ಪ್ರಪಂಚದಾದ್ಯಂತ ಯುಕೆಯನ್ನು ಟೆಕ್ ದೈತ್ಯನನ್ನಾಗಿ ಮಾಡಲು ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕೆಲಸ ಮಾಡುವ ವಿಶ್ವದ 100 ಅತ್ಯುತ್ತಮ ಯುವ ವೃತ್ತಿಪರರಿಗೆ ಹೊಸ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸುನಕ್ AI ನಲ್ಲಿ ವಿಶ್ವದ ಅಗ್ರ 100 ಯುವ ಪ್ರತಿಭೆಗಳನ್ನು ಅನ್ವೇಷಿಸಲು ಮತ್ತು ನೇಮಕ ಮಾಡಿಕೊಳ್ಳಲು ಯುಕೆ ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸಮ್ಮೇಳನದಲ್ಲಿ ಮಾತನಾಡಿದ ಸುನಕ್ ಬ್ರೆಕ್ಸಿಟ್ ನಂತರದ ವಲಸೆ ನೀತಿಯ ಮೇಲೆ ನಿಯಂತ್ರಣವು ನಿರ್ಣಾಯಕವಾಗಿದೆ ಎಂದು ತಿಳಿಸಿದರು. ವ್ಯಾಪಾರ ಮಾಲೀಕರು ಮತ್ತು ಹೆಚ್ಚು ಪ್ರತಿಭಾವಂತ ವ್ಯಕ್ತಿಗಳಿಗಾಗಿ ವಿಶ್ವದ ಅತ್ಯಂತ ಆಕರ್ಷಕ ವಲಸೆ ಕಾರ್ಯಕ್ರಮಗಳಲ್ಲಿ ಒಂದನ್ನು ಸ್ಥಾಪಿಸುವುದಾಗಿ ಸುನಕ್ ಭರವಸೆ ನೀಡಿದ್ದಾರೆ.
ಬ್ರೆಕ್ಸಿಟ್ ಸ್ವಾತಂತ್ರ್ಯಗಳನ್ನ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾತುಕತೆ ಮಾಡಲು ಬಳಸುವುದಾಗಿ ಭರವಸೆ ನೀಡಿದ್ದಾರೆ.
ಯುಕೆ ಪ್ರಸ್ತುತ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸುತ್ತಿದೆ. ಅದನ್ನು ಸಂಸತ್ತಿನ ಮುಂದೆ ಆದಷ್ಟು ಬೇಗ ಒಪ್ಪಿಸುವುದಾಗಿ ಹೇಳಿದ್ದಾರೆ.