ಜಾಗತಿಕ ಆರ್ಥಿಕತೆಯು ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಬಹುದು, ಆದ್ದರಿಂದ ಕಠಿಣ ಹಣಕಾಸು ನೀತಿಯನ್ನ ಅಳವಡಿಸಿಕೊಳ್ಳುವ ಕೇಂದ್ರೀಯ ಬ್ಯಾಂಕುಗಳು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದರು.
ಬ್ಯಾಂಕ್ ಆಫ್ ಥೈಲ್ಯಾಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಲು ನಾವು ಸಿದ್ಧರಾಗಿರಬೇಕು’ ಎಂದರು.
ಕೇಂದ್ರೀಯ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸೋಮವಾರ ಸಭೆ ಸೇರಿ ಹಣಕಾಸು ನೀತಿಯನ್ನ ಪ್ರಕಟಿಸಲಿರುವ ಸಮಯದಲ್ಲಿಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವ್ರಿಂದ ಈ ಹೇಳಿಕೆ ಬಂದಿದೆ.
ಕೇಂದ್ರೀಯ ಬ್ಯಾಂಕುಗಳು ಆಲೋಚಿಸುವ ಅಗತ್ಯವಿದೆ: ರಘುರಾಮ್ ರಾಜನ್
ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್’ನ ಹಣಕಾಸು ಪ್ರಾಧ್ಯಾಪಕರಾಗಿರುವ ರಾಜನ್, ಹಣದುಬ್ಬರವು ಕೆಳಮಟ್ಟದಿಂದ ಗರಿಷ್ಠ ಮಟ್ಟಕ್ಕೆ ಸಾಗಿದಾಗ ಕೇಂದ್ರೀಯ ಬ್ಯಾಂಕುಗಳು ತಮ್ಮ ನೀತಿಗಳು ತುಂಬಾ ವೇಗವಾಗಿವೆಯೇ ಎಂದು ತಮ್ಮನ್ನ ತಾವು ಕೇಳಿಕೊಳ್ಳಬೇಕು ಎಂದು ಹೇಳಿದರು. ‘ನಮ್ಮನ್ನು ಏಕೆ ಒತ್ತಾಯಿಸಲಾಯಿತು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ’ ಎಂದು ರಾಜನ್ ಹೇಳಿದರು.
ಹಣದುಬ್ಬರ ಹೆಚ್ಚಳವನ್ನು ಗುರುತಿಸಲು ನಮಗೆ ಸಾಧ್ಯವಾಗದಿದ್ದರೆ ಮುಂದಿನ ಬಾರಿ ಅಂತಹ ಪರಿಸ್ಥಿತಿಗೆ ಸಿದ್ಧರಾಗಬೇಕೇ ಎಂದು ನಾವು ಮೌಲ್ಯಮಾಪನ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.