯ ಕಾರ್ಯಕ್ರಮಗಳು ವಿಶೇಷ. ಪಾಠ ಕಲಿಯುವಾಗ ಪಾದರಕ್ಷೆ ಧರಿಸದಿರುವುದು. ಪ್ರತಿದಿನ ಕನಿಷ್ಠ ಎರಡು-ಮೂರು ಬಾರಿ ಗುರುಹಿರಿಯರನ್ನು, ತಂದೆ-ತಾಯಿಯರನ್ನು ಗೌರವಿಸುವ ಪರಿಪಾಠ ಹೇಳಿಕೊಡಲಾಗುತ್ತದೆ. ನಂಬಿಕೆ, ಪ್ರೀತಿ, ವಿಶ್ವಾಸ ತುಂಬಿದ ಈ ಶಾಲೆ ಮಕ್ಕಳ ಮನದಲ್ಲಿರಬಹುದಾದ ಅಹಂಕಾರವನ್ನು ಹತ್ತಿಕ್ಕುತ್ತದೆ. ಅಹಂಕಾರ ಇಲ್ಲದವರಿಗೆ ಮಾತ್ರ ಜ್ಞಾನ ಬರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ. ಡಿ. ಆರ್. ನಾಗೇಶ್ ವಹಿಸಿದ್ದು, ಕಾರ್ಯಕ್ರಮದಲ್ಲಿ ತುಂಗಾತರಂಗ ದಿನಪತ್ರಿಕೆ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ಅಂತರಾಷ್ಟ್ರೀಯ ಸ್ಪೀಕರ್ ಹಾಗೂ ಲವ್ ಟ್ರಸ್ಟ್ ನ ಸಿ.ಇ.ಓ. ಇದ್ರಿಸ್ ಪಾಶಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳು ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಶಿಕ್ಷಕರಾದ ವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಹಾಗೂ ಇತರದಿದ್ದರು. ಸುಮಾರು ಮೂರು ಸಾವಿರದಷ್ಟು ಪ್ರಾತ್ಕಕ್ಷಿಕೆಗಳನ್ನು ಮಕ್ಕಳು ಪ್ರದರ್ಶಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...