Saturday, December 6, 2025
Saturday, December 6, 2025

ಹಳ್ಳಿಗಳಲ್ಲಿ ಮನೆ ಬಾಗಿಲಲ್ಲೆ ತೆರಿಗೆ ಪಾವತಿಗೆ ಮೊಬೈಲ್ ಆ್ಯಪ್ ಸಿದ್ಧವಾಗುತ್ತಿದೆ

Date:

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಪಾವತಿ ಇನ್ನು ಮುಂದೆ ಸುಲಭವಾಗಲಿದ್ದು, ಮನೆ ಬಾಗಿಲಲ್ಲೇ ತೆರಿಗೆ ಪಾವತಿಗೆ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚತಂತ್ರ ಮೊಬೈಲ್ ಆಪ್ ಸಿದ್ದಪಡಿಸುತ್ತಿದ್ದು, ಶೀಘ್ರದಲ್ಲಿಯೇ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ.

ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮತ್ತು ಎಲ್ಲಾ ಆಸ್ತಿಗಳಿಗೂ ಇದರಲ್ಲಿ ನಿಖರವಾದ ತೆರಿಗೆ ಮಾಹಿತಿ ಒಳಗೊಳ್ಳುವುದರಿಂದ ಹಾಗೂ ಉತ್ತರದಾಯಿತ್ವ ಕಾಪಾಡುವ ಉದ್ದೇಶದಿಂದ ಪಂಚತಂತ್ರ ಮೊಬೈಲ್ ಆಪ್ ಸಿದ್ಧಪಡಿಸಲಾಗುತ್ತಿದೆ.

ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಗೆ ಬರುವ ಆಸ್ತಿ, ಎಷ್ಟು ತೆರಿಗೆ ವಿಧಿಸಬೇಕು, ಕಟ್ಟಡ, ಖಾಲಿ ನಿವೇಶನ, ಆಯಕಟ್ಟಿನ ಜಾಗ, ಮೌಲ್ಯ ಮತ್ತು ಬಳಕೆಗೆ ತಕ್ಕಂತೆ ಎಲ್ಲಾ ಆಸ್ತಿಗಳಿಗೂ ತೆರಿಗೆ ದರದ ನಿಖರವಾದ ಮಾಹಿತಿ ಇದರಲ್ಲಿ ಇರಲಿದೆ.

ಜನತೆಗೆ ಗೊಂದಲವಿಲ್ಲದಂತೆ ತೆರಿಗೆ ಪಾವತಿಸಲು ಅನುಕೂಲವಾಗಲಿದ್ದು, ಆನ್ಲೈನ್ ನಲ್ಲಿ ತೆರಿಗೆ ಪಾವತಿಸಬಹುದು. ಡೆಬಿಟ್ ಕಾರ್ಡ್ ಸ್ವೈಪ್ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಪಿಒಎಸ್ ಯಂತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಶೀದಿ ಕೂಡ ಸಿಗಲಿದ್ದು, ಮೊಬೈಲ್ ಗೆ ಮೆಸೇಜ್ ರವಾನೆ ಸೌಲಭ್ಯವೂ ಇರಲಿದೆ. ರಾಜ್ಯದ 5659 ಗ್ರಾಮ ಪಂಚಾಯಿತಿಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...